Get Updates
Get notified of breaking news, exclusive insights, and must-see stories!

ದೆವ್ವದ ಮುಖ ಮೇಕಪ್ ಮತ್ತು ಫೋಟೋಶಾಪ್‌ನ ಪವಾಡ; ಏಂಜಲೀನಾ ಜೋಲಿ

ಭಯಾನಕ ನೋಟಗಳನ್ನು ಪ್ರದರ್ಶಿಸುವ ಮೂಲಕ ಖ್ಯಾತಿ ಪಡೆದಿದ್ದ ಹಾಲಿವುಡ್ ಸೂಪರ್‌ಸ್ಟಾರ್ ಏಂಜಲೀನಾ ಜೋಲಿ ಸದ್ಯ ತಮ್ಮ ನೈಜ ಮುಖದೊಂದಿಗೆ ಮರಳಿದ್ದಾರೆ. ಕೆಲವು ವರ್ಷಗಳ ಹಿಂದೆ ಝಾಂಬಿ ಏಂಜೆಲಿನಾ ಜೋಲಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಪ್ರಸಿದ್ಧರಾಗಿದ್ದರು.

2017ರ ನಂತರ ಈಗ ಈ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಝಾಂಬಿ ಏಂಜೆಲಿನಾ ಜೋಲಿ ಬೇರೆ ಯಾವುದೇ ಭಯಾನಕ ಚಿತ್ರದೊಂದಿಗೆ ಸುದ್ದಿಯಲಿಲ್ಲ. ಬದಲಿಗೆ ತನ್ನ ನೈಜ ನೋಟದೊಂದಿಗೆ ಕಾಣಿಸಿಕೊಂಡಿದ್ದಾರೆ. ದೆವ್ವದ ಮುಖದೊಂದಿಗೆ ಏಂಜಲೀನಾ ಜೋಲಿ ಎಲ್ಲರನ್ನೂ ಹೆದರಿಸಿದ ಸಹರ್ ತಬರ್ ಎಂಬ ಈ ಇನ್‌ಸ್ಟಾಗ್ರಾಮ್ ತಾರೆ ಕೊನೆಗೂ ತನ್ನ ಮುಖದ ಮುಸುಕನ್ನು ತೆಗೆದುಹಾಕಿದ್ದಾರೆ. ಜೈಲಿನಿಂದ ಹೊರಬಂದ ಅವರು ಸತ್ಯ ಹೇಳಿಕೊಂಡಿದ್ದಾರೆ.

ಸಹರ್ ತಬರ್ ಇರಾನ್‌ನ ಟೆಹ್ರಾನ್‌ನಿಂದ ಬಂದವರು. ಇವರು ಮಾಡಿದ ಏಂಜಲೀನಾ ಜೋಲಿಯ ಪಾತ್ರವು ಎಷ್ಟು ಆಸಕ್ತಿದಾಯಕವಾಗಿದೆಯೋ, ಅವರ ಜೀವನ ಕಥೆಯೂ ಅಷ್ಟೇ ಆಸಕ್ತಿದಾಯಕವಾಗಿದೆ. ಸಹರ್ ದೆವ್ವದಂತೆ ಕಾಣಲು 50 ಶಸ್ತ್ರಚಿಕಿತ್ಸೆಗೆ ಒಳಗಾದಳು. ಆದರೆ ಅದು ಅವಳು ದೆವ್ವದಂತೆ ಕಾಣುವಷ್ಟು ಕೆಟ್ಟದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದು ಜೋಲಿಯಾ ಹೇಳಿಕೊಂಡಿದ್ದಳು.

