ಚೋಟಾ ಶಕೀಲ್ ನ ಮಗನೂ ಪಾಕ್ ನಲ್ಲಿ ಈಗ ಕುರ್ ಆನ್ ಪ್ರವಚನಕಾರ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಗ ಮೌಲಾನ ಆದ ಕೆಲ ವರ್ಷಕ್ಕೆ ಅಂಥದ್ದೇ ಸುದ್ದಿ ಬಂದಿದೆ. ದಾವೂದ್ ನ ಬಲಗೈ ಬಂಟ ಚೋಟಾ ಶಕೀಲ್ ನ ಒಬ್ಬನೇ ಮಗ ಕೂಡ ಈಗ ಪಾಕಿಸ್ತಾನದ ಕರಾಚಿಯಲ್ಲಿ ಅಧ್ಯಾತ್ಮದ ಹಾದಿಯಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಚೋಟಾ ಶಕೀಲ್ ನ ಹದಿನೆಂಟು ವರ್ಷದ ಮಗ ಮುಬಾಶಿರ್ ಶೇಕ್ ಈಚೆಗಷ್ಟೇ ಹಫೀಜ್-ಇ-ಕುರ್ ಆನ್ ಆಗಿದ್ದಾನೆ. ಹಾಗೆಂದರೆ ಇಡೀ ಕುರ್ ಆನ್ ಅನ್ನು ನೆನಪಿನಲ್ಲಿ ಇರಿಸಿಕೊಂಡಾತ ಎಂದರ್ಥ. ಹೀಗೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಇಸ್ಲಾಂನಲ್ಲಿ ಬಹಳ ಗೌರವ-ಹೆಮ್ಮೆಯ ಸಂಗತಿ ಎಂದು ಪರಿಗಣಿಸಲಾಗುತ್ತದೆ.

ಇದೀಗ ಮತ್ತೊಬ್ಬ ಭೂಗತ ಪಾತಕಿಯ ಮಗ ಅಧ್ಯಾತ್ಮದ ಹಾದಿ ಹಿಡಿದಿರುವುದು ಮುಂಬೈ ಭೂಗತ ಜಗತ್ತಿನಲ್ಲಿ ಅಚ್ಚರಿ ಉಂಟು ಮಾಡಿದೆ. ಸದ್ಯಕ್ಕೆ ಮುಬಾಶಿರ್ ಕರಾಚಿ ಸುತ್ತಮುತ್ತ ಜನರಿಗೆ ಕುರ್ ಆನ್ ಹೇಳಿಕೊಡುವುದು ಹಾಗೂ ಉಪದೇಶ ನೀಡುವುದು ಮಾಡುತ್ತಿದ್ದಾನೆ. ದಾವೂದ್ ಇಬ್ರಾಹಿಂನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಕಡಿಮೆ ಸಂಖ್ಯೆಯ ಜನರಲ್ಲಿ ಚೋಟಾ ಶಕೀಲ್ ಕೂಡ ಒಬ್ಬ.

Chhota Shakeel

ಸದ್ಯಕ್ಕೆ ದಾವೂದ್ ಇಬ್ರಾಹಿಂ, ಆತನ ಬಂಟ ಚೋಟಾ ಶಕೀಲ್ ಸೇರಿದಂತೆ ಇತರ ಪ್ರಮುಖರು ಪಾಕಿಸ್ತಾನದಲ್ಲೇ ಇದ್ದಾರೆ ಎಂದು ದಾವೂದ್ ನ ಸೋದರ, ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದ ಇಕ್ಬಾಲ್ ಕಸ್ಕರ್ ಹೇಳಿದ್ದ.

ತನ್ನ ಒಬ್ಬನೇ ಮಗ ಮೊಯಿನ್ ಮೌಲಾನಾ ಆದ ಮೇಲೆ ದಾವೂದ್ ಇಬ್ರಾಹಿಂ ಹೇಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ ಎಂದು ಕೂಡ ತಿಳಿಸಿದ್ದ. ಮೌಲಾನ್ ಮೊಯಿನ್ ನಿಂದ ಸ್ಫೂರ್ತಿಗೊಂಡ ಮುಬಾಶಿರ್ ಇದೀಗ ಕುರ್ ಆನ್ ಪ್ರವಚನ ನೀಡುತ್ತಿದ್ದಾನೆ.

ಮುಬಾಶಿರ್ ಹೊರತುಪಡಿಸಿ ಚೋಟಾ ಶಕೀಲ್ ಗೆ ಝೋವಾ ಮತ್ತು ಅನಮ್ ಎಂಬಿಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ಕರಾಚಿಯಲ್ಲಿ ವೈದ್ಯರಿಗೆ ಮದುವೆ ಮಾಡಿಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+