ಕೋವಿಡ್ 19: 58 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ 3%ಕ್ಕಿಂತ ಕೆಳಗೆ

ಬೆಂಗಳೂರು, ಆಗಸ್ಟ್ 22: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 212,371,596ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 189,987,525 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 194,429,196 ಪ್ರಕರಣಗಳು ಮುಕ್ತಾಯಗೊಂಡಿವೆ.

ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ 38,487 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ [ಸಾಂಕ್ರಾಮಿಕ ಕಂಡು ಬಂದ ನಂತರದಿಂದ] ಚೇತರಿಸಿಕೊಂಡವರ ಸಂಖ್ಯೆ 3,16,36,469 ರಷ್ಟಿದೆ.

ಇದರ ಪರಿಣಾಮದಿಂದ 2020 ರ ಮಾರ್ಚ್ ನಂತರ ಭಾರತದ ಚೇತರಿಕೆ ದರ ಅತಿ ಹೆಚ್ಚು 97.57% ರಷ್ಟು ದಾಖಲಾಗಿದೆ.

ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಾಮೂಹಿಕ ಪ್ರಯತ್ನದ ಫಲವಾಗಿ 56 ದಿನಗಳಿಂದ ಹೊಸ ಪ್ರಕರಣಗಳ 50,000 ಕ್ಕಿಂತ ಕಡಿಮೆ ಇದ್ದು, ಇಳಿಕೆ ಪ್ರವೃತ್ತಿಯಲ್ಲಿದೆ. ಕಳೆದ 24 ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳು ದಾಖಲಾಗಿವೆ.

ಹೆಚ್ಚಿನ ಚೇತರಿಕೆ ಮತ್ತು ಕಡಿಮೆ ಪ್ರಮಾಣದ ಹೊಸ ಪ್ರಕರಣಗಳಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,53,398 ರಷ್ಟಿದ್ದು, ಇದು 152 ದಿನಗಳಿಂದ ಅತಿ ಕಡಿಮೆ ದಾಖಲಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1.09% ರಷ್ಟಿದ್ದು, 2002 ರ ಮಾರ್ಚ್ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ ದಾಖಲಾಗಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 22) ಇಲ್ಲಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 38,614 ರೋಗಿಗಳು ಚೇತರಿಕೆ

ಭಾರತದಲ್ಲಿ 24 ಗಂಟೆಗಳಲ್ಲಿ 38,614 ರೋಗಿಗಳು ಚೇತರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 31,043ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 32,434,934ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 434,697ಕ್ಕೆ ಏರಿಕೆಯಾಗಿದೆ, 31,643,119ಮಂದಿ ಚೇತರಿಕೆ ಹೊಂದಿದ್ದಾರೆ, ಕಳೆದ 24 ತಾಸುಗಳಲ್ಲೇ 38,614 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರ ಒಟ್ಟಾರೆ 97.57%ಗೆ ಸುಧಾರಣೆ ಕಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ಆಗಸ್ಟ್ 22ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 212,371,596 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 4,441,671ಕ್ಕೇರಿದೆ. ಒಟ್ಟಾರೆ, 189,987,525 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 17,942,400 ಸಕ್ರಿಯ ಪಾಸಿಟಿವ್ 111,531 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 194,429,196 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ರಾಷ್ಟ್ರೀಯ ಲಸಿಕಾ ಅಭಿಯಾನ

ರಾಷ್ಟ್ರೀಯ ಲಸಿಕಾ ಅಭಿಯಾನ

ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಭಾರತದಲ್ಲಿ 58.14 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.09% ರಷ್ಟಿದೆ: 2020 ರ ಮಾರ್ಚ್ ನಂತರ ಅತಿ ಕಡಿಮೆ ಪ್ರಮಾಣ ದಾಖಲು.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,53,398 ರಷ್ಟಿದೆ; 152 ದಿನಗಳಲ್ಲಿ ಅತಿ ಕಡಿಮೆ. ಕಳೆದ 24 ಗಂಟೆಗಳಲ್ಲಿ 38,487 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 3,16,36,469 ಮಂದಿ ಗುಣಮುಖರಾಗಿದ್ದಾರೆ.

ವಾರದ ಪಾಸಿಟಿವಿಟಿ ದರ 2.00% ರಷ್ಟಿದೆ: 58 ದಿನಗಳಲ್ಲಿ 3% ಕ್ಕೂ ಕಡಿಮೆ ದಾಖಲಾಗುತ್ತಿದೆ.

ದೈನಂದಿನ ಪಾಸಿಟಿವಿಟಿ ದರ (1.95%) 27 ದಿನಗಳಿಂದ 3% ಕ್ಕೂ ಕಡಿಮೆ ವರದಿಯಾಗುತ್ತಿದೆ. ದೇಶಾದ್ಯಂತ ಈವರೆಗೆ 50.62 ಕೋಟಿ ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 38,519,294ಪ್ರಕರಣಗಳು
ಭಾರತ: 32,434,934
ಬ್ರೆಜಿಲ್: 20,556,487
ರಷ್ಯಾ: 6,747,087
ಫ್ರಾನ್ಸ್: 6,602,311
ಯುಕೆ: 6,460,930
ಟರ್ಕಿ: 6,197,041
ಅರ್ಜೆಂಟೀನಾ: 5,130,852
ಕೊಲಂಬಿಯಾ: 4,886,897
ಸ್ಪೇನ್: 4,770,453

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 644,840
ಬ್ರೆಜಿಲ್: 574,243
ಭಾರತ: 434,697
ಮೆಕ್ಸಿಕೋ: 252,927
ರಷ್ಯಾ: 176,044
ಯುಕೆ: 131,591
ಇಟಲಿ: 128,751
ಕೊಲಂಬಿಯಾ: 124,121
ಫ್ರಾನ್ಸ್: 113,267
ಅರ್ಜೆಂಟೀನಾ: 110,217

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 31,643,119
ಯುಎಸ್ಎ: 30,463,056
ಬ್ರೆಜಿಲ್: 19,431,197
ಫ್ರಾನ್ಸ್: 6,033,352
ರಷ್ಯಾ: 6,019,466
ಟರ್ಕಿ: 5,695,286
ಯುಕೆ: 5,020,635
ಅರ್ಜೆಂಟೀನಾ: 4,804,869
ಕೊಲಂಬಿಯಾ: 4,715,218
ಇಟಲಿ: 4,220,924
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+