ಭಾರತ ಮೂಲದ ಅಮೆರಿಕನ್ ಮತದಾರ ಪ್ರಭುಗಳ ಗುನ್ನಾ: ಡೊನಾಲ್ಡ್ ಟ್ರಂಪ್‌ಗೆ ಶುರುವಾಯ್ತಾ ನಡುಕ?

ಭಾರತ ಮೂಲದ ಜನಗಳು ಜಗತ್ತಿನ ಪ್ರತಿಯೊಂದು ದೇಶದಲ್ಲೂ ವಾಸ ಮಾಡುತ್ತಿದ್ದಾರೆ. ಈ ಪೈಕಿ ಅಮೆರಿಕದಲ್ಲಿ ಕೂಡ ಕೋಟ್ಯಂತರ ಭಾರತ ಮೂಲದ ಜನರು ವಾಸ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಇವತ್ತು ಅಕ್ಷರಶಃ ಬೆವತು ಹೋಗಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಸೋಲು ಪಕ್ಕ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಮಾತು ಇದೀಗ ಕೇಳಿ ಬಂದಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಕೈಬಿಟ್ಟರಾ ಭಾರತ ಮೂಲದ ಅಮೆರಿಕ ಪ್ರಜೆಗಳು? ಡೊನಾಲ್ಡ್ ಟ್ರಂಪ್‌ಗೆ ಭಯ ಶುರುವಾಗಿದ್ದು ಏಕೆ? ಇಂಚಿಂಚು ಮಾಹಿತಿ ತಿಳಿಯೋಣ.

ಭಾರತ ಮೂಲದ ಪ್ರಜೆಗಳು ಅಮೆರಿಕದ ನೆಲದಲ್ಲಿ ಭಾರಿ ಪ್ರಮಾಣದಲ್ಲಿ ನೆಲೆಸಿದ್ದು, ಅಲ್ಲಿ ಅಧ್ಯಕ್ಷರಾಗಿ ಆಯ್ಕೆ ಆಗಲು ಭಾರತೀಯರ ಬೆಂಬಲ ಬೇಕೆ ಬೇಕಾಗುತ್ತದೆ. ಪರಿಸ್ಥಿತಿ ಹೀಗಿದ್ದರು ಕೂಡ ಜೋ ಬೈಡನ್ ತಮ್ಮ ಸೋಲಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಯಾಕಂದ್ರೆ ಕಳೆದ 3 ವರ್ಷದಿಂದ ಜೊ ಬೈಡನ್ ಹೀನಾಯ ಆಡಳಿತ ನೀಡಿದ್ದಾರೆ, ಎಂಬ ಆರೋಪ ಅಮೆರಿಕದಲ್ಲಿ ಮೊಳಗಿತ್ತು. ಹೀಗಿದ್ದರೂ ಪರಿಸ್ಥಿತಿ ಸರಿ ಮಾಡದ ಜೋ ಬೈಡನ್ ತಮ್ಮದೇ ಆರೋಗ್ಯ ಸಮಸ್ಯೆಗೆ ಸಿಲುಕಿ ಪರದಾಡಿದ್ದರು. ಇಷ್ಟೆಲ್ಲ ಒತ್ತಡ ನಡುವೆ ಕೂಡ, ಮತ್ತೊಮ್ಮೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲ್ಲುವ ಆಸೆ ಇಟ್ಕೊಂಡಿದ್ದ ಜೋ ಬೈಡನ್‌ಗೆ ಆಘಾತ ಸಿಕ್ಕಿತ್ತು.

Donald Trump And Kamala Harris Presidential Election Debate Where Created New Wave

ಬೈಡನ್‌ಗೆ ಬಾಯ್, ಕಮಲಾಗೆ ಹಾಯ್!

ಡೆಮಾಕ್ರಟಿಕ್ ಪಕ್ಷದ ನಾಯಕರು ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಭಯಗೊಂಡರು. ಇದೇ ಮಾತನ್ನು, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳು ಕೂಡ ನುಡಿದಿದ್ದವು. ಇದು ಚಿಂತೆ ಹೆಚ್ಚಾಗುವಂತೆ ಮಾಡಿತ್ತು. ಅಲ್ಲದೆ ಹಾಲಿ ಅಧ್ಯಕ್ಷ ಜೋ ಬೈಡನ್ ಸೋತು ಸುಣ್ಣವಾಗಿ, ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಕೂರುತ್ತಾರೆ ಎಂಬ ಸುದ್ದಿ ರಿಪಬ್ಲಿಕನ್ ಪಕ್ಷದ ನಾಯಕರ ನಿದ್ದೆ ಹಾರಿ ಹೋಗುವಂತೆ ಮಾಡಿತ್ತು. ಈ ಸಮಯದಲ್ಲಿ ನೋಡಿ ಸೂಪರ್ ಹೀರೋ ರೀತಿ ಎಂಟ್ರಿ ಕೊಟ್ಟವರೇ ಕಮಲಾ ಹ್ಯಾರಿಸ್.

