ಅಣ್ಣನ ಪರ ಸೇಡು ತೀರಿಸಿಕೊಳ್ಳಲು ತಂಗಿ ಎಂಟ್ರಿ!
ಉತ್ತರ ಕೊರಿಯಾ: ಒಂದು ಕುಟುಂಬಕ್ಕೆ ಸೇಲ್ ಆದ ದೇಶ ಅದು. ಸರ್ವಾಧಿಕಾರಿ ವಿರುದ್ಧ ಯಾರೇ ಕೆಮ್ಮಿದರೂ ಕೊಲೆ ಗ್ಯಾರಂಟಿ. ಅಂದಹಾಗೆ ಉತ್ತರ ಕೊರಿಯಾದ ಇಂತಹ ತಿಕ್ಕಲು ರೂಲ್ಸ್ ನಡುವೆ ನಿನ್ನೆ ಸರ್ವಾಧಿಕಾರಿ ಹಾರಿಸಿದ್ದ ಮೊದಲ ಸೇನಾ ಉಪಗ್ರಹ ನೀರಿಗೆ ಬಿದ್ದು ಢಂ.. ಅಂದಿದೆ. ಹೀಗಾಗಿ ಅವನ ತಂಗಿ ಅಖಾಡ ಪ್ರವೇಶ ಮಾಡಿ ಗುಡುಗಿದ್ದಾಳೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮ್ ಯೋ ಜಾಂಗ್ ಇದೀಗ ಗುಟುರು ಹಾಕಿದ್ದಾಳೆ. ಕಿಮ್ ಯೋ ಜಾಂಗ್ (Kim Yo Jong) ಹೇಳಿಕೆಯ ಪ್ರಕಾರ ಒಂದು ಉಪಗ್ರಹ ಉಡಾವಣೆ ಮಾಡುವಾಗ ಸೋತ ತಕ್ಷಣ, ಸುಮ್ಮನೆ ಕೂರುವ ಮಾತಿಲ್ಲ. ಮುಂದೆ ನಮಗೆ ಇದು ಒಳ್ಳೆ ರೀತಿ ಪಾಠ ಕಲಿಸಿದೆ, ಹೀಗಾಗಿ ಇನ್ನಷ್ಟು ಉಪಗ್ರಹ ಭೂಮಿಯ ಕಕ್ಷೆಗೆ ಉತ್ತರ ಕೊರಿಯಾ ಕಡೆಯಿಂದ ಎಂಟ್ರಿ ಕೊಡೋದು ಗ್ಯಾರಂಟಿ ಎಂದಿದ್ದಾಳೆ!

ಶತ್ರುಗಳ ಎದೆ ನಡುಗಿಸಿದ್ದ ಕಿಮ್ ತಂಗಿ!
ಈಕೆ ಬರೀ ಕಿಮ್ ತಂಗಿಯಲ್ಲ, ಉತ್ತರ ಕೊರಿಯಾ ಜನರ ಪಾಲಿಗೆ ನಾಯಕಿ. ಅದರಲ್ಲೂ ಕಿಮ್‌ಗೆ ರೈಟ್ ಹ್ಯಾಂಡ್ ಅಂತಾನೂ ಕರೆಸಿಕೊಂಡ ಉದಾಹರಣೆ ಇದೆ. ಏಕೆಂದರೆ ಅಣ್ಣನಿಗೆ ಯಾವಾಗಲೇ ಸಮಸ್ಯೆ ಎದುರಾಗಲಿ, ಅಲ್ಲಿಗೆ ಈ ಕಿಮ್ ಯೋ ಜಾಂಗ್ (North Korea) ಬಂದುಬಿಡ್ತಾಳೆ. ಅಣ್ಣನ ಕಂಡರೆ ಈಕೆಗೆ ಅಷ್ಟು ಪ್ರೀತಿ. ಈಗಲೂ ಅಷ್ಟೇ ಕಿಮ್ ಜಾಂಗ್ ಉನ್ ಬೆಂಬಲಕ್ಕೆ ಬಂದಿದ್ದಾಳೆ ಮುದ್ದಿನ ತಂಗಿ.
ಮುಂದೆ ಇದೆ ಮಾರಿಹಬ್ಬ!
ಹೌದು ಕಿಮ್ ಯೋ ಜಾಂಗ್ ಮಾತನಾಡಿರುವ ರೀತಿ ನೋಡಿದರೆ ಇನ್ನು ಕೆಲವೇ ದಿನದಲ್ಲಿ ಉತ್ತರ ಕೊರಿಯಾ ಮತ್ತೊಂದು ಸೇನಾ ಅಥವಾ ಗುಪ್ತಚರ ಉಪಗ್ರಹ ಉಡಾಯಿಸುವ ಬಗ್ಗೆ ಸಿದ್ಧತೆ ನಡೆಸಿದೆ. ಖಾಸಗಿ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಕಿಮ್ ಯೋ ಜಾಂಗ್, ನಮ್ಮ ಸೋಲು ನೋಡಿ ನಗುತ್ತಿರುವವರಿಗೆ ಇನ್ನೇನು ಕೆಲ ದಿನದಲ್ಲಿ ಈ ಬಗ್ಗೆ ಸರಿಯಾದ ಉತ್ತರ ಸಿಗಲಿದೆ ಎಂದಿದ್ದಾಳೆ. ಇದು ಜಪಾನ್, ತೈವಾನ್ & ಅಮೆರಿಕದ ಎದೆ ನಡುಗಿಸಿದೆ.
ಅಣ್ಣನ ನಂತರ ತಂಗಿಗೆ ಸ್ಥಾನ?
ಉತ್ತರ ಕೊರಿಯಾದ ಈಗಿನ ಸ್ಥಿತಿ ನೋಡಿದರೆ, ಕಿಮ್ ಜಾಂಗ್ ಉನ್ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈಗಾಗಲೇ 40 ವಯಸ್ಸು ದಾಟಿದ ಕಿಮ್ ಜಾಂಗ್ ಉನ್ ತನ್ನ ಜಾಗ ಬಿಟ್ಟುಕೊಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಕಿಮ್ ಜಾಗದಲ್ಲಿ ಮುಂದೆ ಕೂರುವ ವ್ಯಕ್ತಿ ಯಾರು? ಎಂಬ ಪ್ರಶ್ನೆ ಮೂಡುತ್ತಿದೆ. ಇದೇ ಹೊತ್ತಲ್ಲಿ ಕಿಮ್ ಜಾಂಗ್ ಉನ್ ಪಾಲಿನ ಮುದ್ದಿನ ತಂಗಿ ಕಿಮ್ ಯೋ ಜಾಂಗ್ ಹೆಸರು ಕೇಳಿಬರುತ್ತಿದೆ.

