ಅಮೆರಿಕದ ಅರ್ಥಶಾಸ್ತ್ರಜ್ಞೆಗೆ ನೊಬೆಲ್: 77 ವರ್ಷದ ಕ್ಲೌಡಿಯಾಗೆ ಗೌರವ
ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ನೊಬೆಲ್ ಪ್ರಶಸ್ತಿಯು ಜಾಗತಿಕವಾಗಿ ಪ್ರತಿಷ್ಠಿತ ಬಹುಮಾನಗಳಲ್ಲಿ ಒಂದು. ಈಗಾಗಲೇ ಹಲವು ಸಾಧಕರಿಗೆ ಕಳೆದ 1 ವಾರದಿಂದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಈಗ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಘೋಷಣೆಯಾಗಿದ್ದು ಅಮೆರಿಕ ಮೂಲದ ಸಾಧಕಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ.
ಹೌದು, 2023ರ ಸಾಲಿನ ನೊಬೆಲ್ ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಅಮೆರಿಕ ಅರ್ಥಶಾಸ್ತ್ರಜ್ಞೆ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಒಲಿದು ಬಂದಿದೆ. ಕ್ಲೌಡಿಯಾ ಗೋಲ್ಡಿನ್ (Claudia Goldin) ಅವರಿಗೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ನೊಬೆಲ್ ಅಕಾಡೆಮಿ ಮಾಹಿತಿ ಹಂಚಿಕೊಂಡಿದೆ. ಇನ್ನು ಆರ್ಥಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಕ್ಲೌಡಿಯಾ ಅವ್ರು ಸಾಕಷ್ಟು ಶ್ರಮ ವಹಿಸಿದ್ದರು. ಹೀಗಾಗಿ ಇದೇ ಶ್ರಮಕ್ಕೆ ಅವರಿಗೆ ಈಗ ಪ್ರತಿಫಲ ಸಿಕ್ಕಿದೆ. ಹಾಗಾದರೆ ಕ್ಲೌಡಿಯಾ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಏಕೆ? ಮುಂದೆ ಓದಿ.

ಕ್ಲೌಡಿಯಾ ಗೋಲ್ಡಿನ್ ಮಹತ್ವದ ಅಧ್ಯಯನ
ಇನ್ನು ಅಮೆರಿಕ ಮೂಲದ ಕ್ಲೌಡಿಯಾ ಗೋಲ್ಡಿನ್ 'ಮಹಿಳಾ ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರ ಉತ್ಪಾದನೆಗಳ ಮಾರುಕಟ್ಟೆ' ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದರು. ಹೀಗೆ ಈ ಕಾರ್ಯಕ್ಕಾಗಿ ಅವರಿಗೆ ಈಗ ಪ್ರಶಸ್ತಿ ಒಲಿದು ಬಂದಿದೆ. ಈ ಬಗ್ಗೆ ನೊಬೆಲ್ ಅಕಾಡೆಮಿ ಮಾಹಿತಿ ಹಂಚಿಕೊಂಡಿದೆ. ಇನ್ನು ಗೋಲ್ಡಿನ್ ಅವರು ತಮ್ಮ ಸಂಶೋಧನೆಗೆ ಸುಮಾರು 200 ವರ್ಷಗಳ ಅಂಕಿ-ಅಂಶವನ್ನು ಬಳಸಿರುವುದು ಗಮನ ಸೆಳೆದಿತ್ತು. ಹೀಗಾಗಿ ಇದೀಗ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ನ್ಯೂಯಾರ್ಕ್ ನಿವಾಸಿ ಕ್ಲೌಡಿಯಾ ಗೋಲ್ಡಿನ್, ಹಾರ್ವರ್ಡ್ ವಿವಿ ಸಂದರ್ಶಕ ಪ್ರಾಧ್ಯಾಪಕಿ ಕೂಡ ಆಗಿದ್ದಾರೆ.
ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಇತಿಹಾಸ
ಇನ್ನು ವೈದ್ಯಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಭಾಗದ ರೀತಿಯೇ ಅರ್ಥಶಾಸ್ತ್ರ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತದೆ ನೊಬೆಲ್ ಅಕಾಡೆಮಿ. 1968 ರಿಂದಲೇ Royal Swedish Academy ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಕೊಡುತ್ತಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 92 ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿಯು ಸಿಕ್ಕಿದೆ. ಕ್ಲೌಡಿಯಾ ಗೋಲ್ಡಿನ್ ಅವರು ಇರವಲ್ಲಿ ಒಬ್ಬರು ಎಂಬುದೇ ಅಮೆರಿಕನ್ನರಿಗೆ ಈಗ ಹೆಮ್ಮೆ ತರಿಸಿದೆ.
BREAKING NEWS
— The Nobel Prize (@NobelPrize) October 9, 2023
The Royal Swedish Academy of Sciences has decided to award the 2023 Sveriges Riksbank Prize in Economic Sciences in Memory of Alfred Nobel to Claudia Goldin “for having advanced our understanding of women’s labour market outcomes.”#NobelPrize pic.twitter.com/FRAayC3Jwb
ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ ಮತ್ತು ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿ ಇಂದು ಘೋಷಣೆಯಾಗಿದೆ. 1901 ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನು ಸಂಶೋಧಕ ಆಲ್ಫ್ರೆಡ್ ನೊಬೆಲ್ ಆಶಯಕ್ಕೆ ಅನುಗುಣವಾಗಿ ಜಗತ್ತಿನ ಪ್ರಗತಿಗೆ ಕಾರಣವಾದ ಕಾರ್ಯಕ್ಕೆ ನೊಬೆಲ್ ನೀಡಲಾಗುತ್ತೆ. ಈ ವರ್ಷ ನೊಬೆಲ್ ಪ್ರಶಸ್ತಿಗಳನ್ನ ಗೆಲ್ಲುವವರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೌನ್ ಸಿಗಲಿದೆ, ಅಮೆರಿಕದ ಡಾಲರ್‌ನಲ್ಲಿ 9,86,000 ನಷ್ಟು ಆಗುತ್ತದೆ. ಇದು ಹತ್ತಿರ ಹತ್ತಿರ ಸುಮಾರು 8 ಕೋಟಿ ರೂಪಾಯಿಗೆ ಸಮ.












Click it and Unblock the Notifications