ಇಸ್ರೇಲ್‌ಗೆ ಓಡೋಡಿ ಬಂದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್: ಯಾಕೆ ಗೊತ್ತಾ?
ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ತೀವ್ರವಾಗುತ್ತಿದೆ. ಇದೇ ಸ್ಥಿತಿ ಮುಂದುವರಿದ್ರೆ ಜಗತ್ತು ಮತ್ತೊಂದು ಮಹಾಯುದ್ಧ ನೋಡಿ ನಾಶವಾಗುವ ಅಪಾಯ ಇದೆ. ಹೀಗಿದ್ದಾಗಲೇ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಇಸ್ರೇಲ್ ರಾಜಧಾನಿಗೆ ದೌಡಾಯಿಸಿದ್ದಾರೆ. ಕಾರಣ ಏನು ಗೊತ್ತಾ?
ಅಮೆರಿಕ ಹಾಗೂ ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್ ಮತ್ತಿತರ ದೇಶಗಳು ಈಗ ಇಸ್ರೇಲ್ ಪರವಾಗಿ ನಿಂತಿವೆ. ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಜೀವಹಾನಿ ಜೋರಾಗಿದ್ದು, ಸಾವಿರಾರು ಜನ ಬಲಿಯಾಗಿ ಲೆಕ್ಕವಿಲ್ಲದಷ್ಟು ಜನ ಈಗ ಆಸ್ಪತ್ರೆಗೆ ಸೇರಿದ್ದಾರೆ. ಇದೇ ಸ್ಥಿತಿಯಲ್ಲಿ ಇಸ್ರೇಲ್ ತನ್ನ ಶತ್ರುಗಳ ಸರ್ವ ನಾಶಕ್ಕೆ ರಣಕಹಳೆ ಮೊಳಗಿಸಿದೆ. ಹೀಗಿದ್ದಾಗಲೇ ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಜೊತೆಗೆ ಮಾತನಾಡಲು, ಯುದ್ಧದ ಕುರಿತು ಮಾಹಿತಿ ಪಡೆಯಲು ಫ್ರಾನ್ಸ್ ಅಧ್ಯಕ್ಷರು ಇಸ್ರೇಲ್ ನೆಲಕ್ಕೆ ಬಂದಿದ್ದಾರೆ.

