ಕೊವಿಡ್ 19 ಟಾಪ್ 10: ಅತಿ ಹೆಚ್ಚು ಸೋಂಕಿತರು, ಅತಿ ಹೆಚ್ಚು ಸಾವು
ಬೆಂಗಳೂರು, ಜುಲೈ 1: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜುಲೈ , ಆಗಸ್ಟ್ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಹೆಚ್ಚಿದೆ.
Recommended Video
ಸೋಂಕು ನಿಯಂತ್ರಣಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಎಚ್ ಸಿಕ್ಯೂ, ಫಾವಿಪಿರಾವಿರ್, ಡೆಕ್ಸಾಮೆಥಾಸೊನ್, ಕೊವಾಕ್ಸಿನ್ ಸದ್ಯಕ್ಕೆ ಕ್ಲಿನಿಕಲ್ ಟ್ರಯಲ್ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಾಗಬಲ್ಲ ಮೆಡಿಸಿನ್ ಎನಿಸಿಕೊಂಡಿವೆ. ಆದರೆ, ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಸೋಂಕು ದಿನದಿಂದ ದಿನಕ್ಕೆ ಬಲಿ ಪಡೆಯುತ್ತಲೇ ಇದೆ.
ಜುಲೈ 1ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 10,602,076 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 514,322ಕ್ಕೇರಿದೆ. ಒಟ್ಟಾರೆ, 5,813,182 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,274,572 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,844 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋ, ಪಾಕಿಸ್ತಾನ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿದ್ದು, 11 ಹಾಗೂ 12ನೇ ಸ್ಥಾನಕ್ಕೇರಿವೆ. 1 ಲಕ್ಷಕ್ಕೂ ಅಧಿಕ ಸೋಂಕಿತರಿರುವ ಪಟ್ಟಿಯಲ್ಲಿ ಟರ್ಕಿ, ಜರ್ಮನಿ, ಸೌದಿ ಅರೇಬಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಕೆನಡಾ, ದೇಶಗಳಿವೆ. ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಜರ್ಮನಿ(9052),ಪೆರು(9677), ರಷ್ಯಾ (9536), ಕೆನಡಾ(8,591), ನೆದರ್ಲೆಂಡ್ಸ್(6,113), ಸ್ವೀಡನ್ (5,333) ಕಾಣಿಸಿಕೊಂಡಿವೆ.
ಜುಲೈ 1ರಂತೆ ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 2,727,996 ಪ್ರಕರಣಗಳು
ಬ್ರೆಜಿಲ್: 1,408,485
ರಷ್ಯಾ: 654,405
ಭಾರತ: 586,956
ಯುಕೆ: 312,654
ಸ್ಪೇನ್: 296,351
ಪೆರು: 285,213
ಚಿಲಿ: 279,393
ಇಟಲಿ: 240,578
ಇರಾನ್: 227,662
***
ಜುಲೈ 1ರಂತೆ ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 130,123
ಬ್ರೆಜಿಲ್: 59,656
ಯುಕೆ: 43,730
ಇಟಲಿ: 34,767
ಫ್ರಾನ್ಸ್: 29,843
ಸ್ಪೇನ್: 28,355
ಮೆಕ್ಸಿಕೋ: 27,769
ಭಾರತ: 17,417
ಇರಾನ್: 10,817
ಬೆಲ್ಜಿಯಂ: 9,747












Click it and Unblock the Notifications