ಉಕ್ರೇನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾದ ಡೊನಾಲ್ಡ್ ಟ್ರಂಪ್ ಆಡಳಿತ?
ಎಷ್ಟು ಹೇಳಿದರೂ ಕೇಳುತ್ತಿಲ್ಲ ಉಕ್ರೇನ್, ಅತ್ತ ರಷ್ಯಾ ಕೂಡ ಹಠ ಬಿಟ್ಟು ಸೈಲೆಂಟ್ ಆಗುತ್ತಲೇ ಇಲ್ಲ. ಈ ಪರಿಣಾಮ ನಲುಗಿ ಹೋಗಿರುವುದು ಡೊನಾಲ್ಡ್ ಟ್ರಂಪ್ ಆಡಳಿತ & ಅಮೆರಿಕ ಮಾತ್ರ. ಏಕೆಂದರೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾಗಲು ಅಮೆರಿಕ ಕೂಡ ಕಾರಣ ಎನ್ನುವ ಆರೋಪ ಇದೆ. ಅದರಲ್ಲೂ ಹಿಂದೆ ಇದ್ದ ಜೋ ಬೈಡನ್ ಆಡಳಿತ ಮಾಡಿಕೊಂಡಿದ್ದ ತಪ್ಪುಗಳೇ ಯುದ್ಧ ಆರಂಭವಾಗಲು ಕಾರಣ ಎಂಬ ಆರೋಪ ಕೂಡ ಇದೆ. ಇಷ್ಟೆಲ್ಲದರ ಮಧ್ಯೆ ಡೊನಾಲ್ಡ್ ಟ್ರಂಪ್ ಅವರು ತಾವು ಅಧಿಕಾರಕ್ಕೆ ಬಂದ ತಕ್ಷಣ ಯುದ್ಧ ನಿಲ್ಲಿಸುವ ಶಪಥವನ್ನು ಮಾಡಿದ್ದರು. ಆದರೆ ಅದೆಲ್ಲಾ ಈವರೆಗೂ ಮಾತಾಗಿಯೇ ಉಳಿದಿದೆ...
ಡೊನಾಲ್ಡ್ ಟ್ರಂಪ್ ಅವರಿಗೆ ಪರಿಸ್ಥಿತಿ ಕಗ್ಗಂಟಾಗಿರುವ ವಿಚಾರ ಗೊತ್ತಾಗಿದ್ದು, ಹೇಗಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ ಒಂದು ಕಡೆ ಉಕ್ರೇನ್ ಮೇಲೆ ಕೂಡ ಒತ್ತಡ ಹೇರುತ್ತಾ, ಇನ್ನೊಂದು ಕಡೆ ರಷ್ಯಾ ಮೇಲೆ ಕೂಡ ಭಾರಿ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಆದರೆ, ಉಕ್ರೇನ್ ಇದೀಗ ಅಮೆರಿಕದ ಅಧ್ಯಕ್ಷ ಟ್ರಂಪ್ ಮುಂದಿಟ್ಟಿರುವ ಮಹತ್ವದ 28 ಅಂಶಗಳ ಶಾಂತಿ ಮಾತುಕತೆಯ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ಕೊಡುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಕಗ್ಗಂಟಾಗಿ ಹೋಗಿ, ಕೊನೆಗೆ ನಮ್ಮ ಮಾತು ಕೇಳದೇ ಇದ್ದರೆ ನಿಮಗೆ ತಕ್ಕ ಶಾಸ್ತಿ ಗ್ಯಾರಂಟಿ ಎಂಬ ರೀತಿಯಲ್ಲಿ ಅಮೆರಿಕ ಎಚ್ಚರಿಕೆಯ ಸಂದೇಶ ನೀಡುತ್ತಿದೆ.

ಪುಟಿನ್ ಭೇಟಿ ಮಾಡಲು ಟ್ರಂಪ್ ಸಿದ್ಧತೆ?
ಭಾರತಕ್ಕೆ ಈಗ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಭೇಟಿ ನೀಡುವುದು ಗ್ಯಾರಂಟಿ ಆಗಿದ್ದು, ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಲಾದಿಮಿರ್ ಪುಟಿನ್ ಭೇಟಿ ಮಾಡಿ ಮಾತುಕತೆ ನಡೆಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಲು ಟ್ರಂಪ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ ಎಂಬ ಮಾತು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಕೆಲ ತಿಂಗಳ ಹಿಂದಷ್ಟೇ ಡೊನಾಲ್ಡ್ ಟ್ರಂಪ್ & ಪುಟಿನ್ ಭೇಟಿ ಮಾಡಿ ಚರ್ಚಿಸಿದ್ದರು.
ಉಕ್ರೇನ್ ಸೇನೆಗೆ ಅಮೆರಿಕ ಅನುದಾನ ಕಟ್?
ಇನ್ನೊಂದು ಕಡೆ ಅಮೆರಿಕ ಭಾರಿ ದೊಡ್ಡ ಪ್ರಮಾಣದಲ್ಲಿ ಉಕ್ರೇನ್‌ಗೆ ಹಣ & ಶಸ್ತ್ರಾಸ್ತ್ರ ನೀಡುತ್ತಾ ಸಹಾಯ ಮಾಡುತ್ತಿದೆ. ಆದರೆ ಈಗ ತಮ್ಮ ಮಾತನ್ನು ಉಕ್ರೇನ್ ಕೇಳುತ್ತಿಲ್ಲ ಎಂಬ ಹಿನ್ನೆಲೆ ದಿಢೀರ್ ಅಮೆರಿಕ ತಾನು ನೀಡುತ್ತಿರುವ ಅನುದಾನ ನಿಲ್ಲಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕೆ ಮತ್ತಷ್ಟು ಗಮನ ಸೆಳೆಯುತ್ತಿದೆ ರಷ್ಯಾ & ಉಕ್ರೇನ್ ಶಾಂತಿ ಮಾತುಕತೆ ವಿಚಾರ. ಇಷ್ಟೆಲ್ಲದರ ನಡುವೆ ಕೂಡ ಇಬ್ಬರ ನಡುವೆ ನಿರಂತರವಾಗಿ ದಾಳಿ ಹಾಗೂ ಪ್ರತಿದಾಳಿ ನಡೆಯುತ್ತಲೇ ಇದೆ.












Click it and Unblock the Notifications