ಕಮಲಾ ಹ್ಯಾರಿಸ್ ಅವರ ತಾಯಿ ಭಾರತದ ಅದರಲ್ಲೂ ದಕ್ಷಿಣ ಭಾರತದ ನಮ್ಮ ನೆರೆಯ ತಮಿಳುನಾಡು ರಾಜಧಾನಿ ಚೆನ್ನೈ ಮೂಲದವರು. ಹಾಗೇ ಕಮಲಾ ಹ್ಯಾರಿಸ್ ಅವರ ತಂದೆ ಜಮೈಕಾ ಮೂಲದವರು. ಈ ಮೂಲಕ ಡೆಮಾಕ್ರಟಿಕ್ ಪಕ್ಷದ ನಾಯಕರು ಭರ್ಜರಿ ಪ್ಲಾನ್ ಮಾಡಿ ಮುಂದೆ ನುಗ್ಗಿದ್ದರು, ಕಮಲಾ ಹ್ಯಾರಿಸ್ ಅವರನ್ನ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಿ ಎರಡು ಹಕ್ಕಿ ಹೊಡೆದರು. ಒಂದು ಕಡೆ ಭಾರತ ಮೂಲದ ಮತದಾರರು ಕಮಲಾ ಹ್ಯಾರಿಸ್ ಪರ ನಿಂತರೆ, ಇನ್ನೊಂದು ಕಡೆ ಆಫ್ರಿಕನ್ & ಅಮೆರಿಕನ್ ಮತದಾರರು ಕೂಡ ಇದೀಗ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತಿದ್ದಾರೆ. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲೇ ಡೊನಾಲ್ಡ್ ಟ್ರಂಪ್ ಸೋಲು ನಿರ್ಧಾರ ಆಗುವಂತೆ ಮಾಡಿಬಿಟ್ಟಿದೆ!

ಜನಾಂಗೀಯ ದಾಳಿಯನ್ನ ಬಿಟ್ಟು...

ಇಂದು ನಡೆದ ಟ್ರಂಪ್ & ಕಮಲಾ ನಡುವಿನ ಅಧ್ಯಕ್ಷೀಯ ಚುನಾವಣೆ ಮುಖಾಮುಖಿ ಚರ್ಚೆ ಗಮನ ಸೆಳೆಯಿತು. ಯಾಕಂದ್ರೆ ಇದು ಬರೀ ಚರ್ಚೆ ಆಗಿರಲಿಲ್ಲ, ಬದಲಾಗಿ ಕುಸ್ತಿಯೇ ಆಗಿತ್ತು. ಡೊನಾಲ್ಡ್ ಟ್ರಂಪ್ ಎದುರಿಗೆ ಬಂದ ತಕ್ಷಣ ಹುಲಿಯಂತೆ ಮಾತಿನ ದಾಳಿ ಆರಂಭ ಮಾಡಿದ ಕಮಲಾ ಹ್ಯಾರಿಸ್, ಮೆತ್ತಗೆ ಮಾತನಾಡುತ್ತಲೇ ಹರಕುಬಾಯಿ ಎಂಬ ಖ್ಯಾತಿ ಪಡೆದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮೌಲ್ಯದ ಪಾಠ ಮಾಡಿದರು.

ಹಾಗೇ ತಮ್ಮ ಬಗ್ಗೆ & ತಮ್ಮ ತಂದೆ ಹಾಗೂ ತಾಯಿ ಹಿನ್ನೆಲೆ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ ಎಂಬ ಆರೋಪಗಳ ಕುರಿತು ಕಮಲಾ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿ ಉತ್ತರ ನೀಡಿದರು. ಅಲ್ಲದೆ ಜನಾಂಗೀಯ ಹಿನ್ನೆಲೆ ಚರ್ಚೆ ಬಿಟ್ಟು ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿ, ಮಾತನಾಡಿ ಅಂತಲೂ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಇದು ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈಗಿನ ಪರಿಸ್ಥಿತಿ ನೋಡಿದರೆ ಡೊನಾಲ್ಡ್ ಟ್ರಂಪ್ ಮನೆಗೆ ಹೋಗುವುದು ಗ್ಯಾರಂಟಿ ಆಗುತ್ತಿದೆ ಅಂತಾ ಅಮೆರಿಕನ್ನರು ಚರ್ಚೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+