Russia & Ukraine War: ರಷ್ಯಾ ಅಧ್ಯಕ್ಷ ಪುಟಿನ್ & ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ?
ಅಮೆರಿಕ & ರಷ್ಯಾ ನಡುವೆ ಇದೀಗ ಸ್ನೇಹ ಬೆಳೆಯುತ್ತಿದ್ದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವಾತಾವರಣ ಬದಲಾವಣೆ ಆಗುತ್ತಿದೆ. ಒಂದು ಕಡೆ ಅಮೆರಿಕ ಯುದ್ಧ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದು, ಇದೇ ನೆಪದಲ್ಲಿ ರಷ್ಯಾ ಜೊತೆಗೆ ಸಂಬಂಧ ಬಲಪಡಿಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗಾಗಲೇ ಹಲವು ಬಾರಿ ಫೋನ್ ಕಾಲ್ ಮಾಡಿದ್ದಾರೆ. ಇಂತಹ ಸಮಯದಲ್ಲೇ ಇಬ್ಬರ ಭೇಟಿಗೆ ಕೂಡ ಮುಹೂರ್ತ ಫಿಕ್ಸ್ ಆಗಿದೆ.
ಟ್ರಂಪ್ & ಪುಟಿನ್ ಮೊದಲಿನಿಂದಲೂ ಉತ್ತಮ ಸ್ನೇಹವನ್ನ ಉಳಿಸಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ 2016 ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನ ಪಡೆದಾಗ ಪುಟಿನ್ & ಟ್ರಂಪ್ ಭೇಟಿ ಆಗಿದ್ದರು. ಅಲ್ಲದೆ ಇಬ್ಬರ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿತ್ತು. ಇದೀಗ ಮತ್ತೊಮ್ಮೆ 2020 ರಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಬೀಗಿದ್ದು, ಮತ್ತೊಮ್ಮೆ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಹೀಗಾಗಿಯೇ ಉಕ್ರೇನ್ & ರಷ್ಯಾ ಯುದ್ಧ ಸಮಯದಲ್ಲಿ ಇಬ್ಬರೂ ಭೇಟಿ ಆಗಲಿದ್ದಾರೆ ಎಂಬ ಸುದ್ದಿ ದಿಢೀರ್ ಹಬ್ಬಿದೆ.

ಸೌದಿ ಅರೇಬಿಯಾದಲ್ಲಿ ಇಬ್ಬರ ಭೇಟಿ?
ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಸೌದಿ ಅರೇಬಿಯಾದಲ್ಲಿ ಮಹತ್ವದ ಸಭೆ ಆಯೋಜನೆ ಮಾಡಲಾಗಿದೆ. ಹೀಗಾಗಿ ಈ ಸಭೆಗೆ ಪುಟಿನ್ & ಟ್ರಂಪ್ ಆಗಮಿಸಲಿದ್ದು, ಇಲ್ಲೇ ಇಬ್ಬರೂ ಭೇಟಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಪುಟಿನ್ & ಟ್ರಂಪ್ ಸಭೆಗೆ ಬೇಕಾದ ಸಿದ್ಧತೆಗಳನ್ನ ಕೂಡ ಈಗ ನಡೆಸಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇಬ್ಬರೂ ಭೇಟಿ ಮಾಡಿದರೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ. ಹಾಗೇ ಆರ್ಥಿಕವಾಗಿ ಎರಡು ಬಲಶಾಲಿ ದೇಶಗಳ ಭೇಟಿ ಕುತೂಹಲ ಕೆರಳಿಸಿದೆ.












Click it and Unblock the Notifications