ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮೂರನೇ ಅಲೆಗೆ ಬೆದರಿ ಲಾಕ್ ಡೌನ್ ಘೋಷಿಸಿದ ಫ್ರಾನ್ಸ್!

|
Google Oneindia Kannada News

ಪ್ಯಾರಿಸ್, ಮಾರ್ಚ್ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿಗೆ ಫ್ರಾನ್ಸ್ ಕೂಡ ನಲುಗಿದೆ. ದೇಶದಲ್ಲಿ ಎದುರಾದ ಮೂರನೇ ಅಲೆಯನ್ನು ನಿಯಂತ್ರಿಸುವುದಕ್ಕೆ ದೇಶದ ಪ್ರಮುಖ 16 ಪ್ರದೇಶಗಳಲ್ಲಿ ಒಂದು ತಿಂಗಳು ಲಾಕ್ ಡೌನ್ ಘೋಷಿಸಲಾಗಿದೆ.

ಶುಕ್ರವಾರ ಮಧ್ಯರಾತ್ರಿಯಿಂದ ಫ್ರ್ಯಾನ್ಸ್ 16 ಪ್ರದೇಶಗಳಲ್ಲಿ ಹೊಸ ಲಾಕ್ ಡೌನ್ ನಿಯಮಗಳು ಜಾರಿಗೆ ಬರಲಿವೆ. ಒಂದು ತಿಂಗಳವರೆಗೂ ಈ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿ ಇರಲಿವೆ ಎಂದು ಪ್ರಧಾನಮಂತ್ರಿ ಜೀನ್ ಕಾಸ್ಟೆಕ್ಸ್ ತಿಳಿಸಿದ್ದಾರೆ. ಕಳೆದ 2020ರ ಮಾರ್ಚ್ ಮತ್ತು ನವೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಿದ ಲಾಕ್ ಡೌನ್ ಹೋಲಿಸಿದರೆ ಈ ಬಾರಿ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ.

ಕೊರೊನಾ ಹಾವಳಿ: ಬ್ರೆಜಿಲ್ ಎಂದರೆ ಬೆಚ್ಚಿ ಬೀಳುವಂತಾ ಪರಿಸ್ಥಿತಿ!ಕೊರೊನಾ ಹಾವಳಿ: ಬ್ರೆಜಿಲ್ ಎಂದರೆ ಬೆಚ್ಚಿ ಬೀಳುವಂತಾ ಪರಿಸ್ಥಿತಿ!

"ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಸ್ನೇಹಿತರ ಮನೆಗಳಲ್ಲಿ ಸೇರುವುದು. ಪಾರ್ಟಿ ಮಾಡುವುದು, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದೇ ಇರುವುದನ್ನು ನಿರ್ಬಂಧಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಈ ರೀತಿಯಲ್ಲಿ ನಾವು ಕಡಿವಾಣ ಹಾಕಬೇಕಿದೆ ಎಂದು ಪ್ರಧಾನಿ ಜೀನ್ ಕಾಸ್ಟೆಕ್ಸ್ ತಿಳಿಸಿದ್ದಾರೆ.

Coronavirus Third Wave: France Govt Impose Month-long Lockdown
ಹೊಸ ಮಾರ್ಗಸೂಚಿಯಲ್ಲಿ ಇರುವುದೇನು:

ಫ್ರಾನ್ಸ್ ಸರ್ಕಾರ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಜನರಿಗೆ ಮನೆಗಳಿಂದಲೇ ಕಾರ್ಯ ನಿರ್ವಹಿಸುವುದಕ್ಕೆ ಹೆಚ್ಚು ಪ್ರೋತ್ಸಾಹಿಸಲಾಗುತ್ತದೆ. ಹೊರಭಾಗದಲ್ಲಿ ವಾಕಿಂಗ್ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅದಕ್ಕೆ ಸರ್ಕಾರದಿಂದ ಮೊದಲೇ ಅನುಮೋದನೆ ಪ್ರಮಾಣಪತ್ರವನ್ನು ಹೊಂದಿರಬೇಕು. ಹಾಗಿದ್ದರೂ ಕೂಡಾ ಮನೆಯಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯಿಂದ ಆರಂಭವಾಗುತ್ತಿದ್ದ ರಾತ್ರಿ ನಿಷೇಧಾಜ್ಞೆಯನ್ನು ಸಂಜೆ 7 ಗಂಟೆಯಿಂದ ಆರಂಭಿಸುವುದಾಗಿ ಘೋಷಿಸಲಾಗಿದೆ.

ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆಯಲು ಅನುಮತಿಸಲಾಗಿದೆ. ಪುಸ್ತಕ ಮಳಿಗೆ ಮತ್ತು ಮ್ಯೂಸಿಕ್ ಶಾಪ್ ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಫ್ರಾನ್ಸ್ ದೇಶದಲ್ಲಿ ಈವರೆಗೂ 42,41,959 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ 91,833 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

Recommended Video

ಸೌಮ್ಯಾ ರೆಡ್ಡಿ ಪೊಲೀಸರ ಜೊತೆ ಕಿರಿಕ್ | Oneindia Kannada

English summary
Coronavirus Third Wave: France Govt Impose Month-long Lockdown From March 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X