Donald Trump: ಇರಾನ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಡೊನಾಲ್ಡ್ ಟ್ರಂಪ್, ಪರಮಾಣು ಒಪ್ಪಂದಕ್ಕೆ ಒತ್ತಾಯ

ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ತಿಕ್ಕಾಟ ಮತ್ತೊಂದು ಹಂತ ತಲುಪುತ್ತಿದೆ, ಇರಾನ್ ಗಡಿ ಭಾಗಕ್ಕೆ ಬಂದು ನಿಂತಿರುವ ಅಮೆರಿಕದ ಯುದ್ಧ ನೌಕೆ ಹಾಗೂ ಯುದ್ಧ ವಿಮಾನಗಳು ದಾಳಿಗೆ ಸಜ್ಜಾಗಿವೆ. ಇದನ್ನು ಕಂಡು ಇರಾನ್ ಕೂಡ ಬೆಚ್ಚಿಬಿದ್ದು ಯುದ್ಧಕ್ಕೆ ಬೇಕಾದ ಪೂರ್ವ ತಯಾರಿಗಳ ಶುರು ಮಾಡಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯ ದೇಶಗಳು ಕೂಡ ಇರಾನ್ ಮತ್ತು ಅಮೆರಿಕ ಯುದ್ಧ ತಪ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿವೆ. ಇಂತಹ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್‌ಗೆ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇರಾನ್ ಮಧ್ಯಪ್ರಾಚ್ಯ ಭಾಗದಲ್ಲಿ ಪ್ರಬಲ ದೇಶವಾಗಿದ್ದು, ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ಶತ್ರು. ಹೀಗಿದ್ದಾಗ ಪದೇ ಪದೇ ಇರಾನ್ ಮತ್ತು ಇಸ್ರೇಲ್ ನಡುವೆ ಕಿರಿಕ್ ಆಗುತ್ತಲೇ ಇದೆ. ಅಮೆರಿಕ ಇದೇ ವಿಚಾರಕ್ಕೆ ಇರಾನ್‌ಗೆ ಎಚ್ಚರಿಕೆ ಕೊಟ್ಟರೂ ಅದಕ್ಕೆ ಇರಾನ್ ಬಗ್ಗುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಇದ್ದರೆ ಅದು ಮುಂದೆ ತಮಗೆ ಆಗುವ ಹಿನ್ನಡೆ ಎಂದು ಗಟ್ಟಿ ನಿರ್ಧಾರ ಕೈಗೊಂಡಿರುವ ಅಮೆರಿಕ, ಇರಾನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಈ ಸಮಯದಲ್ಲೇ ಪರಮಾಣು ವಿಚಾರದಲ್ಲಿ ಕೂಡ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದು, ಇರಾನ್ ಕೂಡಲೇ ಬಂದು ಒಪ್ಪಂದ ಮಾಡಿಕೊಳ್ಳದೇ ಇದ್ದರೆ ಪರಿಣಾಮ ನೆಟ್ಟಗೆ ಇರಲ್ಲ ಎಂದಿದ್ದಾರೆ.

Donald Trump

ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

ಡೊನಾಲ್ಡ್ ಟ್ರಂಪ್ ಅವರು ಇರಾನ್ ನಾಯಕರಿಗೆ ಎಚ್ಚರಿಕೆ ನೀಡುವ ಸಂದೇಶ ಒಂದನ್ನು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಅಮೆರಿಕ ಜೊತೆಗೆ ತಕ್ಷಣ ಒಪ್ಪಂದ ಮಾಡಿಕೊಳ್ಳಿ ಅಥವಾ ಕಳೆದ ಬಾರಿಗಿಂತ ದೊಡ್ಡದಾದ ಮಿಲಿಟರಿ ದಾಳಿ ಎದುರಿಸಲು ಸಜ್ಜಾಗಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆ ಬಗ್ಗೆ ಕೂಡ ಪಸ್ತಾಪಿಸಿ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿರುವ ಟ್ರಂಪ್ ಅವರು, ನಾವು ಸಿದ್ಧವಾಗಿ ನಿಂತಿದ್ದೇವೆ ಹಾಗೂ ಅಗತ್ಯತೆ ಇದ್ದರೆ ದೊಡ್ಡ ಮಟ್ಟದ ಕಾರ್ಯಾಚರಣೆ ಖಚಿತ ಎಂದಿದ್ದಾರೆ. ಅಲ್ಲದೆ ಇರಾನ್ ಆದಷ್ಟು ಬೇಗ ಈ ವಿಚಾರದಲ್ಲಿ ಬಂದು ಕೂತ ನಮ್ಮ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡೊನಾಲ್ಡ್ ಟ್ರಂಪ್ ಅವರು.

ಇರಾನ್ ಬಗ್ಗದು, ಅಮೆರಿಕ ಬಿಡದು!

ಹೀಗಿದ್ದಾಗ ಅಮೆರಿಕದ ಎಚ್ಚರಿಕೆಗೆ ಕೂಡ ಕೇರ್ ಮಾಡದ ರೀತಿ ಇದೀಗ ಇರಾನ್ ವರ್ತಿಸುತ್ತಿದೆ. ಇದೀಗ ದಾಳಿ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಕೇರ್ ಮಾಡದ ಇರಾನ್, ತನ್ನ ಮೇಲೆ ದಾಳಿ ಮಾಡಿದರೆ ಅದು ಯುದ್ಧ ಎಂದು ಪರಿಗಣಿಸಿ ನಾವು ಮರುದಾಳಿ ಮಾಡುತ್ತೇವೆ ಎಂದಿದೆ ಇರಾನ್. ಈ ಮೂಲಕ ಮತ್ತೆ ಅಮೆರಿಕ ಹಾಗೂ ಇರಾನ್ ದೊಡ್ಡ ಮಟ್ಟದಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ರೀತಿ ಭಾಸವಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಆತಂಕ ಪದೇ ಪದೇ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+