ಹೇಗಿ ಬಿದ್ದಿತ್ತು ಉಪಗ್ರಹ?
ಅಂದಹಾಗೆ ನಿನ್ನೆ ಬೆಳಗ್ಗೆ 6.27ಕ್ಕೆ ಉತ್ತರ ಫಿಯೋಂಗನ್ ಪ್ರಾಂತ್ಯ, ಚೋಲ್ಸನ್ ಕೌಂಟಿಯ ಸೋಹೆ ಉಪಗ್ರಹ ಉಡಾವಣಾ ಮೈದಾನದಿಂದ ಉತ್ತರ ಕೊರಿಯಾದ ಮೊದಲ ಸೇನಾ ಉಪಗ್ರಹ ಹೊತ್ತಿದ್ದ ರಾಕೆಟ್ ಉಡಾವಣೆ ಆಗಿತ್ತು. ಆದರೆ ಹೀಗೆ ಲಾಂಚ್ ಮಾಡಿದ ಕೆಲವೇ ನಿಮಿಷದಲ್ಲಿ ಅದು ಸಮುದ್ರಕ್ಕೆ ಬಿದ್ದು ಹೋಗಿತ್ತು. ಹೀಗಾಗಿ ಮತ್ತೊಮ್ಮೆ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದೆ ಉತ್ತರ ಕೊರಿಯಾ.
ಒಟ್ನಲ್ಲಿ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ ಉತ್ತರ ಕೊರಿಯಾ ಉಪಗ್ರಹ ಉಡಾವಣೆ ಕೆಲಸದಲ್ಲಿ ಸೋತಿದ್ದರೂ ಅದನ್ನ ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ಇದು ಸರ್ವಾಧಿಕಾರಿ ಕಿಮ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಮತ್ತೊಂದು ಹೋರಾಟಕ್ಕೆ ಸಿದ್ಧನಾಗಿದ್ದು ಮುಂದೆ ಜಪಾನ್, ದಕ್ಷಿಣ ಕೊರಿಯಾ & ಅಮೆರಿಕಗೆ ಏನ್ ಕಾದಿದೆಯೋ ಗೊತ್ತಿಲ್ಲ. ಹೀಗಾಗಿ ಅಮೆರಿಕ ಕೂಡ ಉತ್ತರ ಕೊರಿಯಾದ ಈ ಪ್ರಯತ್ನಗಳನ್ನ ತಡೆಯಲು ಜಪಾನ್ ಮತ್ತು ದಕ್ಷಿಣ ಕೊರಿಯಾ ಸಹಾಯ ಬಯಸುತ್ತಿದೆ. ಆದರೆ ಅದೇ ಉಲ್ಟಾ ಆಗಿ ಪರಿಸ್ಥಿತಿ ಬಿಗಡಾಯಿಸಿದೆ.












Click it and Unblock the Notifications