Get Updates
Get notified of breaking news, exclusive insights, and must-see stories!

400 ವರ್ಷ ಹಳೆಯದಾದ ಅಂಚೆ ಸೇವೆ ನಿಲ್ಲಿಸಿದೆ ಈ ದೇಶ, 1,500 ಜನರ ಉದ್ಯೋಗ ಕಟ್

ಅಂಚೆ ಎಂಬುದು ನೂರಾರು ವರ್ಷಗಳ ಹಿಂದಿನಿಂದಲೇ ಮನುಷ್ಯರ ನಡುವೆ ಸಂವಹನ ನಡೆಸಲು ಇದ್ದ ಫೋನ್‌ಗಳಂತೆ. ಈಗೆಲ್ಲಾ ಸ್ಮಾರ್ಟ್ ಫೋನ್ ಕೈಲಿಡಿದು ಎಲ್ಲಾ ವಿಚಾರವನ್ನ ಕ್ಷಣಮಾತ್ರದಲ್ಲಿ ಬೇಕಾದವರಿಗೆ ತಲುಪಿಸಲು ಅವಕಾಶ ಇದೆ. ಆದರೆ ಕೇವಲ ಹತ್ತಾರು ವರ್ಷಗಳ ಹಿಂದೆ ಪರಿಸ್ಥಿತಿ ಭಿನ್ನವಾಗಿತ್ತು. ಆಗೆಲ್ಲಾ ಅಂಚೆ ಸೇವೆ ಎಂಬುದು ಮನುಷ್ಯರ ಸಂವಹನಕ್ಕೆ ಕೊಂಡಿಯ ರೀತಿಯಲ್ಲಿ ಕಾರ್ಯನಿರ್ವಹಿಸಿವೆ, ಆದರೆ ಈಗ ಅದೇ ಅಂಚೆ ಸೇವೆ ಕೊನೆಯಾಗುತ್ತಾ ಬರುತ್ತಿದೆ. ಅದರಲ್ಲೂ 400 ವರ್ಷ ಹಳೆಯದಾದ ಅಂಚೆ ಸೇವೆ ನಿಲ್ಲಿಸಿದೆ ಈ ದೇಶ.

ಭಾರತದಲ್ಲಿ ಕೂಡ ನೂರಾರು ವರ್ಷಗಳಿಂದ ಅಂಚೆ ಸೇವೆ ಲಭ್ಯವಿದ್ದು, ಕೋಟ್ಯಂತರ ಭಾರತದ ಪ್ರಜೆಗಳಿಗೆ ಇದರಿಂದ ಸಾಕಷ್ಟು ಪ್ರಯೋಜನ ಕೂಡ ಆಗಿತ್ತು. ಆಧುನಿಕ ಕಾಲದಲ್ಲಿ ಭಾರತೀಯ ಅಂಚೆ ಇಲಾಖೆ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಹೊಸ ಹಾದಿಯಲ್ಲಿ ಹೆಜ್ಜೆಯನ್ನು ಕೂಡ ಇಟ್ಟಿದೆ. ಆದರೆ ಸುಮಾರು 400 ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಅಂಚೆ ಸೇವೆಗೆ ಬ್ರೇಕ್ ಹಾಕಿ, ತನ್ನಲ್ಲಿನ ಅಂಚೆ ಸೇವೆಯನ್ನೇ ನಿಲ್ಲಿಸಿದೆ ಡೆನ್ಮಾರ್ಕ್ ದೇಶ.

Denmark Closed Its 400-year-old Postal Service And Here Is The Impact Of This Decision

ಡೆನ್ಮಾರ್ಕ್ ದೇಶದಲ್ಲಿ ದೊಡ್ಡ ಇತಿಹಾಸ ಹೊಂದಿದ್ದ ಅಂಚೆ ಸೇವೆ ಸ್ಥಗಿತ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದರೆ, ಇಡೀ ಡೆನ್ಮಾರ್ಕ್ ಪ್ರಜೆಗಳಿಗೆ ಅಂಚೆ ಸೇವೆ ಇನ್ನುಮುಂದೆ ನೆನಪು ಮಾತ್ರ. ಹಾಗಾದ್ರೆ ಪೋಸ್ಟ್‌ನಾರ್ಡ್ ಎಂಬ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆ ದಿಢೀರ್ ಅಂಚೆ ಸೇವೆಯನ್ನು ನಿಲ್ಲಿಸಿದ್ದಾದರೂ ಏಕೆ? ಬನ್ನಿ ತಿಳಿಯೋಣ.

