ಶತ್ರು ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ರಷ್ಯಾ ಅಧ್ಯಕ್ಷ ಪುಟಿನ್!

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಅವರ ಶತ್ರು ಹಾಗೂ ರಷ್ಯಾ ದೇಶವನ್ನೇ ತನ್ನ ದಂಗೆ ಮೂಲಕ ಹೆದರಿಸಿದ್ದ ಯೆವ್ಗೆನಿ ಪ್ರಿಗೊಝಿನ್ ಈಗ ದುರಂತ ಅಂತ್ಯ ಕಂಡಿದ್ದಾನೆ. ರಷ್ಯಾದ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ, ಪ್ರಿಗೊಝಿನ್ ಮತ್ತು ಆತನ ಜೊತೆ ಇದ್ದ 10 ಜನ ಮೃತಪಟ್ಟಿದ್ದಾರೆ. ಆದ್ರೆ ಪ್ರಿಗೊಝಿನ್ ಅವರದ್ದು ಕೊಲೆ ಅಂತಾ ಅಮೆರಿಕ ಮತ್ತು ಅಮೆರಿಕದ ಸ್ನೇಹಿತರು ಆರೋಪಿಸುವಾಗ ರಷ್ಯಾ ಅಧ್ಯಕ್ಷ ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ.

ಉಕ್ರೇನ್ ಜೊತೆ ಭೀಕರ ಯುದ್ಧ ನಡೆಸುತ್ತಿರುವ ರಷ್ಯಾ ಜೂನ್‌ನಲ್ಲಿ ತನ್ನ ದೇಶ ಉಳಿದರೆ ಸಾಕು ಎಂಬ ಹಂತಕ್ಕೆ ಬಂದಿತ್ತು. ಜೂನ್ 23ರಂದು ದಿಢೀರ್ ತಮ್ಮ ದೇಶದ ವಿರುದ್ಧವೇ ರಷ್ಯಾ ಖಾಸಗಿ ಸೇನೆ ಬಂಡಾಯ ಎದ್ದು, ಆಂತರಿಕ ದಂಗೆಗೆ ಮುಂದಾಗಿತ್ತು. ಆದರೆ ಇದೇ ವೇಳೆ ಪುಟಿನ್ ತಮ್ಮ ಅತ್ಯಾಪ್ತ ಗೆಳೆಯ ಬೆಲಾರಸ್ ಮೂಲಕ ಸಂಧಾನ ಮಾಡಿಸಿ, ದಂಗೆ ಎದ್ದಿದ್ದ ಖಾಸಗಿ ಸೇನೆಯನ್ನ ತಣ್ಣಗಾಗಿಸಿದ್ದರು. ಕೇವಲ ಒಂದೇ ದಿನದಲ್ಲಿ ದಂಗೆಗೆ ಅಂತ್ಯ ಹಾಡಿದ್ದರು. ಜೂನ್ 23ರಂದು ಶುರುವಾಗಿದ್ದ ದಂಗೆ ಜೂನ್ 24ರಂದು ಅಂತ್ಯವಾಗಿತ್ತು. ಆದರೆ ರಷ್ಯಾ ಅಧ್ಯಕ್ಷರ ಜೊತೆ ಕಿರಿಕ್ ಮಾಡಿದ್ದ ಪ್ರಿಗೊಝಿನ್ ಶಿವನ ಪಾದ ಸೇರಿದ್ದಾನೆ.

Discover What Russian president Putin said about wagner group chief death

ಶತ್ರು ಸಾವಿಗೆ ಪುಟಿನ್ ಕಂಬನಿ!

