US- Pak Trade Deal: ಪಾಕಿಸ್ತಾನದ ತೈಲ ನಿಕ್ಷೇಪ ಅಭಿವೃದ್ಧಿಗೆ ಅಮೆರಿಕ ಒಪ್ಪಂದ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಜುಲೈ 31: ಪಾಕಿಸ್ತಾನದ ಭಾರೀ ತೈಲ ನಿಕ್ಷೇಪಗಳು ಒಪ್ಪಂದಕ್ಕೆ ಅಮೆರಿಕ ಸಹಿ ಮಾಡಿದೆ. ಕಂಪನಿಯ ಆಯ್ಕೆಯು ಪ್ರಗತಿಯಲ್ಲಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಾಹಿತಿ ನೀಡಿದ್ದಾರೆ. ಈ ಒಪ್ಪಂದ ಬಳಿಕ ಪಾಕಿಸ್ತಾನವು ಭವಿಷ್ಯದಲ್ಲಿ ಭಾರತಕ್ಕೆ ತೈಲ ರಫ್ತು ಮಾಡಲೂ ಸಾಧ್ಯವಾಗಬಹುದು ಎಂದು ಅವರು ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ಈ ಒಪ್ಪಂದದ ಬಗ್ಗೆ ಜಾಗತಿಕವಾಗಿ ಚರ್ಚೆಗಳು ಆಗುತ್ತಿವೆ.
ಪಾಕಿಸ್ತಾನ ಮತ್ತು ಯುನೈಟೆಡ್ ಸ್ಟೇಟ್ಸ್ ಒಟ್ಟಾಗಿ ಆ ದೇಶದ ಬೃಹತ್ ತೈಲ ನಿಕ್ಷೇಪ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿವೆ. ಎರಡು ದೇಶ ಸಹಭಾಗಿತ್ವ ಇದಾಗಿದೆ. ಆದರೆ ಯಾವ ತೈಲ ಕಂಪನಿಯ ನೇತೃತ್ವ ವಹಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕೃತ ಮಾಹಿತಿಯನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಅಮೆರಿಕಾದ ಈ ತೈಲ ಒಪ್ಪಂದ ನಿರ್ಧಾರವು ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ರಷ್ಯಾದೊಂದಿಗೆ ಹೊಂದಿರುವ ಸಂಬಂಧಗಳನ್ನು ಮುಂದುವರೆಸುತ್ತಿರುವ ಸಂದರ್ಭದಲ್ಲೆ ಹೊರ ಬಿದ್ದಿದೆ. ಪಾಕಿಸ್ತಾನ ಮಾತ್ರವಲ್ಲದೇ ವ್ಯಾಪಾರ ಸಂಬಂಧಕ್ಕಾಗಿ ಇತರ ಅನೇಕ ದೇಶಗಳ ನಾಯಕರು, ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆಯೇ ಟ್ರಂಪ್ ಭಾರತದ ಮೇಲೆ ಶೇಕಡಾ 25ರಷ್ಟು ಆಮದು ಸುಂಕ, ಹೆಚ್ಚುವರಿ ದಂಡ ವಿಧಿಸಿತ್ತು. ಸದ್ಯ ಅಮೆರಿಕ ಕೆಲವು ದೇಶಗಳಿಗೆ ಸುಂಕ ರಿಯಾಯಿತಿ ನೀಡುವ ಆಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ.
ಸುಂಕ ನೀತಿ ಕಡಿಮೆಗೆ ಪ್ರಸ್ತಾವನೆ: ಟ್ರಂಪ್
ನಿತ್ಯವು ಶ್ವೇತಭವನದಲ್ಲಿ ವ್ಯಾಪಾರ ಒಪ್ಪಂದಗಳ ಕುರಿತು ಕಾರ್ಯ ಚಟುವಟಿಕೆಗಳು ಯುಎಸ್ ಸರ್ಕಾರದ ನಡೆಯುತ್ತಿವೆ. ಈಗಾಗಲೇ ಅನೇಕ ದೇಶಗಳ ನಾಯಕರೊಂದಿಗೆ ಟ್ರಂಪ್ ಚರ್ಚಿಸಿದ್ದಾರೆ. ಬೇರೆಲ್ಲ ದೇಶಗಳು ವಿಶ್ವದ ದೊಡ್ಡಣ್ಣ ಅಮೆರಿಕಾ ಜೊತೆಗೆ ಕೈ ಜೋಡಿಸಲು ಬಯಸುತ್ತಿವೆ. ದಕ್ಷಿಣ ಕೊರಿಯಾ ಶೇಕಡಾ 25ರಷ್ಟು ಸುಂಕದ ಅಡಿಯಲ್ಲಿದೆ. ಸದ್ಯ ತನ್ನ ಮೇಲಿನ ಸುಂಕ ತೆರವುಗೊಳಿಸುವಂತೆ ಪ್ರಸ್ತಾವನೆ ನೀಡಿದೆ. ಇತರ ದೇಶಗಳೂ ಸುಂಕ ಕಡಿತಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದಷ್ಟು ಶೀಘ್ರವೇ ಸುಂಕ ನೀತಿ ಕುರಿತು ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಯುಎಸ್ ವ್ಯಾಪಾರ ಕೊರತೆ ನೀಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications