Donald Trump: ಅಮೆರಿಕದ ಜೊತೆ ರಾಜಿ ಮಾಡಿಕೊಳ್ಳಲು ಮುಂದಾದ ಇರಾನ್, ಟ್ರಂಪ್ ಹೇಳಿಕೆಯಿಂದ ತಲ್ಲಣ

ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಿ, ಮುಂದೆ ಪರಮಾಣು ಅಸ್ತ್ರಗಳ ಬಳಕೆ ಮಾಡುವ ಮಟ್ಟಿಗೆ ಪರಿಸ್ಥಿತಿ ಹಾಳಾಗಲಿದೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಆದರೆ ಏಕಾಏಕಿ ಅಮೆರಿಕ ಕೂಡ ಇರಾನ್ ವಿರುದ್ಧ ಯುದ್ಧ ಮಾಡದೇ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಶಾಂತಿ ಮಾತುಕತೆ ಮೂಲಕ ರಾಜಿ ಮಾಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಹಲವು ಸುತ್ತಿನಲ್ಲಿ ಅಮೆರಿಕ ಮತ್ತು ಇರಾನ್ ಬಡಿದಾಡಿದ್ದು, ಕಳೆದ ವರ್ಷ ಕೂಡ ಸಣ್ಣ ಪ್ರಮಾಣದ ಯುದ್ಧ ಮಾಡಿದ್ದರು. ಆದರೆ ಈ ಬಾರಿ ಯಾಕೋ ಇಡೀ ಮಧ್ಯಪ್ರಾಚ್ಯ ಭಾಗ ನಡುಗಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಡೊನಾಲ್ಡ್ ಟ್ರಂಪ್ ಅವರು ಇದೀಗ ನೀಡಿರುವ ಹೇಳಿಕೆ ಪ್ರಕಾರ, ಅಮೆರಿಕ ಸೇನೆಯ ಶಕ್ತಿಯನ್ನು ಕಂಡಿರುವ ಇರಾನ್ ಮೊದಲು ರಾಜಿ ಮಾಡಿಕೊಳ್ಳಲು ಚಿಂತೆ ಮಾಡುತ್ತಿದೆ. ಅಲ್ಲದೆ ಅಮೆರಿಕದ ಜೊತೆಗೆ ಶಾಂತಿ ಮಾರ್ಗದಲ್ಲಿ ಮುನ್ನಡೆಯಲು ಇರಾನ್ ಸಜ್ಜಾಗಿದೆ ಎಂದಿದ್ದಾರೆ. ಈ ಮೂಲಕ, ಇರಾನ್ ಮೇಲೆ ಅಮೆರಿಕ ದಿಢೀರ್ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲ ಎಂಬ ಮುನ್ಸೂಚನೆ ಕೂಡ ಕೊಟ್ಟಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು. ಈಗಾಗಲೇ ಇರಾನ್ ಸಮುದ್ರ ತೀರದಲ್ಲಿ ಅಮೆರಿಕ ಸೇನೆಯ ಬೃಹತ್ ಯುದ್ಧ ಹಡಗು ಬಂದು ನಿಂತಿದೆ.

Donald Trump

ಅಮೆರಿಕ ಜೊತೆಗೆ ಇರಾನ್ ಮಾತುಕತೆ?

ಪದೇ ಪದೇ ಇರಾನ್ ಮತ್ತು ಅಮೆರಿಕ ನಡುವೆ ಕಿರಿಕ್ ನಡೆಯುತ್ತಿತ್ತು. ಆದರೆ ಈ ಬಾರಿ ಇದೇ ಕಿರಿಕ್ ದೊಡ್ಡ ಮಟ್ಟಕ್ಕೆ ತಲುಪಿದೆ. ಇರಾನ್ ನಾಯಕರನ್ನು ಹೇಗಾದರೂ ಮಾಡಿ ತಮ್ಮ ದಾರಿಗೆ ತರಬೇಕು ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮಾಸ್ಟರ್ ಪ್ಲಾನ್. ಇದೇ ಕಾರಣಕ್ಕೆ ತೆಹ್ರಾನ್ ವಿಚಾರವಾಗಿ ಮಾತನಾಡುತ್ತಾ, ಈ ಸಮಯದಲ್ಲೇ ವೆನಿಜುವೆಲಾದ ಅಧ್ಯಕ್ಷನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್.

ಇರಾನ್ ಬಳಿ ಇರುವ ಅಮೆರಿಕ ನೌಕಾಪಡೆ ನೌಕೆಗಳು & ಯುದ್ಧ ವಿಮಾನಗಳು, ವೆನೆಜುವೆಲಾ ನಾಯಕನ ವಿರುದ್ಧ ಅಮೆರಿಕ ನಡೆಸಿದ್ದ ಕಾರ್ಯಾಚರಣೆಗಿಂತಲೂ ದೊಡ್ಡದಾಗಿದೆ. ಹೀಗಾಗಿ ಇರಾನ್ ನಮ್ಮ ಜೊತೆಗೆ ಶಾಂತಿ ಒಪ್ಪಂದ ನಡೆಸಲು ಮಾತುಕತೆಗೆ ಸಿದ್ಧವಾಗಿದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷರು. ಹೀಗಿದ್ಧಾಗ ಅತ್ತ ಮಧ್ಯಪ್ರಾಚ್ಯ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವಾಗ ಯುದ್ಧ ಭುಗಿಲೇಳುತ್ತೋ? ಎಂಬ ಚರ್ಚೆ ಕೂಡ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+