Get Updates
Get notified of breaking news, exclusive insights, and must-see stories!

ಕೈಲಾಸ ಮಾನಸ ಯಾತ್ರೆಗೂ ಮುನ್ನ ಮಾಂಸಾಹಾರ ಸೇವಿಸಿದರೇ ರಾಹುಲ್?

Recommended Video

      ರಾಹುಲ್ ಗಾಂಧಿ ಮೇಲೆ ಮತ್ತೊಂದು ಅಪವಾದ | Oneindia Kannada

      ಕಠ್ಮಂಡು, ಸೆಪ್ಟೆಂಬರ್ 05: ಮಾನಸ ಸರೋವರ ಯಾತ್ರೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿದರೇ?

      ರಾಹುಲ್ ಊಟಕ್ಕೆಂದು ತೆರಳಿದ್ದ ರೆಸ್ಟಾರೆಂಟ್ ನ ವೇಟರ್ ವೊಬ್ಬರು ನೀಡಿದ ಮಾಹಿತಿಯ ಮೇರೆಗೆ ನೇಪಾಳಿ ವೆಬ್ ಸೈಟ್ ಗಳು ರಾಹುಲ್ ಗಾಂಧಿ ಅವರು ಚಿಕನ್ ಕುರ್ಕುರೆ ಮತ್ತು ಮೊಮೋಸ್ ತಿಂದಿದ್ದಾರೆ ಎಂದು ಬರೆದಿದ್ದವು.

      ನಂತರ ಈ ಕುರಿತು ಸಾಕಷ್ಟು ಮಾಧ್ಯಮಗಳು ರೆಸ್ಟಾರೆಂಟ್ ಅನ್ನು ಸಂಪರ್ಕಿಸಿ ರಾಹುಲ್ ಗಾಂಧಿ ಅವರು ಮಾಂಸಾಹಾರ ತಿಂದಿದ್ದು ಸತ್ಯವೇ ಎಂದು ಪ್ರಶ್ನಿಸಿತ್ತು.

      ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಟ್ವೀಟ್ ಮಾಡಿ, 'ಕೈಲಾಸ ಮಾನಸ ಸರೋವರ ಯಾತ್ರೆಗೂ ಮುನ್ನ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿದ್ದಾರೆ ಎಂದು ರೆಸ್ಟಾರೆಂಟ್ ನ ವೇಟರ್ ಹೇಳಿದ್ದಾರೆ. ಹಿಂದುಗಳ ನಂಬಿಕೆಗೆ ನಿರಂತರವಾಗಿ ಭಂಗ ತರುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಆದ್ಯ ಗುರಿಯಾದಂತಿದೆ' ಎಂದಿದ್ದರು.

      ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ರೆಸ್ಟಾರೆಂಟ್, ರಾಹುಲ್ ಗಾಂಧಿ ಅವರು ಯಾವುದೇ ಮಾಂಸಾಹಾರಕ್ಕೆ ಆರ್ಡರ್ ಮಾಡಿಲ್ಲ. ಅವರು ಶುದ್ಧ ಶಾಖಾಹಾರಿ ತಿಂಡಿಗಳನ್ನೇ ಆರ್ಡರ್ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದೆ.

      Did Rahul Gandhi eat non-veg food before beginning Kailash Mansarovar Yatra?

      ಆ.31 ರಂದು ಕೈಲಾಸ ಮಾನಸ ಸರೋವರ ಯಾತ್ರೆಗೆಂದು ರಾಹುಲ್ ಗಾಂಧಿ ತೆರಳಿದ್ದಾರೆ. ಏಪ್ರಿಲ್ ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರಿದ್ದ ವಿಮಾನ ಭಾರೀ ಅವಘಡದಿಂದ ತಪ್ಪಿದ್ದು, ಆ ಪ್ರಯುಕ್ತ ದೇವರ ಆಶೀರ್ವಾದ ಪಡೆಯಲು ತೆರಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+