Get Updates
Get notified of breaking news, exclusive insights, and must-see stories!

ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಭಾಷಣ ಮಾಡಿದ್ದಾರೆ. ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯು ಅಂತಿಮ ಹಂತ ತಲುಪಿದ್ದು, ಅಮೆರಿಕ ತನ್ನ ಮಿಲಿಟರಿ ಗುರಿಗಳನ್ನು ಬಹುತೇಕ ಸಾಧಿಸಿದೆ ಎಂದು ಅವರು ಘೋಷಿಸಿದ್ದಾರೆ. ಇರಾನ್‌ನ ಸೇನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದ್ದು, ಆ ದೇಶವು ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಯಾವುದೇ ಬೆದರಿಕೆಯಾಗಿ ಉಳಿದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ಸೇನಾ ಕಾರ್ಯಾಚರಣೆ

ತಮ್ಮ ಭಾಷಣದಲ್ಲಿ ಮಿಲಿಟರಿ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ವಿವರಿಸಿದ ಡೊನಾಲ್ಡ್ ಟ್ರಂಪ್, "ನಾವು ನಮ್ಮೆಲ್ಲಾ ಮಿಲಿಟರಿ ಗುರಿಗಳನ್ನು ಪೂರ್ಣಗೊಳಿಸುವ ಹಂತದಲ್ಲಿದ್ದೇವೆ. ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ನಡೆಸಲಾಗುವುದು. ಒಂದು ವೇಳೆ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ಪ್ರಮುಖ ಗುರಿಗಳ ಮೇಲೆ ನಿಖರ ದಾಳಿ ಮಾಡಲಾಗುವುದು ಹಾಗೂ ಆ ದೇಶವನ್ನು ಶಿಲಾಯುಗಕ್ಕೆ ತಳ್ಳಲಿದ್ದೇವೆ" ಎಂದು ಎಚ್ಚರಿಸಿದ್ದಾರೆ. ವಿದ್ಯುತ್ ಸ್ಥಾವರಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಸುಳಿವನ್ನು ಸಹ ಅವರು ನೀಡಿದ್ದಾರೆ. ಇರಾನ್‌ನ ನೌಕಾಪಡೆ ಸಂಪೂರ್ಣವಾಗಿ ನಾಶವಾಗಿದೆ, ವಾಯುಪಡೆಗೆ ತೀವ್ರ ಹಾನಿಯಾಗಿದೆ, ಕ್ಷಿಪಣಿ ಕಾರ್ಯಕ್ರಮ ಬಹುತೇಕ ಸ್ಥಗಿತಗೊಂಡಿದೆ ಮತ್ತು ರಕ್ಷಣಾ ಉದ್ಯಮವನ್ನು ಸರ್ವನಾಶ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Donald Trump

ತೈಲ ಮತ್ತು ಹಾರ್ಮುಜ್ ಜಲಸಂಧಿ ವಿವಾದ

ಜಾಗತಿಕ ತೈಲ ಪೂರೈಕೆ ಹಾಗೂ ಹಾರ್ಮುಜ್ ಜಲಸಂಧಿಯ ಬಗ್ಗೆ ಮಾತನಾಡಿದ ಅವರು, "ಅಮೆರಿಕವು ಹಾರ್ಮುಜ್ ಜಲಸಂಧಿಯ ಮೂಲಕ ಯಾವುದೇ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ. ನಮಗೆ ಅದರ ಅಗತ್ಯವಿಲ್ಲ. ಇತರ ದೇಶಗಳು ಅದರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಆ ಮಾರ್ಗವನ್ನು ರಕ್ಷಿಸಿಕೊಳ್ಳಬೇಕು" ಎಂದಿದ್ದಾರೆ. ಸಂಘರ್ಷ ಮುಗಿದ ಬಳಿಕ ಜಲಸಂಧಿಯು ಸಹಜವಾಗಿ ತೆರೆಯಲಿದ್ದು, ತೈಲ ಪೂರೈಕೆ ಪುನರಾರಂಭವಾಗಲಿದೆ. ಆಗ ತೈಲ ಬೆಲೆಗಳು ಕಡಿಮೆಯಾಗಲಿವೆ ಮತ್ತು ಷೇರುಪೇಟೆಗಳು ಮರಳಿ ಏರಿಕೆ ಕಾಣಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Iran Vs US and Israel Conflict: ಅಮೆರಿಕ - ಇಸ್ರೇಲ್ ಎಣಿಕೆ ಸುಳ್ಳಾಗಿದೆ; ಇರಾನಿನ ಹುತಾತ್ಮರ ಪುಟ್ಟ ಇತಿಹಾಸ: ಹರೀಶ್ ಗಂಗಾಧರ್
Iran Vs US and Israel Conflict: ಅಮೆರಿಕ - ಇಸ್ರೇಲ್ ಎಣಿಕೆ ಸುಳ್ಳಾಗಿದೆ; ಇರಾನಿನ ಹುತಾತ್ಮರ ಪುಟ್ಟ ಇತಿಹಾಸ: ಹರೀಶ್ ಗಂಗಾಧರ್

