ಅಮೆರಿಕ ಚುನಾವಣೆಯಲ್ಲಿ ಹೊಸ ಸಂಚಲನ ಶುರು: ಕಮಲಾ ಕೈಬಿಟ್ಟ ಭಾರತೀಯರು?
ಅಮೆರಿಕ ಚುನಾವಣೆಯಲ್ಲಿ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಗೆದ್ದೇ ಗೆಲ್ಲುತ್ತಾರೆ. ಈ ಮೂಲಕ ಭಾರತೀಯರು ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗ್ತಿದೆ. ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್, ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ಹೋರಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಸಮೀಕ್ಷೆಗಳ ವರದಿ ಪ್ರಕಾರ ಕಮಲಾ ಅವರ ಬೆನ್ನಿಗೆ ನಿಂತಿರುವ ಭಾರತೀಯರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಹಾಗಾದ್ರೆ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುತ್ತಾರಾ? ಏನಿದು ಹೊಸ ಸುದ್ದಿ?? ಬನ್ನಿ ತಿಳಿಯೋಣ.
ಅಷ್ಟಕ್ಕೂ ಇಷ್ಟು ದಿನಗಳ ಕಾಲ ಅಮೆರಿಕದಲ್ಲಿ ಇರುವ ಭಾರತೀಯರು ಕಮಲಾ ಹ್ಯಾರಿಸ್ ಅವರ ಬೆನ್ನಿಗೆ ನಿಂತಿದ್ದರು. ಅಲ್ಲದೆ ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ ಅಂತಾ ಕೂಡ ಹೀಗೆ ಎಲ್ಲಾ ಕಡೆ ಕೂಡ ಮಾತನಾಡುತ್ತಿದ್ದರು ಜನ. ಡೊನಾಲ್ಡ್ ಟ್ರಂಪ್ ಇದೇ ಕಾರಣಕ್ಕೆ ಸೋಲುವ ಹತಾಷೆಯಲ್ಲಿ ಒದ್ದಾಡುತ್ತಿದ್ದಾರೆ ಎಂಬ ಚರ್ಚೆ ಕೂಡ ಬಲು ಜೋರಾಗಿತ್ತು. ಇಂತಹ ಸಮಯದಲ್ಲಿ ಸಮೀಕ್ಷೆಗಳ ವರದಿ ಕಮಲಾ ಹ್ಯಾರಿಸ್ ಅವರಿಗೆ ಆಘಾತ ನೀಡಿದ್ದು, ಡೊನಾಲ್ಡ್ ಟ್ರಂಪ್ ಪರವಾಗಿ ಭಾರತ ಮೂಲದ ಅಮೆರಿಕ ಮತದಾರರ ಬೆಂಬಲ ಹೆಚ್ಚಾಗುತ್ತಿದೆ ಎಂಬ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಭಾರತೀಯರ ಮತ ಪಡೆಯಲು ಹೋರಾಟ
ಹೌದು, ಭಾರತ ಮೂಲದ ನಂಟು ಇರುವ ಕಾರಣಕ್ಕೆ ಕಮಲಾ ಹ್ಯಾರಿಸ್ ಅವರಿಗೆ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಬೆಂಬಲ ಸಿಗುವ ನಿರೀಕ್ಷೆ ಇತ್ತು. ಆದರೆ ಈಗಿನ ಕೆಲವು ಸಮೀಕ್ಷೆಗಳು ಕಮಲಾ ಹ್ಯಾರಿಸ್ ಅವರಿಗೆ ಆಘಾತ ನೀಡುತ್ತಿದೆ. ಅದು ಏನಂದ್ರೆ ನಿಧಾನವಾಗಿ ಕಮಲಾ ಹ್ಯಾರಿಸ್ ಅವರಿಗೆ ಭಾರತ ಮೂಲದ ಅಮೆರಿಕ ಮತದಾರರ ಬೆಂಬಲದಲ್ಲಿ ಇಳಿಕೆ ಆಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಹೀಗಿದ್ದರೂ ಕಮಲಾ ಹ್ಯಾರಿಸ್ ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಕಮಲಾ ಪರ ಉದ್ಯಮಿಗಳ ಬೆಂಬಲ ಸಿಕ್ಕಿಲ್ವಾ?
ಅಮೆರಿಕದಲ್ಲಿ ಉದ್ಯಮಿಗಳು ಕೂಡ ನೇರವಾಗಿ ಚುನಾವಣೆಯಲ್ಲಿ ಬೆಂಬಲ ಘೋಷಣೆ ಮಾಡುತ್ತಾರೆ. ಅದೇ ರೀತಿಯಾಗಿ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಅಮೆರಿಕದ ಅತ್ಯಂತ ಪ್ರಭಾವಿ ವ್ಯಕ್ತಿ ಕೂಡ ಆಗಿದ್ದಾರೆ. ಅಲ್ಲದೆ ಜಗತ್ತಿನ ಶ್ರೀಮಂತ ಎಂಬ ಹೆಮ್ಮೆ ಕೂಡ ಎಲಾನ್ ಮಸ್ಕ್ ಹೆಸರಿನಲ್ಲೇ ಇದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಈಗ ಎಲ್ಲಾ ರೀತಿಯ ಬೆಂಬಲ ನೀಡುತ್ತಿರುವ ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್, ಸದ್ಯ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ.
ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಪರವಾಗಿ ನಿಂತು ಗೆಲುವಿಗಾಗಿ ಶ್ರಮಿಸುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡ್ತಿದ್ದಾರೆ. ಆದರೆ ಕಮಲಾ ಹ್ಯಾರಿಸ್ ಪರವಾಗಿ ಅಷ್ಟಾಗಿ ಉದ್ಯಮಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಆದರೂ ಕಮಲಾ ಹ್ಯಾರಿಸ್ ಅವರ ಚುನಾವಣಾ ಖರ್ಚಿಗೆ ಈಗಾಗಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಅನುದಾನ ಸಿಕ್ಕಿದೆ.












Click it and Unblock the Notifications