ಪ್ರಪಂಚವನ್ನೇ ಎದುರು ಹಾಕಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ವಿಚಾರದಲ್ಲಿ ಸೈಲೆಂಟ್?
ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಮಯ ಅದು, ಆಗ ನೋಡ ನೋಡುತ್ತಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೆ ಟ್ರಂಪ್ ಅವರ ಕಿರಿಕ್ ದೊಡ್ಡದಾಗಿತ್ತು. ಹೀಗೆ ನೋಡ ನೋಡುತ್ತಲೇ ಟ್ರಂಪ್ ಮತ್ತು ಕಿಮ್ ಕಿತ್ತಾಡಿಕೊಂಡು ಪರಮಾಣು ದಾಳಿಯ ಎಚ್ಚರಿಕೆಯನ್ನು ನೀಡಿದ್ದರು. ಪರಸ್ಪರ ಇಬ್ಬರೂ ಪರಮಾಣು ಬಾಂಬ್ ದಾಳಿ ಮಾಡುವ ಬಗ್ಗೆ ಹಾಗೂ ನ್ಯೂಕ್ಲಿಯರ್ ಕ್ಷಿಪಣಿ ಲಾಂಚ್ ಮಾಡಲು ಒಂದು ಬಟನ್ ಸಾಕು ಎಂದೆಲ್ಲಾ ಹೇಳುತ್ತಾ ಕಿತ್ತಾಡಿದ್ದರು. ಆದರೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ 1 ವರ್ಷ ಕಳೆದಿದೆ. ಆದರೆ ಕಿಮ್ ಬಗ್ಗೆ ಅಥವಾ ಉತ್ತರ ಕೊರಿಯಾದ ಬಗ್ಗೆ ಮಾತಾಡಿಲ್ಲ ಏಕೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಗೆ ಅಂದ್ರೆ ತಮ್ಮನ್ನು ಎದುರು ಹಾಕಿಕೊಳ್ಳುವ ಯಾವುದೇ ದೇಶ ಅಥವಾ ನಾಯಕರನ್ನು ಸೈಲೆಂಟ್ ಆಗುವಂತೆ ಮಾಡುತ್ತಾರೆ. ಅದರಲ್ಲೂ ವೆನಿಜುವೆಲಾ ಪರಿಸ್ಥಿತಿ ನಮಗೆ ಒಂದು ದೊಡ್ಡ ಉದಾಹರಣೆ ಆಗಿದ್ದು, ಇರಾನ್ ವಿಚಾರದಲ್ಲಿ ಕೂಡ ಟ್ರಂಪ್ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಗಮನ ಸೆಳೆದಿದ್ದರು. ಆದರೆ ಉತ್ತರ ಕೊರಿಯಾ ವಿಚಾರದಲ್ಲಿ ಟ್ರಂಪ್ ಅವರು ಈಗ ಸೈಲೆಂಟ್ ಆಗಿರುವುದು ಏಕೆ? ಎಂಬ ಪ್ರಶ್ನೆ ಮೂಡಿದೆ. ಅದರಲ್ಲೂ ಕಿಮ್ ಜಾಂಗ್ ಉನ್ ಈಗಲೂ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದು, ಇಷ್ಟಾದರೂ ಅತ್ತ ಟ್ರಂಪ್ ಮಾತ್ರ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡದೆ ಶಾಂತವಾಗಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಪರಮಾಣು ಬಾಂಬ್ ಇರುವುದಕ್ಕೆ ಭಯ?
ಹೌದು, ಉತ್ತರ ಕೊರಿಯಾ ಪರಮಾಣು ಬಾಂಬ್ ಹೊಂದಿರುವ ದೇಶವಾಗಿದೆ. ಈ ಕಾರಣಕ್ಕೆ ಉತ್ತರ ಕೊರಿಯಾ ತಂಟೆಗೆ ಟ್ರಂಪ್ ಹೋಗುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಅಮೆರಿಕ ಬಳಿ ಕೂಡ ಪರಮಾಣು ಅಸ್ತ್ರಗಳು ಇದ್ದು, ಈ ವಿಚಾರದಲ್ಲಿ ಯಾಕೆ ಸೈಲೆಂಟ್ ಆಗಿದ್ದಾರೆ ಟ್ರಂಪ್ ಅವರು? ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದೆಲ್ಲವನ್ನೂ ಮೀರಿ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಒಂದು ಬಾರಿ ಭೇಟಿಯಾದ ನಂತರ ಉತ್ತಮ ಸ್ನೇಹಿತರಾಗಿದ್ದಾರಂತೆ. ಇದೇ ಕಾರಣಕ್ಕೆ ಕಿಮ್ ಕುರಿತು ಟ್ರಂಪ್ ಅವರು ಮಾತನಾಡುತ್ತಿಲ್ಲ ಎಂಬ ಆರೋಪ ಕೂಡ ಇದೆ.
ಸರ್ವಾಧಿಕಾರಿ ಕೈಯಲ್ಲಿದೆ ಉತ್ತರ ಕೊರಿಯಾ
ಉತ್ತರ ಕೊರಿಯಾ ದೇಶದಲ್ಲಿ ಬಡತನ ಜಾಸ್ತಿ, ಜನರಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಇವೆ. ಹೀಗೆಲ್ಲಾ ಇದ್ದರೂ ಉತ್ತರ ಕೊರಿಯಾ ಜನ ಮಾತ್ರ ತಮ್ಮ ನಾಯಕನ ಬದಲಾವಣೆ ಮಾಡಲು ಆಗುವುದಿಲ್ಲ. ಏಕೆಂದರೆ ಅಲ್ಲಿ ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಆಡಳಿತ ಇದ್ದು, ಕಿಮ್ ಕುಟುಂಬ ಸದಸ್ಯರು ವಂಶದಿಂದ ಬಳುವಳಿಯಾಗಿ ಬಂದ ರೀತಿ ಉತ್ತರ ಕೊರಿಯಾ ದೇಶವನ್ನು ಆಳುತ್ತಿದ್ದಾರೆ. ಇಷ್ಟೆಲ್ಲಾ ಇದ್ರೂ ಟ್ರಂಪ್ ಅವರ ಮೌನ ದೊಡ್ಡ ಚರ್ಚೆಗೆ ವೇದಿಕೆ ಒದಗಿಸುತ್ತಿದೆ.












Click it and Unblock the Notifications