ಇಂದು ಬೆಳಗ್ಗೆಯಷ್ಟೆ ಅಮೆರಿಕ ಅಧ್ಯಕ್ಷರು ರಷ್ಯಾ ಖಾಸಗಿ ಸೇನೆ ಮುಖ್ಯಸ್ಥನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ರು. ರಷ್ಯಾದಲ್ಲಿ ಪುಟಿನ್ ಹಿಂದೆ ನಿಲ್ಲದವರದ್ದು ಅಲ್ಲಿ ಏನು ನಡೆಯಲ್ಲ ಆದ್ರೆ ಅದಕ್ಕೆ ಉತ್ತರ ಸ್ಪಷ್ಟವಾಗಿಲ್ಲ ಎಂದು ಬೈಡನ್ ಪರೋಕ್ಷವಾಗಿ ಪುಟಿನ್‌ಗೆ ತಿರುಗೇಟು ಕೊಟ್ಟಿದ್ದರು. ಈಗ ಪ್ರಿಗೊಝಿನ್ ಸಾವಿನ ಬಗ್ಗೆ ಖುದ್ದು ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ. 'ಜಾಣ ವ್ಯಕ್ತಿ, ಆದರೆ ತಪ್ಪು ಮಾಡಿದ್ದ' ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಈ ಮೂಲಕ ಯೆವ್ಗೆನಿ ಪ್ರಿಗೊಝಿನ್ ಸಾವಿಗೆ ಪುಟಿನ್ ಸಂತಾಪ ಸೂಚಿಸಿದ್ದಾರೆ. ಹೀಗೆ ಪುಟಿನ್ ತನ್ನ ಶತ್ರು ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದು ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ ಪುಟಿನ್ ಶತ್ರುಗಳು ಇದು ನಾಟಕ ಅಂತಾ ಆರೋಪಿಸುತ್ತಿದ್ದಾರೆ.

Discover What Russian president Putin said about wagner group chief death

ಪುಟಿನ್ ಬೆನ್ನಿಗೆ ಪ್ರಿಗೊಝಿನ್ ಚೂರಿ?

ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನೆಯಷ್ಟೇ ಪ್ರಬಲ. ಪುಟಿನ್‌ ಅಧಿಕಾರ ಅವಧಿಯಲ್ಲಿ ಖಾಸಗಿ ಸೇನೆ ಸ್ಥಾಪನೆ ಆಗಿತ್ತು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆ ಇರುವ ಈ ವ್ಯಕ್ತಿ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ವ್ಲಾದಿಮಿರ್ ಪುಟಿನ್ ಪರ್ಮಿಷನ್ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪಿಸಿದ್ದ ಈ ಪ್ರಿಗೊಝಿನ್. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧ ವಿಚಾರದಲ್ಲಿ ಪ್ರಿಗೊಝಿನ್‌ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಆಗಿತ್ತು. ಕಿತ್ತಾಟವು ಜೋರಾಗಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗಲೇ ಪುಟಿನ್ ಬೆನ್ನಿಗೆ ಚೂರಿ ಹಾಕಿದ್ದಾನೆ ಪ್ರಿಗೊಝಿನ್ ಅನ್ನೋ ಆರೋಪ ಬಂದಿತ್ತು.

Discover What Russian president Putin said about wagner group chief death

ಖಾಸಗಿ ಸೈನಿಕರಿಗೆ ಮೋಸ ಮಾಡಿತ್ತಾ ರಷ್ಯಾ?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡುತ್ತಿಲ್ಲ. ಸೌಲಭ್ಯ ಸಿಗದೆ ವ್ಯಾಗ್ನರ್ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದ್ರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಕಿತ್ತಾಟ ಇನ್ನೂ ಸಣ್ಣದಾಗಿರುವಾಗ ರಷ್ಯಾ ಅಧ್ಯಕ್ಷರು & ರಕ್ಷಣಾ ಸಚಿವ ಅದನ್ನ ಸೈಲೆಂಟ್ ಮಾಡಲಿಲ್ಲ. ಇದೇ ಅಸಮಾಧಾನ ದೊಡ್ಡದಾಗಿ ಪುಟಿನ್ ವಿರುದ್ಧವೇ ದಂಗೆ ಎದ್ದಿದ್ದ. ರಷ್ಯಾದ ಒಳಗಡೆ ನುಗ್ಗಿ ರಂಪಾಟ ಮಾಡಿತ್ತು ಯೆವ್ಗೆನಿ ಪ್ರಿಗೊಝಿನ್ & ಗ್ಯಾಂಗ್. ಇದೀಗ ನೋಡಿದರೆ ಅನುಮಾನ ಬರುವಂತೆ ಮೃತಪಟ್ಟಿದ್ದಾನೆ ಯೆವ್ಗೆನಿ ಪ್ರಿಗೊಝಿನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+