Donald Trump: ಔಷಧ ಸೇರಿದಂತೆ ಹಲವು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದ ಟ್ರಂಪ್ ಆಡಳಿತ!
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸ್ವತಃ ಅಲ್ಲಿನ ಜನರೇ ಊಟ & ನಿದ್ದೆ ಬಿಟ್ಟು ಯೋಚನೆ ಮಾಡುವಂತೆ ಆಗಿದೆ. ಯಾಕಂದ್ರೆ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿರುವ ಇದೇ ಟ್ರಂಪ್ ಮಹಾಶಯ ಮತ್ತೆ ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಮೆರಿಕದಲ್ಲಿ ಸಾಮಾನ್ಯ ಜನರ ಬದುಕು ಬೀದಿಗೆ ಬಿದ್ದಂತೆ ಆಗಿದೆ. ಸಣ್ಣಪುಟ್ಟ & ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಈ ರೀತಿ ಬೆಲೆ ಏರಿಕೆ ಕಂಡು ಜನ ಕೂಡ ರೊಚ್ಚಿಗೆದ್ದಿದ್ದಾರೆ. ಇಷ್ಟಾದರೂ ಟ್ರಂಪ್ ಮಾತ್ರ ಸೈಲೆಂಟ್ ಆಗ್ತಿಲ್ಲ!
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಸುತ್ತಿನ ತೆರಿಗೆ ಯುದ್ಧ ಆರಂಭಿಸಿ ಭಯ ಹುಟ್ಟಿಸಿದ್ದಾರೆ. ಆದರೆ ಈ ಬಾರಿ ಡೊನಾಲ್ಡ್ ಟ್ರಂಪ್ ತೆರಿಗೆ ತಿಕ್ಕಾಟ ಶುರು ಮಾಡಿರುವುದು ಸ್ವತಃ ತನ್ನದೇ ದೇಶದ ಪ್ರಜೆಗಳ ವಿರುದ್ಧ. ಔಷಧ ಸೇರಿದಂತೆ ಸಾಮಾನ್ಯ ಜನರಿಗೆ ಅಗತ್ಯ ಇರುವ ಹಲವು ವಸ್ತುಗಳ ಮೇಲೆ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಲು ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ ಎಂಬ ಸುದ್ದಿ ಭಾರಿ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿದೆ. ಇದರ ಜೊತೆಯಲ್ಲೇ ಡೊನಾಲ್ಡ್ ಟ್ರಂಪ್ ವರ್ತನೆಗೆ ಅಮೆರಿಕದ ಜನರು ರೊಚ್ಚಿಗೆದ್ದಿದ್ದಾರೆ.

ಅಮೆರಿಕದಲ್ಲಿ ಎಲ್ಲವೂ ಕಾಸ್ಟ್ಲಿ ಗುರೂ!
ಅಂದಹಾಗೆ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳ ವಿರುದ್ಧ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆಯನ್ನ ಮಾಡಿದ್ದ ಡೊನಾಲ್ಡ್ ಟ್ರಂಪ್ ವಿವಾದದ ಕಿಡಿ ಹೊತ್ತಿಸಿದ್ದರು. ಇದು ಸಾಲದು ಎನ್ನುವಂತೆ ಇದೀಗ ತನ್ನದೇ ದೇಶದಲ್ಲಿ ತೆರಿಗೆ ಯುದ್ಧಕ್ಕೆ ಮುಂದಾಗಿರುವ ಆರೋಪ ಕೇಳಿ ಬಂದಿದೆ. ಹೀಗೆಲ್ಲಾ ಅಮೆರಿಕ ಅಧ್ಯಕ್ಷರು ವರ್ತಿಸುತ್ತಿರುವ ರೀತಿ ಭಾರಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಸಾಲದ ಸುಳಿ ಸೇರಿದಂತೆ ನಿರುದ್ಯೋಗದ ನೋವಿನಲ್ಲಿ ನರಳುತ್ತಿರುವ ಅಮೆರಿಕದ ಜನರಿಗೆ ಈಗ ತೆರಿಗೆ ಹೇರಿಕೆ ಭಾರ ಕೂಡ ಕಾಡುವಂತೆ ಆಗಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಟ್ರಂಪ್ ಅವರ ನಿರ್ಧಾರ ಚರ್ಚೆಗೆ ದಾರಿ ಮಾಡಿದೆ.
ಟ್ರಂಪ್ ನಿರ್ಧಾರಕ್ಕೆ ತೀವ್ರ ಬೇಸರ
ಒಟ್ನಲ್ಲಿ ಅಮೆರಿಕದ ಜನತೆಯ ಹಣೆಬರಹ ಸರಿ ಇಲ್ವಾ? ಅನ್ನೋ ರೀತಿ ಇದೀಗ ಚರ್ಚೆ ಶುರುವಾಗಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೆ ಸುಖಾಸುಮ್ಮನೆ ತೆರಿಗೆ ಹೆಚ್ಚಿಸುವ ಮೂಲಕ ತಮ್ಮದೇ ದೇಶದ ಜನರ ಮೇಲೆ ಭಾರತ ಹಾಕುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಡೊನಾಲ್ಡ್ ಟ್ರಂfಪ ತಮ್ಮ ನಿರ್ಧಾರಗಳನ್ನು ಸರಿ ಮಾಡಿಕೊಳ್ಳಬೇಕು ಎಂಬ ಆಗ್ರಹ ಕೂಡ ಮಾಡುತ್ತಿದ್ದಾರೆ ಅಲ್ಲಿನ ಪ್ರಜೆಗಳು.












Click it and Unblock the Notifications