ಕೋವಿಡ್-19 ಗೆ ಲಸಿಕೆ: ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮೇಲೆ ಪ್ರಯೋಗ ಶುರು!

ಮಹಾಮಾರಿ ಕೋವಿಡ್-19 ಗೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ಲಂಡನ್, ಇಸ್ರೇಲ್, ಇಟಲಿ, ಅಮೇರಿಕಾ, ಚೀನಾ ಸೇರಿದಂತೆ ವಿಶ್ವದ ಹಲವೆಡೆ ವಿಜ್ಞಾನಿಗಳು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

Recommended Video

      ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

      ಇದೀಗ ಯು.ಎಸ್ ನ ಬಯೋಟೆಕ್ನಾಲಜಿ ಕಂಪನಿಯೊಂದು ಕೋವಿಡ್-19 ಲಸಿಕೆಯನ್ನ ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮೇಲೆ ಪ್ರಯೋಗಿಸುತ್ತಿದೆ. ಲಸಿಕೆ ಪರಿಣಾಮಕಾರಿ ಎಂದು ಸಾಬೀತಾದರೆ, ಈ ವರ್ಷದೊಳಗೆ ಮಾರುಕಟ್ಟೆಗೆ ಬರಲಿದೆ.

      ಆಸ್ಟ್ರೇಲಿಯಾದ ಮೆಲ್ಬರ್ನ್ ಮತ್ತು ಬ್ರಿಸ್ಬೇನ್ ನಲ್ಲಿ 131 ಜನರ ಮೇಲೆ ಯು.ಎಸ್. ಬಯೋಟೆಕ್ನಾಲಜಿ ಕಂಪನಿ 'ನೋವಾವ್ಯಾಕ್ಸ್' ಕೋವಿಡ್-19 ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಿಸಿದೆ.

      Covid 19 Vaccine Trials Begins On Humans In Australia

      ''ಈಗಾಗಲೇ ಡೋಸೇಜ್ ಗಳನ್ನು ನಾವು ತಯಾರಿಸುತ್ತಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಸಿದ್ಧವಾಗುತ್ತದೆ'' ಎಂದು ನೋವಾವ್ಯಾಕ್ಸ್ ಕಂಪನಿಯ ಸಂಶೋಧನಾ ಮುಖ್ಯಸ್ಥ ಡಾ.ಗ್ರೆಗೊರಿ ಗ್ಲೆನ್ ಹೇಳಿದ್ದಾರೆ.

      ಕೊರೊನಾ ವೈರಸ್ ನ ಮೇಲ್ಮೈನಲ್ಲಿರುವ ಸ್ಪೈಕ್ ಪ್ರೋಟೀನ್ ಅನ್ನು ಗುರುತಿಸಿ, ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಲಸಿಕೆ ತಯಾರಾಗಿದೆ. ಆದರೆ ಇತರೆ ಕೆಲ ಲಸಿಕೆಗಳು ಹಳೆಯ ಶೈಲಿಯಲ್ಲಿದ್ದು, ಕೊಲ್ಲಲ್ಪಟ್ಟ ವೈರಸ್ ನಿಂದ ತಯಾರಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+