ಸ್ಪೇನ್ ಜನರ ಒತ್ತಡ ನಿವಾರಿಸಲು ಬೀದಿಯಲ್ಲಿ ಡ್ಯಾನ್ಸ್ ಮಾಡಿದ ಪೊಲೀಸರು

ಕೊರೊನಾ ವೈರಸ್ ನಿಂದಾಗಿ ಸ್ಪೇನ್ ಸ್ಮಶಾನ ಸದೃಶ್ಯವಾಗಿದೆ. ಇಟಲಿಯಂತೆ ಸ್ಪೇನ್ ನಲ್ಲೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕನ್ನು ತಡೆಗಟ್ಟುವ ಸಲುವಾಗಿ ಸ್ಪೇನ್ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಹೀಗಾಗಿ, ಅನಿವಾರ್ಯವಾಗಿ ಗೃಹಬಂಧನದಲ್ಲಿರುವವರು ಜೀವನೋತ್ಸಾಹ ಕಳೆದುಕೊಂಡಂತಾಗಿದ್ದಾರೆ.

Recommended Video

      Police entertained to public in spain | Police In Spain streets | Oneindia kannada

      ರೋಗ ಹರಡುವುದನ್ನು ತಡೆಯುವುದಕ್ಕೆ ನಿಯೋಜನೆಗೊಂಡಿದ್ದ ಸ್ಪೇನ್ ಪೊಲೀಸರು ಈಗ ಜನರಿಗೆ ಉತ್ಸಾಹ ತುಂಬಲು ಮುಂದಾಗಿದ್ದಾರೆ.

      ನಗರದ ಬೀದಿಬೀದಿಗಳಲ್ಲಿ ಸುತ್ತುತ್ತಿರುವ ಪೊಲೀಸರ ಕೈಗಳಲ್ಲಿ ಈಗ ಲಾಠಿ ಬಂದೂಕಿನ ಬದಲು ಗಿಟಾರ್ ಗಳು ಪ್ರತ್ಯಕ್ಷವಾಗಿವೆ. ಲಾಕ್ ಡೌನ್ ನಿಂದಾಗಿ ಒತ್ತಡಕ್ಕೊಳಗಾಗಿರುವ, ಕೊರೊನಾದಿಂದ ತತ್ತರಿಸಿರುವ ಜನರ ಭಯವನ್ನು ಹೋಗಲಾಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

      Coronavirus: Spanish Police Sing And Dance On Streets To Entertain People During Lockdown

      ಇದಕ್ಕಾಗಿ ಬೀದಿ ಬೀದಿಯಲ್ಲಿ ಗಸ್ತು ತಿರುಗುವಾಗ, ಜನರಿಗೆ ಕೊಂಚ ರಿಲ್ಯಾಕ್ಸ್ ಮೂಡಿಸಲು ಸ್ಪೇನ್ ಪೊಲೀಸರು ಸ್ಟ್ರೀಟ್ ಬ್ಯಾಂಡ್ ರೀತಿ ಬೀದಿಯಲ್ಲಿ ಗಿಟಾರ್ ಹಿಡಿದು, ಹಾಡು ಹಾಡಿ, ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಜನರಿಗೆ ಕೊಂಚ ಮನರಂಜನೆ ನೀಡುತ್ತಾ ಕೈಲಾದ ಜನಸೇವೆಯನ್ನು ಈ ರೀತಿಯೂ ಮಾಡತೊಡಗಿದ್ದಾರೆ.

      ಪೊಲೀಸರ ಈ ಪ್ರಯತ್ನಕ್ಕೆ ಸ್ಪ್ಯಾನಿಶ್ ಮಂದಿ ಚಪ್ಪಾಳೆ ತಟ್ಟಿ, ಗೌರವಿಸಿದ್ದಾರೆ. ಅಂದ್ಹಾಗೆ, ಬೀದಿಯಲ್ಲಿ ಸ್ಪ್ಯಾನಿಶ್ ಪೊಲೀಸರು ಗಿಟಾರ್ ನುಡಿಸಿ, ಹಾಡು ಹಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+