ಕೋವಿಡ್ ಹೆಚ್ಚಳವಾಗಿದ್ದಕ್ಕೆ ಚೀನಾದ ಅಧಿಕಾರಿಗಳಿಗೆ ಶಿಕ್ಷೆ!
ಬೀಜಿಂಗ್, ಡಿಸೆಂಬರ್ 24: ಚೀನಾದ ಜೀಆನ್ ನಗರಗಳಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಏರಿಕೆ ಆದ ಕಾರಣಕ್ಕೆ ಅಲ್ಲಿ ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕಾರಣದಿಂದಾಗಿ ಅಲ್ಲಿನ ಅಧಿಕಾರಿಗಳಿಗೆಯೇ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ವರದಿ ಆಗಿದೆ.
ವಿಶ್ವದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣ ಕಾಣಿಸಿಕೊಂಡ ಚೀನಾವು ಈಗ ಎಲ್ಲಾ ನಗರಗಳಲ್ಲಿ ಜಿಯೋ ಕೋವಿಡ್ ಪ್ರಕರಣ ದಾಖಲು ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ನಡುವೆ ಚೀನಾದ ಪ್ರಮುಖ ನಗರವಾದ ಜೀಆನ್‌ನಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಆಗಿದೆ. ಈ ಹಿನ್ನೆಲೆಯಿಂದಾಗಿ ಅಧಿಕಾರಿಗಳಿಯೇ ಶಿಕ್ಷೆಯನ್ನು ವಿಧಿಸಲಾಗಿದೆ.
ಚೀನಾದಲ್ಲಿ ದೀರ್ಘ ಕಾಲ ಲಾಕ್‌ಡೌನ್ ಮಾಡಲಾಗಿದ್ದು, ಕೋವಿಡ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿ ದೀರ್ಘ ಕಾಲ ಕ್ವಾರಂಟೈನ್ ಕೂಡಾ ಮಾಡಲಾಗುತ್ತಿದೆ. ದೇಶದಿಂದ ಕೋವಿಡ್ ತೊಲಗಿಸುವ ನಿಟ್ಟಿನಲ್ಲಿಯೂ ಚೀನಾ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ನಡುವೆ ಈ ವಾರದಲ್ಲಿ ಜೀಆನ್ ನಗರಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದೆ. ಹಿನ್ನೆಲೆಯಿಂದಾಗಿ ಸುಮಾರು 13 ಮಿಲಿಯನ್ ಜನರು ಇರುವ ಈ ನಗರವನ್ನೇ ಲಾಕ್‌ಡೌನ್ ಮಾಡಿ, ಜನರು ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ.

ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಈ ನಗರದಲ್ಲಿ ಸ್ಥಗಿತ ಮಾಡಲಾಗಿದೆ. ಹಾಗೆಯೇ ಸಾಮೂಹಿಕವಾಗಿ ಕೊರೊನಾ ವೈರಸ್ ಸೋಂಕು ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ. ಇನ್ನು ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿರುವ ಬಗ್ಗೆ ಸೆಂಟ್ರಲ್ ಕಮಿಷನ್ ಫಾರ್ ಡಿಸಿಪ್ಲಿನ್ ಇನ್ಸ್ಪೆಕ್ಷನ್ ಶುಕ್ರವಾರ ಮಾಹಿತಿ ನೀಡಿದೆ. "ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಈ ಪ್ರಕರಣಗಳ ಹೆಚ್ಚಳವನ್ನು ಸೂಕ್ತ ಕ್ರಮ ಕೈಗೊಂಡು ತಡೆಗಟ್ಟುವಲ್ಲಿ ವಿಫಲವಾದ ಕಾರಣಕ್ಕೆ ಸುಮಾರು 26 ಕಮ್ಯೂನಿಷ್ಟ್ ಪಕ್ಷದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿದೆ," ಎಂದು ಸೆಂಟ್ರಲ್ ಕಮಿಷನ್ ಫಾರ್ ಡಿಸಿಪ್ಲಿನ್ ಇನ್ಸ್ಪೆಕ್ಷನ್ ತಿಳಿಸಿದೆ.
ಈ ನಗರದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿದೆ?
ಚೀನಾದ ಜೀಆನ್ ನಗರಗಳಲ್ಲಿ ಶುಕ್ರವಾರ ಮತ್ತೆ 49 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲು ಆಗಿದೆ. ಈ ಮೂಲದ ಈ ವಾರದಲ್ಲಿ ಈ ನಗರದಲ್ಲಿ ದಾಖಲಾದ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು 250 ಕ್ಕೆ ಏರಿಕೆ ಮಾಡಿದೆ. ಚೀನಾವು ಹಲವಾರು ಕಠಿಣ ಮಾರ್ಗಸೂಚಿಯನ್ನು ಹೊರಡಿಸಿದ್ದರೂ ಕೂಡಾ ಚೀನಾದ ಈ ನಗರದ ಅಧಿಕಾರಿಗಳು ಕೋವಿಡ್ ಹೆಚ್ಚಳವನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ. "ಕೋವಿಡ್ ಪರೀಕ್ಷೆಯು ಇಲ್ಲಿ ಸರಿಯಾದ ರೀತಿಯಲ್ಲಿ ನಡೆದಿಲ್ಲ, ಅದರಿಂದಾಗಿ ಈಗ ಒಮ್ಮೆಲೇ ಕೋವಿಡ್ ಹೆಚ್ಚಳವಾಗಿದೆ," ಎಂಬುವುದು ಪರಿಶೀಲನೆ ನಡೆಸಿದ ವೇಳೆ ತಿಳಿದು ಬಂದಿದೆ," ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಈ ನಗರದಲ್ಲಿ ದೃಢಪಟ್ಟಿರುವ ಪ್ರಕರಣಗಳು ಸಮೀಪದ ನಗರವಾದ, ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ ಇತರೆ ಕೆಲವು ನಗರಗಳಿಗೆ ಹರಡುವ ಸಾಧ್ಯತೆ ಹಿನ್ನೆಲೆಯಿಂದಾಗಿ ಈಗ ಲಾಕ್‌ಡೌನ್ ಮಾಡಲಾಗಿದೆ. ಇನ್ನು ಗುರುವಾರದವರೆಗೆ ಈ ನಗರದಲ್ಲಿ ಕೇವಲ ಒಂದು ಮಂದಿ ಎರಡು ದಿನಕ್ಕೊಮ್ಮೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೊರಗೆ ಬರಲು ಅವಕಾಶ ನೀಡಲಾಗಿತ್ತು. ಇನ್ನು ನಗರದಿಂದ ಹೊರಗೆ ಹೋಗಲು ಬಯಸುವ ಜನರು ಅನುಮೋದನೆಗಾಗಿ ಅರ್ಜಿಯನ್ನು ಹಾಕಬೇಕಾಗಿದೆ. ಇನ್ನು ವಿಶ್ವದ ಇತರೆ ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳು ವರದಿ ಆಗುತ್ತಿದ್ದಂತೆ ಚೀನಾವು ಕಠಿಣ ಕ್ರಮವನ್ನು ಕೈಗೊಂಡಿತ್ತು. ಇನ್ನು ಈ ಲಾಕ್‌ಡೌನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾದ ಜೀಆನ್ ನಗರದ ನಾಗರಿಕರು, "ಲಾಕ್‌ಡೌನ್ ಮಾಡುವುದು ಅತೀ ಅನಿವಾರ್ಯ," ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications