ಕೊರೊನಾದಿಂದ ಜನರ ಕಾಪಾಡಲು ಸೆಲಿಬ್ರಿಟಿಯೊಬ್ಬ ಮಾಡಿದ ಮೋಡಿ!

ಸೆನೆಗಲ್, ಮೇ 23: ಜಗತ್ತಿನಾದ್ಯಂತ ಕೊರೊನಾ ಹಾವಳಿ ಜೋರಾಗಿದೆ. ಯಾವುದೇ ದೇಶಗಳು ಇದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ.

Recommended Video

      ಸೋತಾಗ ಚೇತರಿಸಿಕೊಳ್ಳೋದು ಹೇಗೆ , ರಮೇಶ್ ಅರವಿಂದ್ ಹೇಳ್ತಾರೆ ಕೇಳಿ

      ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ ಸೆನೆಗಲ್ ಕೂಡ ಕೊರೊನಾ ಹಾವಳಿಗೆ ತುತ್ತಾಗಿದೆ. ಮುಸ್ಲಿಂ ಬಾಹುಳ್ಯದ ಬಡ ರಾಷ್ಟ್ರವಾಗಿರುವ ಈ ದೇಶದಲ್ಲಿಗ ರಂಜಾನ್ ಹಬ್ಬ ಆಚರಣೆಯಲ್ಲಿದೆ.

      ಹೀಗಾಗಿ ಜನರನ್ನು ಕೊರೊನಾದಿಂದ ದೂರ ಇಡಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ. ಇದಕ್ಕೆ ಖಾಸಗಿ ಸುದ್ದಿವಾಹಿನಿಯಯಲ್ಲಿ ಸೆನೆಗಲ್‌ನ ಖ್ಯಾತ ಟಿವಿ ಸೆಲೆಬ್ರೆಟಿಯಾದ Alioune Thiam ಎಂಬುವರು, ಸೆನೆಗಲ್‌ನ ಪ್ರಖ್ಯಾತ ವೈದ್ಯರಾಗಿದ್ದ ಹಾಗೂ ಜನರಿಗೆ ಬಹು ಇಷ್ಟವಾಗಿದ್ದ Doctor Diouf ಎಂಬುವರ ವೇಷ ಧರಿಸಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

      ಹಿಟ್ ಆದ ಕಾರ್ಯಕ್ರಮ

      ಹಿಟ್ ಆದ ಕಾರ್ಯಕ್ರಮ

      ಸೆನೆಗಲ್‌ನ ಖ್ಯಾತ ಟಿವಿ ಸೆಲೆಬ್ರೆಟಿಯಾದ Alioune Thiam ಕೊರೊನಾ ಹರಡುವುದನ್ನು ತಡೆಗಟ್ಟಲು ITV ಎಂಬ ಖಾಸಗಿ ಟಿವಿ ಚಾನೆಲ್‌ನಲ್ಲಿ Doctor Diouf ವೇಷ ತೊಟ್ಟಿದ್ದಾರೆ. ಇವರು ಪ್ರತಿದಿನ ಸಂಜೆ ಕೊರೊನಾದಿಂದ ದೂರ ಇರುವುದು ಹೇಗೆ ಎಂಬುದರ ಬಗ್ಗೆ ತಮ್ಮದೇಯಾದ ಹಾಸ್ಯ ಮಿಶ್ರಿತ ಶೈಲಿಯಲ್ಲಿ 10 ನಿಮಿಷದ ಕಾರ್ಯಕ್ರಮದಲ್ಲಿ ಜನರಿಗೆ ಮಾಹಿತಿ ನೀಡುತ್ತಾರೆ. ಈ ಕಾರ್ಯಕ್ರಮ ಅಲ್ಲಿ ಭಾರೀ ಯಶಸ್ಸು ಕಂಡಿದೆ ಎಂದು ಅಲ್‌ ಜಜೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

      ಕಾರ್ಯಕ್ರಮಕ್ಕೆ ಹಾಜರಾಗಿರುತ್ತಾರೆ

      ಕಾರ್ಯಕ್ರಮಕ್ಕೆ ಹಾಜರಾಗಿರುತ್ತಾರೆ

      Alioune Thiam ಅವರು Doctor Diouf ಅವರ ಹಾಗೇ ಕಾಣುವುದು ಕೂಡ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಗುಟ್ಟಾಗಿದೆ. ಸೆನೆಗಲ್‌ ನಲ್ಲಿ ಕೊರೊನಾ ಬರದಂತೆ ತಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ Alioune Thiam ಹೇಳುತ್ತಾರೆ. ರಂಜಾನ್‌ ಉಪವಾಸ ಬಿಡುವ ಹೊತ್ತಿನಲ್ಲಿ ಜನ ಇವರ ಕಾರ್ಯಕ್ರಮಕ್ಕೆ ಹಾಜರಾಗಿರುತ್ತಾರೆ. ಅಲ್ಲದೇ ಇವರಿಂದ ದೇಶದಲ್ಲಿ ಕೊರೊನಾ ಕೂಡ ನಿಯಂತ್ರಣದಲ್ಲಿದೆ ಎಂದು ವರದಿ ಹೇಳುತ್ತದೆ.

      1200 ಜನರಿಗೆ ಕೊರೊನಾ ಸೋಂಕು

      1200 ಜನರಿಗೆ ಕೊರೊನಾ ಸೋಂಕು

      ಆರವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಸೆನೆಗಲ್‌ನಲ್ಲಿ ಇಲ್ಲಿಯವರೆಗೆ 1200 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 39 ಜನ ಮಾರಕ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

      ಕುಖ್ಯಾತ ಭೂಗತಪಾತಕಿಗಳಿಗೆ ಸ್ವರ್ಗ

      ಕುಖ್ಯಾತ ಭೂಗತಪಾತಕಿಗಳಿಗೆ ಸ್ವರ್ಗ

      ಪಶ್ಚಿಮ ಆಫ್ರಿಕಾದ ಪುಟ್ಟ ಬಡ ರಾಷ್ಟ್ರವಾಗಿರುವ ಸೆನೆಗಲ್‌ ಹಲವು ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಭೂಗತಪಾತಕಿಗಳಿಗೆ ಸ್ವರ್ಗವಾಗಿದೆ. ಕುಖ್ಯಾತ ಡಾನ್ ರವಿ ಪೂಜಾರಿ ಭಾರತೀಯ ಪೊಲೀಸರಿಗೆ ಯಾಮಾರಿಸಿ ಇದೇ ದೇಶದಲ್ಲಿ ತಲೆ ಮರೆಸಿಕೊಂಡು ಹಾಯಾಗಿ ಇದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+