ಢಾಕಾ ಕಾರ್ಯಾಚರಣೆ ಅಂತ್ಯ: 6 ಉಗ್ರರ ಹತ್ಯೆ, 14 ಜನರ ರಕ್ಷಣೆ

Written By:
Subscribe to Oneindia Kannada

ಢಾಕಾ, ಜುಲೈ, 02: ಮಿಂಚಿನ ಕಾರ್ಯಾಚರಣೆ ನಡೆಸಿದ ಬಾಂಗ್ಲಾದೇಶದ ಸೈನಿಕರು ಆರು ಮಂದಿ ಉಗ್ರರನ್ನು ಹತ್ಯೆ ಮಾಡಿ ಒತ್ತೆಯಾಳಾಗಿದ್ದ 14 ಜನರನ್ನು ರಕ್ಷಣೆ ಮಾಡಿದ್ದಾರೆ.

ಢಾಕಾದ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಮೇಲೆ ಶುಕ್ರವಾರ ರಾತ್ರಿ ಏಕಾಏಕಿ ದಾಳಿ ಮಾಡಿದ ಉಗ್ರರು ಅನೇಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆ ಯೋಧರು ಸತತ 14 ಗಂಟೆಗಳ ನಂತರ ಕಾರ್ಯಾಚರಣೆ ಅಂತ್ಯಗೊಳಿಸಿದ್ದಾರೆ.[ಢಾಕಾದಲ್ಲಿ ಉಗ್ರರ ದಾಳಿ: 60 ವಿದೇಶಿಗರು ಒತ್ತೆಯಾಳು]

dhaka

100ಕ್ಕೂ ಹೆಚ್ಚು ಕಮಾಂಡರ್ ಗಳು ಸುಧೀರ್ಘ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಒಬ್ಬ ಉಗ್ರ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.[ರಂಜಾನ್ ತಿಂಗಳಲ್ಲಿ ಹೆಚ್ಚಾಗುತ್ತಿದೆ ಉಗ್ರರ ದಾಳಿ!]

dhaka

ಗಾಯಗೊಂಡ ಒತ್ತೆಯಾಳುಗಳನ್ನು ಗುಲ್‌ಶನ್‌ ಮಾರ್ಗವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಡುಗಡೆಯಾಗಿರುವ ಒತ್ತೆಯಾಳುಗಳಲ್ಲಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದಾರೆ. ಇಬ್ಬರು ಬಾಂಗ್ಲಾ ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಬಲಿದಾನ ಮಾಡಿದ್ದಾರೆ. ಘಟನೆಯ ಹೊಣೆಯನ್ನು ಇಲ್ಲಿಯವರೆಗೆ ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bangladeshi troops rescued 14 hostages and shot dead six gunmen, ending an hourslong siege at a cafe in Dhaka, army Brig. Gen. Mujibur Rahman said Saturday.
Please Wait while comments are loading...