ಸಿರಿಯಾ ನೆಲದಲ್ಲಿ ಇರಾನ್‌ಗೆ ಶಾಕ್ ಕೊಟ್ಟ ದೊಡ್ಡಣ್ಣ ಅಮೆರಿಕ!

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಭೀಕರ ಯುದ್ಧ ನಡೆಯುವಾಗ ಎಲ್ಲೇ ಗಲಾಟೆ ಆದರೂ, ಮತ್ತೊಂದು ಯುದ್ಧ ಶುರುವಾಯ್ತಾ? ಎಂಬ ಭಯ ಕಾಡುತ್ತಿದೆ. ಅದ್ರಲ್ಲೂ ಈ ಸ್ಥಿತಿಯಲ್ಲಿ ಮಧ್ಯಪ್ರಾಚ್ಯ ದೇಶಗಳು ಕೆಂಡದ ಮೇಲೆ ಕೂತಿವೆ. ಹೀಗೆ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿರುವ ಸಮಯದಲ್ಲೇ ಅಮೆರಿಕ ಸೇನಾ ಪಡೆ ಸಿರಿಯಾದಲ್ಲಿ ದಾಳಿ ಆರಂಭಿಸಿದೆ. ಸಿರಿಯಾ ಮೇಲೆ ಅಮೆರಿಕ ದಿಢೀರ್ ದಾಳಿ ಶುರು ಮಾಡಲು ಕಾರಣ ಏನು ಗೊತ್ತಾ?

ಅಂದಹಾಗೆ ಪೂರ್ವ ಸಿರಿಯಾದಲ್ಲಿರುವ ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಇರಾನ್ ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇರಾಕ್ & ಸಿರಿಯಾದಲ್ಲಿ ಅಮೆರಿಕದ ಸೇನೆ ವಿರುದ್ದ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಲು, ಅಮೆರಿಕದ ಅಧ್ಯಕ್ಷ ಬೈಡನ್ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಆದೇಶದ ಬಳಿಕ ಸಿರಿಯಾದಲ್ಲಿ ಇರುವ ಇರಾನ್ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ.

Discover Why America Is Now Attacks Suddenly On Syria

ಪೆಂಟಗನ್ ಹೇಳಿದ್ದು ಏನು?

ಇಸ್ರೇಲ್ & ಹಮಾಸ್ ಮಧ್ಯೆ ಸಂಘರ್ಷ ತೀವ್ರಗೊಂಡ ಬಳಿಕ ಇರಾಕ್ & ಸಿರಿಯಾದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಮತ್ತು ಮೈತ್ರಿ ಪಡೆಗಳ ಮೇಲೆ ಕನಿಷ್ಠ 19 ಬಾರಿ ದಾಳಿ ನಡೆಸಿವೆ ಎಂದು ಪೆಂಟಗನ್ ಆರೋಪಿಸಿದೆ. ಇರಾಕ್ & ಸಿರಿಯಾದಲ್ಲಿ ಅಮೆರಿಕದ ಸೇನೆ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಆತ್ಮರಕ್ಷಣೆಯ ಭಾಗವಾಗಿ ದಾಳಿ ನಡೆಸಲಾಗಿದೆ ಅನ್ನೋ ಮಾತನ್ನ ಇದೀಗ ಅಮೆರಿಕ ಹೇಳುತ್ತಿದೆ. ಈ ಕುರಿತು ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾದ ಯಾಲ್ಡ್ ಆಸ್ಟಿನ್ ಸ್ಪಷ್ಟನೆ ನೀಡಿದ್ದಾರೆ.

ಎಫ್-16 ಫೈಟರ್ ಜೆಟ್ ಮೂಲಕ ದಾಳಿ?

ಹಾಗೆ ಈ ಮೂಲಕ ಇರಾನ್ ಸೇನೆಗೆ ನೇರವಾಗಿ ವಾರ್ನಿಂಗ್ ಕೊಟ್ಟಿದೆ ಯುಎಸ್. ಅಮೆರಿಕ ಸೇನೆ ವಿರುದ್ಧ ಇರಾನ್ ಬೆಂಬಲಿಗರು ನಡೆಸುತ್ತಿರುವ ದಾಳಿ ತಕ್ಷಣ ನಿಲ್ಲಬೇಕು. ಒಂದು ವೇಳೆ, ದಾಳಿ ಇದೇ ರೀತಿ ಮುಂದುವರಿದರೆ ಮತ್ತಷ್ಟು ಪ್ರತಿದಾಳಿ ನಡೆಯಲಿದೆ ಎಂಬ ಸಂದೇಶವನ್ನು ಪೆಂಟಗನ್ ರವಾನಿಸಿದೆ. ಅಷ್ಟಕ್ಕೂ ಇರಾಕ್ ದೇಶದ‌ ಗಡಿಗೆ ಹೊಂದಿಕೊಂಡಿರುವ ಸಿರಿಯಾದ ಅಬು ಕಮಾಲ್ ಸಮೀಪ 2 ಎಫ್-16 ಫೈಟರ್ ಜೆಟ್ ಮೂಲಕ ಅಮೆರಿಕ ಸೇನೆ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.

Discover Why America Is Now Attacks Suddenly On Syria

ಹೀಗೆ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ತಿಕ್ಕಾಟ ಇದೀಗ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಮಾಡಿದೆ. ಇನ್ನೊಂದು ಕಡೆ ಯಾವ ಯಾವ ದೇಶಗಳ ನಡುವೆ ಯುದ್ಧದ ಕಿಚ್ಚು ಹೊತ್ತಿಕೊಳ್ಳುತ್ತೆ? ಎಂಬ ಭಯ ಶುರುವಾಗಿದೆ. ಅದರಲ್ಲೂ ರಷ್ಯಾ ಮತ್ತು ಅಮೆರಿಕ ಈ ಬಾರಿ ಕಾದಾಟಕ್ಕೆ ಸಿದ್ಧವಾಗಿದ್ದು, ಜಗತ್ತಿನಲ್ಲಿ ಆತಂಕ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+