ಶೇಕಡಾ 90ರಷ್ಟು ಕುಸಿತ ಕಂಡಿತ್ತು

ಬಹು ಹಿಂದೆ ಅಂಚೆ ಪತ್ರ ವಿತರಣಾ ಸೇವೆ ಆರಂಭ ಮಾಡಿದ್ದ ದೇಶಗಳ ಪೈಕಿ ಡೆನ್ಮಾರ್ಕ್ ಕೂಡ ಒಂದಾಗಿದ್ದು, 1624 ಸಮಯದಲ್ಲೇ ಅಂಚೆ ಸೇವೆ ಆರಂಭ ಮಾಡಿತ್ತು ಡೆನ್ಮಾರ್ಕ್. ಈ ಮೂಲಕ ಭರ್ಜರಿ 401 ವರ್ಷಗಳ ಕಾಲ ಅಂಚೆ ಸೇವೆ ನೀಡುತ್ತಾ ಬಂದಿತ್ತು ಡೆನ್ಮಾರ್ಕ್. ಆದರೆ ದಿಢೀರ್ ಈ ಸೇವೆಯನ್ನೇ ನಿಲ್ಲಿಸಿಬಿಟ್ಟಿದೆ, ಇದೇ ಕಾರಣಕ್ಕೆ 1,500 ಜನರ ಉದ್ಯೋಗಕ್ಕೆ ಕತ್ತರಿ ಬಿದ್ದಂತಾಗಿದೆ. ಮುಂದುವರಿದ ದೇಶವಾಗಿರುವ ಡೆನ್ಮಾರ್ಕ್ ತನ್ನ ಅಂಚೆ ಸೇವೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿ ಪರದಾಡುತ್ತಿತ್ತು. ಒಂದು ಅಂದಾಜಿನ ಪ್ರಕಾರ, 2000ರ ನಂತರ ಶೇಕಡಾ 90ರಷ್ಟು ಕುಸಿತವನ್ನು ಕಂಡಿತ್ತು ಡೆನ್ಮಾರ್ಕ್ ಅಂಚೆ ಸೇವೆ.

ಡಿಜಿಟಲ್ ಜಗತ್ತಿನಲ್ಲಿ ಬೇಡಿಕೆ ಕುಸಿದಿತ್ತು

ಇನ್ನುಮುಂದೆ ತನ್ನ ಅಂಚೆ ಸೇವೆ ಬದಲಾಗಿ ಪಾರ್ಸೆಲ್‌ ವಿತರಣೆ ಮಾಡುವ ಕಡೆಗೆ ಗಮನ ಹರಿಸಿ ಮುಂದುವರಿಯುವ ಬಗ್ಗೆ ಮಾಹಿತಿ ನೀಡಿದೆ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆ ಪೋಸ್ಟ್‌ನಾರ್ಡ್. ಹಳೆಯ ಅಧ್ಯಾಯವನ್ನು ಮುಗಿಸಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಇದೀಗ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ ಪೋಸ್ಟ್‌ನಾರ್ಡ್. ಡಿಜಿಟಲ್ ಜಗತ್ತಿನಲ್ಲಿ ಸಂವಹನಕ್ಕೆ ಹಲವು ಸಾಧನಗಳು ಇದ್ದು, ಅಂಚೆ ಸೇವೆ ಬಳಕೆ ಮಾಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವನ್ನ ಕಾಣುತ್ತಾ ಇತ್ತು. ಇಷ್ಟೆಲ್ಲದರ ನಡುವೆ ಇದೀಗ ಪೋಸ್ಟ್‌ನಾರ್ಡ್ ನಿರ್ಧಾರ ಇಡೀ ಜಗತ್ತಿನ ಗಮನ ಸೆಳೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+