ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ದಾರುಣ ಸಾವು

Cricket ball hits on head South African batsman Darryn Randall dies
ಬೆಂಗಳೂರು, ಅ.29: ನೇರವಾಗಿ ಕ್ರಿಕೆಟ್ ಅಂಗಳದಿಂದ ಮತ್ತೊಂದು ಸಾವಿನ ಸುದ್ದಿ ಬಂದಿದೆ. ಕುಡಿದ ಅಮಲಿನಲ್ಲಿ ಬೈಕಿನಲ್ಲಿ ಜಾಲಿ ರೈಡ್ ಮಾಡುವ ಚಟವಿದ್ದ ಯುವ ಪ್ರತಿಭೆ ಉಮೇಶ್ ಕೂಗ ಖಾರ್ವಿ ಶನಿವಾರ ಮಧ್ಯರಾತ್ರಿ ಮರಳಿ ಬಾರದ ಲೋಕ ಸೇರಿದ್ದಾರೆ.

ಈ ಮಧ್ಯೆ, ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಚೆಂಡು ತಲೆಗೆ ಅಪ್ಪಳಿಸಿದ ಪರಿಣಾಮ (ಹೆಲ್ಮೆಟ್ ಧರಿಸಿದ್ದರೂ) ಆಟಗಾರರೊಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ ಬರ್ಗ್ ನಲ್ಲಿ ಈ ದುರ್ಘಟನೆ ನಡೆದಿದ್ದು, ಡರೇನ್ ರಾಂಡಲ್ (32) ಮೃತಪಟ್ಟ ದುರ್ದೈವಿ.

ಅಂದಹಾಗೆ, ಕ್ರಿಕೆಟ್ ಅಂಗಳದಲ್ಲಿ ಸಾವು ಸಂಭವಿಸಿರುವುದು ಇದೇ ಮೊದಲಲ್ಲ. ಭಾರತದ ರಮಣ್ ಲಾಂಬಾ, ಜಾರ್ಜ್ ಸಮ್ಮರ್ಸ್, ಇಯಾನ್ ಫೋಲೇ (ಇಬ್ಬರೂ ಇಂಗ್ಲೆಂಡಿನವರು) ಮತ್ತು ಪಾಕಿಸ್ತಾನದ ಅಬ್ದುಲ್ ಅಜೀಜ್ ಇದೇ ರೀತಿ ಕ್ರಿಕೆಟ್ ಆಡುವಾಗ ಆಕಸ್ಮಿಕ ಸಾವು ಕಂಡ ನತದೃಷ್ಟರಾಗಿದ್ದಾರೆ.

Darryn Randall ಸಾವು ಹೇಗಾಯಿತು?: ಅಲೈಸ್‌ ನಲ್ಲಿ ಬಾರ್ಡರ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಟೂರ್ನಿಯಲ್ಲಿನ ಸೆಲ್‌ ಬಾರ್ನೈನ್ಸ್ ಹಾಗೂ ಫೋರ್ಟ್ ಹೇರ್ ಯೂನಿವರ್ಸಿಟಿ ತಂಡಗಳ ನಡುವೆ ಸೋಮವಾರ ನಡೆದ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ. ಶಾರ್ಟ್ ಪಿಚ್ ಎಸೆತದಲ್ಲಿ ಪುಟಿದೆದ್ದ ಚೆಂಡನ್ನು ಡರೇನ್ ರಾಂಡಲ್ ಅವರು ಪುಲ್ ಮಾಡಲು ಯತ್ನಿಸಿದಾಗ ಚೆಂಡು ಅವರ ತಲೆಯ ಬಲ ಭಾಗಕ್ಕೆ ವೇಗವಾಗಿ ಅಪ್ಪಳಿಸಿತ್ತು.

ಸ್ಥಳದಲ್ಲಿಯೇ ಕುಸಿದುಬಿದ್ದ ಡರೇನ್ ರಾಂಡಲ್ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಿಯಾಂಡಲ್ ಸಾವಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಸಂತಾಪ ಸೂಚಿಸಿದೆ. 'ಬಹಳ ಬೇಸರದ ದಿನ ಇದು' ಎಂದು ಸಿಎಸ್‌ ಎ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಹರೂನ್ ಲಾರ್ಗಟ್ ತಿಳಿಸಿದ್ದಾರೆ. (ಚಿತ್ರ: freeimages)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+