ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ಗೆ ಜೈಲು ಗ್ಯಾರಂಟಿ?
ದೊಡ್ಡಣ್ಣ ಎಂಬ ಬಿರುದು ಪಡೆದ ಅಮೆರಿಕ ಕಳೆದ ಕೆಲವು ವರ್ಷಗಳಿಂದ ಅಲ್ಲಾಡಿ ಹೋಗಿದೆ. ಅದರಲ್ಲೂ ಇಡೀ ಜಗತ್ತಿನ ಮೇಲೆ ನಿಯಂತ್ರಣ ಹೊಂದಲು ಸದಾ ಯತ್ನಿಸುವ ಈ ದೇಶಕ್ಕೆ ಈಗ ಬುಡವೇ ಅಲುಗಾಡುತ್ತಿದೆ. ಹೀಗಿದ್ದಾಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿದೆ. ಅಕಸ್ಮಾತ್ ಡೊನಾಲ್ಡ್ ಟ್ರಂಪ್ ಜೈಲಿಗೆ ಹೋದರೆ ಕಥೆ ಏನು? ಬನ್ನಿ ಆ ಬಗ್ಗೆ ಅಮೆರಿಕದ ಕಾನೂನು ಹೇಳುವುದು ಏನು ಅನ್ನೋ ಮಾಹಿತಿ ತಿಳಿಯೋಣ.
ಅಷ್ಟಕ್ಕೂ 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್, ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿ ಚಿತ್ರಗಳ ತಾರೆ ಅಂದ್ರೆ ಬ್ಲೂ ಫಿಲಂ ಸ್ಟಾರ್‌ಗೆ ಹಣ ನೀಡಿದ್ದ ಪ್ರಕರಣ ಸಂಬಂಧ ಇದೀಗ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ ಎಂದು ಕೋರ್ಟ್ ಈಗ ತೀರ್ಪು ನೀಡಿದೆ. ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ಒಟ್ಟಾರೆ 11 ನ್ಯಾಯಾಧೀಶರ ಸಮಿತಿ ಸರ್ವಾನುಮತ ಮೂಲಕ ಈ ತೀರ್ಪು ನೀಡಿದ್ದು, ಟ್ರಂಪ್ ಅವರಿಗೆ ಭೀಕರ ಆಘಾತ ನೀಡಿದೆ. ಹಾಗಾದ್ರೆ ಈಗ ಡೊನಾಲ್ಡ್ ಟ್ರಂಪ್ ಜೈಲಿಗೆ ಹೋಗ್ತಾರಾ? ಮುಂದೆ ಓದಿ.

ವಿವಾದಾತ್ಮಕ ಅಧ್ಯಕ್ಷ ಟ್ರಂಪ್!
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎಂಬ ಕುಖ್ಯಾತಿ ಪಡೆದಿದ್ದವರು ಟ್ರಂಪ್. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಒಂದಲ್ಲ ಒಂದು ರೀತಿ ಎಡವಟ್ಟು ಮಾಡಿಕೊಂಡು ಸದಾ ವಿವಾದಕ್ಕೆ ಗುರಿಯಾಗಿದ್ದರು. ಹೀಗಿದ್ದರೂ 2016 ರಲ್ಲಿ ಅಧಿಕಾರ ವಹಿಸಿಕೊಂಡು ಟ್ರಂಪ್ 2020ರ ತನಕ ಅಧಿಕಾರ ನಡೆಸಿದ್ದರು. ಆ ನಂತರ ಸಾಲು ಸಾಲು ವಿವಾದ ಟ್ರಂಪ್ ಬೆನ್ನಿಗೆ ಅಂಟಿಕೊಂಡವು.
ಇದೀಗ ನೀಲಿ ಚಿತ್ರಗಳ ತಾರೆಗೆ, ಕದ್ದು ಮುಚ್ಚಿ ಹಣ ನೀಡಿದ್ದಾರೆ ಎನ್ನುವ ಆರೋಪದಲ್ಲೂ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಅಮೆರಿಕದ ಕೋರ್ಟ್ ಟ್ರಂಪ್ ಅವರಿಗೆ ನೀಡುವ ಶಿಕ್ಷೆ ಏನು ಎಂಬ ಆದೇಶವನ್ನ ಮುಂದಿನ ವಾರ ನೀಡಲಿದೆ ಎನ್ನಲಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್‌ಗೆ ಜೈಲು ಶಿಕ್ಷೆ ಸಿಗುವ ಭೀತಿ ಆವರಿಸಿದೆ. ಅಕಸ್ಮಾತ್ ಡೊನಾಲ್ಡ್ ಟ್ರಂಪ್ ಜೈಲಿಗೆ ಹೋದರೆ ಕಥೆ ಏನು? ಬನ್ನಿ ಆ ಬಗ್ಗೆ ಅಮೆರಿಕದ ಕಾನೂನು ಹೇಳುವುದು ಏನು ಅನ್ನೋ ಮಾಹಿತಿ ತಿಳಿಯೋಣ.
ಜೈಲಿಗೆ ಹೋದರೂ ಟ್ರಂಪ್ ಗೆಲ್ಲಬಹುದು!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಇನ್ನೇನು ಬಂದೇ ಬಿಡುತ್ತೆ. ಚುನಾವಣೆ ಹತ್ತಿರದಲ್ಲೇ ಇರುವ ಸಮಯದಲ್ಲಿ ಪ್ರಶ್ನೆಯೊಂದು ಮೂಡಿದ್ದು, ಅಕಸ್ಮಾತ್ ಡೊನಾಲ್ಡ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಪರಿಸ್ಥಿತಿ ಏನು? ಅದಕ್ಕೂ ಉತ್ತರ ಇದೆ. ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗಾಗಿ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೆ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗಲಾರದು. ಜೈಲಲ್ಲೇ ಇದ್ದು ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕದ ಕಾನೂನು ಅನುಮತಿ ನೀಡುತ್ತದೆ.












Click it and Unblock the Notifications