ಅಮೆರಿಕ ಜೊತೆ ಫ್ರಾನ್ಸ್ ಯುದ್ಧದ ಅಖಾಡಕ್ಕೆ?
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಬಂದಿದ್ದು, ಇಸ್ರೇಲ್ ಪ್ರಧಾನಿ ಜೊತೆಗೆ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ. ಫ್ರಾನ್ಸ್ ಅಧ್ಯಕ್ಷರ ದಿಢೀರ್ ಆಗಮನದ ಹಿನ್ನೆಲೆ ಟೆಲ್ ಅವಿವ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ ದಾಳಿ ನಡೆದ ತಕ್ಷಣ ಫ್ರಾನ್ಸ್, ಇಸ್ರೇಲ್‌ಗೆ ತನ್ನ ಬೆಂಬಲವನ್ನು ಘೋಷಿಸಿತ್ತು. ಹಾಗೇ ಮತ್ತೊಂದು ಕಡೆ ನ್ಯಾಟೋ ರಾಷ್ಟ್ರವಾಗಿರುವ ಫ್ರಾನ್ಸ್ ಅಮೆರಿಕ ಕೈಗೊಳ್ಳುವ ಪ್ರತಿ ನಿರ್ಧಾರಕ್ಕೂ ಓಕೆ ಅನ್ನಲೇಬೇಕಾದ ಸ್ಥಿತಿಯಲ್ಲಿ ಇರುತ್ತದೆ. ಹೀಗಾಗಿ ಫ್ರಾನ್ಸ್ ಅಧ್ಯಕ್ಷರ ಈ ಭೇಟಿ ಸಂಚಲನ ಸೃಷ್ಟಿಸಿದೆ.
#WATCH French President Emmanuel Macron arrives in Tel Aviv, Israel amid the ongoing Israel-Hamas conflict
— ANI (@ANI) October 24, 2023
(Video source: Reuters) pic.twitter.com/GNlPer38CX
ಫೋನ್ ಕಾಲ್ ಮಾಡಿದ್ದ ನೆತನ್ಯಾಹು
ಹಾಗೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೋನ್ ಕಾಲ್ ಮಾಡಿ ಫ್ರಾನ್ಸ್ ಅಧ್ಯಕ್ಷರ ಜತೆ ಮಾತನಾಡಿದ್ದರು. ಅಮೆರಿಕ ಅಧ್ಯಕ್ಷ ಬೈಡನ್ ಕೂಡ ನೆತನ್ಯಾಹು ಜತೆ ಮಾತನಾಡಿದ್ದು ಕುತೂಹಲ ಕೆರಳಿಸಿದೆ. ನಿನ್ನೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಫ್ರಾನ್ಸ್, ಸ್ಪೇನ್, ನೆದರ್ಲೆಂಡ್ಸ್ ನಾಯಕರ ಜೊತೆ ಮಾತನಾಡಿದ್ರು. ದೂರವಾಣಿ ಮಾತುಕತೆ ನಡೆಸಿದ್ದ ನೆತನ್ಯಾಹು ಹಮಾಸ್ ವಿರುದ್ಧ ನಡೆಸುತ್ತಿರುವ ದಾಳಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆಯಲ್ಲಿ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಜೊತೆಗೂ ಮಾತನಾಡಿದ್ದರು ನೆತನ್ಯಾಹು. ಇದೀಗ ಫ್ರಾನ್ಸ್ ಅಧ್ಯಕ್ಷ ದಿಢೀರ್ ಇಸ್ರೇಲ್‌ಗೆ ಬಂದಿದ್ದಾರೆ.
ಎಲ್ಲಿ ನೋಡಿದರೂ ಶವಗಳ ರಾಶಿ
ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಪರಿಣಾಮ ಈವರೆಗೆ ಒಟ್ಟು 5000ಕ್ಕೂ ಹೆಚ್ಚು ಜನ ಗಾಜಾಪಟ್ಟಿಯ ಒಳಗೇ ಉಸಿರು ಚೆಲ್ಲಿದ್ದಾರೆ. ಇತ್ತ ಇಸ್ರೇಲ್ ನೆಲದಲ್ಲಿ ಕೂಡ ಭಾರಿ ಸಾವು-ನೋವು ಸಂಭವಿಸಿದೆ. ಈ ಸಮಯದಲ್ಲಿ ಅಮೆರಿಕ ಕೂಡ ಇಸ್ರೇಲ್ ಪರ ನಿಂತಿದೆ. ಹೀಗೆ ಪರಿಸ್ಥಿತಿ ಸೂಕ್ಷ್ಮವಾದ ಸಮಯದಲ್ಲೇ ಇಸ್ರೇಲ್ ಪ್ರಧಾನಿಯ ನಡೆ ಕುತೂಹಲ ಕೆರಳಿಸಿದೆ. ಇತ್ತ ಫ್ರಾನ್ಸ್ ಅಧ್ಯಕ್ಷರು ಕೂಡ ಇಸ್ರೇಲ್‌ಗೆ ಎಂಟ್ರಿ ಕೊಟ್ಟು ಯುದ್ಧದ ಕುತೂಹಲ ಹೆಚ್ಚಿಸಿದ್ದಾರೆ.

ಒಟ್ನಲ್ಲಿ ಹಮಾಸ್ ವಿರುದ್ಧ ತೊಡೆತಟ್ಟಿ ನಿಂತಿರುವ ಇಸ್ರೇಲ್, ಶತ್ರು ನಾಶಕ್ಕೆ ಸಿದ್ಧವಾಗಿದೆ. ಈಗಾಗಲೇ ಇಸ್ರೇಲ್ ಸೇನೆ ದಾಳಿಗೆ ಗಾಜಾಪಟ್ಟಿ ಪುಡಿ ಪುಡಿಯಾಗಿ ಹೋಗಿದೆ. ಮತ್ತೊಂದು ಕಡೆ ಇಸ್ರೇಲ್ ಭೂ ಸೇನೆ ಕೂಡ ಗಾಜಾಪಟ್ಟಿ ಗಡಿ ಭಾಗದಲ್ಲಿ ಠಿಕಾಣಿ ಹೂಡಿದೆ. ಈ ಸಮಯದಲ್ಲಿ ತನ್ನ ಮಿತ್ರ ರಾಷ್ಟ್ರಗಳ ನಾಯಕರ ಜೊತೆ ಇಸ್ರೇಲ್ ದೊಡ್ಡ ಮಟ್ಟದ ಮಾತುಕತೆ ನಡೆಸುತ್ತಿದೆ. ಹೀಗಾಗಿ ರಷ್ಯಾ & ಚೀನಾ ಯಾವ ನಿರ್ಧಾರ ಕೈಗೊಳ್ಳಲಿವೆ ಅಂತಾ ಕಾದು ನೋಡಬೇಕಿದೆ. ಅಲ್ಲಿಯ ತನಕ ಗಾಜಾಪಟ್ಟಿ ಮೇಲೆ ಮತ್ತಷ್ಟು ಭೀಕರ ದಾಳಿ ನಡೆದು, ಹಮಾಸ್ ಉಗ್ರರಿಗೆ ಖೆಡ್ಡಾ ತೋಡುವುದು ಪಕ್ಕಾ.












Click it and Unblock the Notifications