ಇರಾನ್‌ನ ತೈಲ ನೆಲೆಗಳ ಮೇಲೆ ದಾಳಿ ಮಾಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ನಾವು ಅವರ ತೈಲ ನೆಲೆಗಳ ಮೇಲೆ ದಾಳಿ ಮಾಡಿಲ್ಲ, ಅದು ನಮಗೆ ಅತ್ಯಂತ ಸುಲಭದ ಗುರಿಯಾಗಿತ್ತು. ಆದರೆ, ಆ ನೆಲೆಗಳನ್ನು ನಾಶಪಡಿಸಿದರೆ, ಭವಿಷ್ಯದಲ್ಲಿ ಇರಾನ್ ಮರುನಿರ್ಮಾಣಗೊಳ್ಳುವ ಅವಕಾಶವೇ ಇಲ್ಲದಂತಾಗುತ್ತದೆ" ಎಂದು ವಿವರಿಸಿದ್ದಾರೆ.

ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡುವುದು ಅಮೆರಿಕದ ಪ್ರಮುಖ ಉದ್ದೇಶವಾಗಿರಲಿಲ್ಲ. ಆದರೆ, ಅವರ ಪ್ರಮುಖ ನಾಯಕರು ಮೃತಪಟ್ಟಿರುವುದರಿಂದ ಬದಲಾವಣೆ ತಾನಾಗಿಯೇ ಸಂಭವಿಸಿದೆ. ಹೊಸ ನಾಯಕತ್ವವು ಕಡಿಮೆ ಆಕ್ರಮಣಕಾರಿಯಾಗಿದೆ ಮತ್ತು ಹೆಚ್ಚು ಸಮಂಜಸವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಪಡೆಗಳು ತ್ವರಿತ ಮತ್ತು ಹೆಚ್ಚಿನ ವಿಜಯ ಸಾಧಿಸಿವೆ. "ನನ್ನ ಮೊದಲ ಆದ್ಯತೆ ರಾಜತಾಂತ್ರಿಕತೆಯಾಗಿತ್ತು. ಆದರೆ ಇರಾನ್ ಒಪ್ಪಂದದ ಪ್ರತಿಯೊಂದು ಪ್ರಯತ್ನವನ್ನೂ ತಿರಸ್ಕರಿಸಿತು. ಹೀಗಾಗಿ ಅವರು ರಹಸ್ಯವಾಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ನಾವು ನಾಶಪಡಿಸಿದೆವು" ಎಂದಿದ್ದಾರೆ.

ಇರಾನ್‌ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ಇಲ್ಲಿದೆ ಪ್ರಮುಖಾಂಶಗಳು
ಇರಾನ್‌ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ಇಲ್ಲಿದೆ ಪ್ರಮುಖಾಂಶಗಳು

ಅಮೆರಿಕಕ್ಕೆ ಇರುವ ಬೆದರಿಕೆಯನ್ನು ಹೋಗಲಾಡಿಸುವುದು, ಇರಾನ್‌ನ ಪರಮಾಣು ಸಾಮರ್ಥ್ಯವನ್ನು ತಡೆಯುವುದು ಮತ್ತು ಗಡಿಯಾಚೆಗಿನ ಅವರ ಪ್ರಾಬಲ್ಯವನ್ನು ಹತ್ತಿಕ್ಕುವುದು ನಮ್ಮ ಪ್ರಮುಖ ಉದ್ದೇಶ. ಈ ಕಾರ್ಯವನ್ನು ನಾವು ಅತಿವೇಗವಾಗಿ ಪೂರ್ಣಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಕೊನೆಯಲ್ಲಿ, ಅಮೆರಿಕದ ಕಾರ್ಯಾಚರಣೆಗೆ ಬೆಂಬಲ ನೀಡಿದ ಮಿತ್ರರಾಷ್ಟ್ರಗಳಾದ ಇಸ್ರೇಲ್, ಸೌದಿ ಅರೇಬಿಯಾ, ಕತಾರ್, ಯುಎಇ, ಕುವೈತ್ ಮತ್ತು ಬಹ್ರೇನ್ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದ ಟ್ರಂಪ್, "ನಾವು ನಮ್ಮ ಮಿತ್ರರಾಷ್ಟ್ರಗಳನ್ನು ಎಂದಿಗೂ ಕೈಬಿಡುವುದಿಲ್ಲ ಹಾಗೂ ವಿಫಲರಾಗಲು ಬಿಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+