ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಆಪತ್ತು

|
Google Oneindia Kannada News

ಕೇಂಬ್ರಿಡ್ಜ್‌, ಏಪ್ರಿಲ್ 16: ಸಾಮಾಜಿಕ ಅಂತರವಿಲ್ಲದಿದ್ದರೆ ಕೊರೊನಾ ಸೋಂಕು ತೀವ್ರವಾಗಲಿದೆ ಹೀಗಾಗಿ 2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಹಾರ್ವರ್ಡ್ ವಿವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್ ದಾಳಿಯಿಂದ ಜಗತ್ತು ಪಾರಾಗಬೇಕಾದರೆ 2022ರವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಗಿದೆ.ಜನರು ಇದೇ ಎಚ್ಚರಿಕೆಯನ್ನು ಇನ್ನಷ್ಟು ಕಾಲ ವಹಿಸುವುದು ಉತ್ತಮ, ಈಗ ಒಮ್ಮೆ ಕೊರೊನಾ ಸೋಂಕು ಸಂಪೂರ್ಣ ನಾಮಾವಶೇಷವಾದರೂ 2024ರವೇಳೆಗೆ ಮತ್ತೆ ಈಗ ಉಂಟಾದಂತಹುದೇ ರೀತಿಯ ಸಮಸ್ಯೆಯಾಗಬಹುದು ಎಂದು ಅಮೆರಿಕ ಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ

ಸೋಂಕು ಕಡಿಮೆಯಾಗುತ್ತಾ ಹೋದ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿರ್ಬಂಧಗಳನ್ನು ಏಕಾಏಕಿ ತೆಗೆದುಹಾಕಿದರೆ ಎರಡನೇ ಬಾರಿ ಈಗಿನದಕ್ಕಿಂತ ತೀವ್ರವಾಗಿ ಸೋಂಕು ಮರುಕಳಿಸಬಹುದು. ಹೀಗಾಗಿ ಎಚ್ಚರಿಕೆಯನ್ನು ಮುಂದುವರೆಸಬೇಕಾಗ ಅಗತ್ಯವಿದೆ.

Coronavirus Social Distancing May Need To Continue Until 2022

ಸಾರ್ಸ್ ಸೋಂಕನ್ನು ವೈದ್ಯಕೀಯ ಪ್ರಯತ್ನದಿಂದ ಸಂಪೂರ್ಣವಾಗಿ ನಿರ್ನಾಮ ಮಾಡಿದಂತೆ ಕೊರೊನಾ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ವಾತಾವರಣ ಬದಲಾದಾಗ ಕಾಣಿಸಿಕೊಳ್ಳುವ ಫ್ಲೂ ರೀತಿಯಲ್ಲಿ ಇದು ಆಗಾಗ ಮರುಕಳಿಸುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದೆ.

ವೈರಸ್ ಬಗ್ಗೆ ನಿರಂತರ ವಿಚಕ್ಷಣೆ ನಡೆಸುವ ಅಗತ್ಯವಿದೆ ಎಂದು ಅಧ್ಯಯನದ ವರದಿ ಹೇಳಿದೆ.

English summary
The US may have to endure social distancing measures such as stay-at-home orders and school closures -- until 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X