ಜೈಲಿನಲ್ಲಿ ಕಳೆದ ಸಮಯ

ಜೈಲಿನಲ್ಲಿ ಕಳೆದ ಸಮಯ

ಮುಖವಷ್ಟೇ ಅಲ್ಲ ಸಹರ್ ಅವರ ಜೀವನದ ಕಥೆಯೂ ಸಾಕಷ್ಟು ಆಸಕ್ತಿದಾಯಕವಾಗಿದೆ. ವಾಸ್ತವವಾಗಿ, ಇರಾನ್‌ನ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು. 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಸಹಾರ್ ಅವರ ತಾಯಿ ಕಳೆದ ವರ್ಷ ಏಂಜಲೀನಾ ಜೋಲಿ ಅವರಿಗೆ ಪತ್ರ ಬರೆದು- 'ಪ್ರೀತಿಯ ಏಂಜಲೀನಾ ಜೋಲಿ, ನಿನ್ನ ಧ್ವನಿ ನಮಗೆ ತೀರಾ ಅಗತ್ಯವಾಗಿದೆ' ಎಂದು ನೋವು ತೋಡಿಕೊಂಡಿದ್ದರು. ಸಹರ್ ಅವರ ನಿಜವಾದ ಹೆಸರು ಫಾತೇಮಾ ಶಿಖ್ವಾಂದ್, ದೇಶದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಇವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ಆಕೆ ತನ್ನ ನೈಜ ಮುಖದೊಂದಿಗೆ ಜನರ ಮುಂದೆ ಬಂದಿದ್ದಾಳೆ. ಹಿಂದೂಸ್ತಾನ್ ಟೈಮ್ಸ್‌ನ ಸುದ್ದಿಯ ಪ್ರಕಾರ, ಸಹರ್ ಅವರು ಕೇವಲ 14 ತಿಂಗಳು ಜೈಲಿನಲ್ಲಿ ಕಳೆದ ನಂತರ ಬಿಡುಗಡೆಯಾದರು.

'ಪ್ಲಾಸ್ಟಿಕ್ ಸರ್ಜರಿಯಿಂದ ದೆವ್ವದ ರೂಪ'

'ಪ್ಲಾಸ್ಟಿಕ್ ಸರ್ಜರಿಯಿಂದ ದೆವ್ವದ ರೂಪ'

ಈ ಹಿಂದೆ ಆಕೆ ಪ್ಲಾಸ್ಟಿಕ್ ಸರ್ಜರಿಯಿಂದಾಗಿ ದೆವ್ವದ ಆಕಾರ ಪಡೆದುಕೊಂಡಿದೆ ಎಂಬ ಹೇಳಿಕೆ ಸುಳ್ಳು. ಆಕೆಯ ನೋಟವು ಪ್ಲಾಸ್ಟಿಕ್ ಸರ್ಜರಿಯಿಂದ ಅಲ್ಲ, ಬದಲಿಗೆ ತಮಾಷೆಯಾಗಿ ಆಕೆ ಕಟ್ಟಿದ ಕಥೆಯಾಗಿತ್ತು. ಆಗ ಸಹರ್ ತಬರ್ ಅವರಿಗೆ ಕೇವಲ 19 ವರ್ಷ. ತಮಾಷೆಗಾಗಿ ಕಟ್ಟಿದ ಕಥೆಯಿಂದಾಗಿ ಆಕೆ ಜೈಲಿಗೆ ಹೋಗಬೇಕಾಯಿತು. ಮಗಳನ್ನು ರಕ್ಷಿಸಲು ಸಹರ್ ಅವರ ತಾಯಿ ಪ್ರತಿದಿನ ಕಣ್ಣೀರು ಹಾಕಿದ್ದಾರೆ. ಒಂದು ತಮಾಷೆ ಎಷ್ಟೇಲ್ಲಾ ಅನಾಹುತವನ್ನು ಸೃಷ್ಟಿ ಮಾಡುತ್ತದೆ ಎನ್ನುವದಕ್ಕೆ ಇದೇ ಉದಾಹರಣೆ.

ದೆವ್ವದ ಮುಖ ಮೇಕಪ್ ಮತ್ತು ಫೋಟೋಶಾಪ್‌ನ ಪವಾಡ

ದೆವ್ವದ ಮುಖ ಮೇಕಪ್ ಮತ್ತು ಫೋಟೋಶಾಪ್‌ನ ಪವಾಡ

ಈ ಹಿಂದೆ ಎಲ್ಲರಿಗೂ ತೋರಿಸಿದ್ದ ಮುಖವು ಮೇಕಪ್ ಮತ್ತು ಫೋಟೋಶಾಪ್‌ನ ಪವಾಡ ಎಂದು ಸಹರ್ ಜೈಲಿನಿಂದ ಹೊರಬಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿದರು. ನಟನಾಗುವುದಕ್ಕಿಂತ ಇದು ತುಂಬಾ ಸುಲಭವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

'50 ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ'

'50 ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ'

ಸಹರ್ ತನ್ನ ಏಂಜಲೀನಾ ನೋಟವನ್ನು ಎಲ್ಲರಿಗೂ ತೋರಿಸಿದಾಗ, 50 ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ನಂತರ ತನ್ನ ಸ್ಥಿತಿ ಹೀಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಈಗ 21 ವರ್ಷ ವಯಸ್ಸಿನ ಸಹರ್ ಅವರು ಲಿಪ್ ಫಿಲ್ಲಿಂಗ್ ಮತ್ತು ಕೆಲವು ಮೂಗಿನ ಶಸ್ತ್ರಚಿಕಿತ್ಸೆ ಮಾಡಿದ್ದು ನಿಜ ಆದರೆ ಆ ಚಿತ್ರವನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+