• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಷ್ಯಾ.!

|

ಮಾಸ್ಕೋ, ಮೇ 13: ರಷ್ಯಾದಲ್ಲೀಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,32,000 ಕ್ಕೆ ಏರಿದೆ. ಆ ಮೂಲಕ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ರಷ್ಯಾ ಎರಡನೇ ಸ್ಥಾನ ಪಡೆದಿದೆ.

   ತಾಯಿ,ಮಕ್ಕಳ ಜೊತೆ ಸೈಕಲ್ ನಲ್ಲೇ ರಾಜಸ್ಥಾನಕ್ಕೆ ಹೊರಟ ಬಡ ಕುಟುಂಬ | To Rajasthan in Cycle | Migrant Worker

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 10,899 ಜನರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಹಾಗ್ನೋಡಿದ್ರೆ, ಕಳೆದ 10 ದಿನಗಳಿಂದ ರಷ್ಯಾದಲ್ಲಿ ಪ್ರತಿ ದಿನವೂ 10 ಸಾವಿರಕ್ಕಿಂತಲೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

   ಇದಪ್ಪಾ ಸುದ್ದಿ: ಡೆಡ್ಲಿ ಕೊರೊನಾನ ಬಗ್ಗುಬಡಿದು, ಸಾವನ್ನೇ ಗೆದ್ದ 113 ರ ಅಜ್ಜಿ!

   ರಷ್ಯಾದ ಅಧಕ್ಷ ವ್ಲಾದಿಮಿರ್ ಪುಟಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮತ್ತು ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಗೂ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

   ಅಮೇರಿಕಾ ಬಳಿಕ ರಷ್ಯಾದಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದರೂ, ಸಾವಿನ ಸಂಖ್ಯೆ ಮಾತ್ರ ಕಮ್ಮಿ ಇದೆ. ಇಲ್ಲಿಯವರೆಗೂ ರಷ್ಯಾದಲ್ಲಿ 2,116 ಮಂದಿ ಮಾತ್ರ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

   ರಷ್ಯಾದಲ್ಲಿ ಲಾಕ್ ಡೌನ್ ಸಡಿಲಿಕೆ

   ರಷ್ಯಾದಲ್ಲಿ ಲಾಕ್ ಡೌನ್ ಸಡಿಲಿಕೆ

   ಹೆಚ್ಚು ಸೋಂಕಿತರು ಕಂಡುಬಂದಿದ್ದರೂ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ. ಆರು ವಾರಗಳ 'ನಾನ್-ವರ್ಕಿಂಗ್-ಡೇಸ್' ಕೊನೆಗೊಂಡ ಪರಿಣಾಮ, ರಷಿಯನ್ನರು ಮಂಗಳವಾರ ಮುಂಜಾನೆಯಿಂದ ಕೆಲಸ ಪ್ರಾರಂಭಿಸಿದ್ದಾರೆ. ಫ್ಯಾಕ್ಟರಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಮಂಗಳವಾರದಿಂದ ಕಾರ್ಮಿಕರು ಕೆಲಸಕ್ಕೆ ಹಾಜರ್ ಆಗಲಿದ್ದಾರೆ.

   ಸ್ಥಳೀಯ ಅಧಿಕಾರಿಗಳು ನಿರ್ಬಂಧ ಹೇರಬಹುದು

   ಸ್ಥಳೀಯ ಅಧಿಕಾರಿಗಳು ನಿರ್ಬಂಧ ಹೇರಬಹುದು

   ''ಕೊರೊನಾ ವೈರಸ್ ಔಟ್ ಬ್ರೇಕ್ ಏಕಾಏಕಿ ಮುಗಿಯುವುದಿಲ್ಲ. ಅಪಾಯ ಇನ್ನೂ ಇದೆ. ಆದರೆ, ಆರ್ಥಿಕತೆಯ ವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳು ಪುನರಾರಂಭಗೊಳ್ಳಬೇಕು. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸ್ಥಳೀಯ ಅಧಿಕಾರಿಗಳು ಕಠಿಣ ನಿರ್ಬಂಧಗಳನ್ನು ಹೇರಬಹುದು'' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

   ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

   ಮಾಸ್ಕೋದಲ್ಲಿ ಲಾಕ್ ಡೌನ್ ಮುಂದುವರಿಕೆ

   ಮಾಸ್ಕೋದಲ್ಲಿ ಲಾಕ್ ಡೌನ್ ಮುಂದುವರಿಕೆ

   ಹಾಗ್ನೋಡಿದ್ರೆ, ರಷ್ಯಾದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವುದು ರಾಜಧಾನಿ ಮಾಸ್ಕೋ ದಲ್ಲಿ.! ಸಾವಿನ ಪ್ರಮಾಣ ಕೂಡ ಮಾಸ್ಕೋದಲ್ಲಿ ಹೆಚ್ಚಿದೆ. ಹೀಗಾಗಿ, ಮಾಸ್ಕೋ ಮೇಯರ್ ಮೇ 31 ರವರೆಗೂ ಲಾಕ್ ಡೌನ್ ಘೋಷಿಸಿದ್ದಾರೆ. ಡಿಜಿಟಲ್ ಪರ್ಮಿಟ್ ಇಲ್ಲದೆ, ಫೇಸ್ ಮಾಸ್ಕ್ ಮತ್ತು ಗ್ಲೌಸ್ ಇಲ್ಲದೆ ಮಾಸ್ಕೋ ಜನರು ಬೀದಿಗೆ ಇಳಿಯುವಂತಿಲ್ಲ.

   ಅಮೇರಿಕಾದ ಅಂಕಿ-ಅಂಶ

   ಅಮೇರಿಕಾದ ಅಂಕಿ-ಅಂಶ

   ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಕಂಡುಬಂದಿರುವುದು ಅಮೇರಿಕಾದಲ್ಲಿ. ಇಲ್ಲಿಯವರೆಗೂ ಯುಎಸ್ಎ ನಲ್ಲಿ 14,08,636 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 83,425 ಮಂದಿ ಮೃತಪಟ್ಟಿದ್ದಾರೆ. 296,746 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

   'ಈ' ಕಾರಣಕ್ಕಾದರೂ ನೀವು ಕಡ್ಡಾಯವಾಗಿ ಮಾಸ್ಕ್ ಧರಿಸಿ.!

   ವಿಶ್ವದ ಅಂಕಿ-ಅಂಶ

   ವಿಶ್ವದ ಅಂಕಿ-ಅಂಶ

   ವಿಶ್ವದಾದ್ಯಂತ ಇಲ್ಲಿಯವರೆಗೂ 43,55,456 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 2,93,090 ಜನ ಈವರೆಗೂ ಮೃತಪಟ್ಟಿದ್ದರೆ, 16,10,421 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 46,336 ಜನರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

   English summary
   Coronavirus: Russia now has second highest virus case total.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X