ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!

ವಿಶ್ವದಾದ್ಯಂತ 5440 ಮಂದಿಯ ಪ್ರಾಣವನ್ನು ನುಂಗಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಆಗಷ್ಟೇ ಜಗತ್ತಿಗೆ ಕಾಲಿಟ್ಟ ಹಸಗೂಸನ್ನೂ ಬಿಟ್ಟಿಲ್ಲ.

ವಯಸ್ಸಿನ ಭೇದವಿಲ್ಲದೆ ಸಾಂಕ್ರಾಮಿಕ ಪಿಡುಗಾಗಿ ಇಡೀ ವಿಶ್ವದಲ್ಲಿ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕು ಆಗಷ್ಟೇ ತಾಯಿಯ ಗರ್ಭದಿಂದ ಹೊರಬಂದು, ಕಣ್ಬಿಟ್ಟ ಕಂದಮ್ಮನಿಗೂ ತಗುಲಿದೆ.

ಯು.ಕೆನಲ್ಲಿರುವ ನಾರ್ತ್ ಮಿಡಲ್ಸೆಕ್ಸ್ ಆಸ್ಪತ್ರೆಯಲ್ಲಿ ಜನ್ಮ ತಾಳಿದ ನಿಮಿಷಗಳಲ್ಲೇ ಒಂದು ಮಗುವಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಆ ಮೂಲಕ ಈ ಮಾರಕ ಕಾಯಿಲೆಗೆ ತುತ್ತಾದ ಅತಿ ಕಿರಿಯ ರೋಗಿ ಎಂಬ ಹಣೆಪಟ್ಟಿ ಆ ಮಗುವಿಗೆ ಲಭಿಸಿದೆ.

ಕಂದಮ್ಮನಿಗೂ ಕೋವಿಡ್-19

ಕಂದಮ್ಮನಿಗೂ ಕೋವಿಡ್-19

ಗರ್ಭಿಣಿಯಾಗಿದ್ದಾಗಲೇ ನ್ಯೂಮೋನಿಯಾದಿಂದ ಬಳಲಿದ್ದ ಆ ಮಗುವಿನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಆಕೆಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆ ಆಗಿದೆ. ಹೆರಿಗೆಯಾದ ನಿಮಿಷಗಳಲ್ಲೇ ಮಗುವನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಮೆಡಿಕಲ್ ರಿಪೋರ್ಟ್ ನಲ್ಲಿ ಮಗುವಿಗೂ ಕೋವಿಡ್-19 ಪಾಸಿಟಿವ್ ಇರುವುದು ದೃಢವಾಗಿದೆ.

ಸೋಂಕು ತಗುಲಿದ್ದು ಯಾವಾಗ?

ಸೋಂಕು ತಗುಲಿದ್ದು ಯಾವಾಗ?

ತಾಯಿಯ ಗರ್ಭದಲ್ಲಿ ಇರುವಾಗಲೇ, ಮಗುವಿಗೆ ಕೊರೊನಾ ಸೋಂಕು ತಗುಲಿತಾ ಅಥವಾ ಹೆರಿಗೆ ಸಮಯದಲ್ಲಿ ಕೊರೊನಾ ಸೋಂಕು ತಗುಲಿತಾ ಎಂಬುದರ ಬಗ್ಗೆ ವೈದ್ಯರು ಪರಿಶೀಲಿಸುತ್ತಿದ್ದಾರೆ. ಸದ್ಯ ಮಗು ಮತ್ತು ತಾಯಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯು.ಕೆನಲ್ಲಿ ಕೊರೊನಾ ಕೇಸ್ ಗಳೆಷ್ಟು?

ಯು.ಕೆನಲ್ಲಿ ಕೊರೊನಾ ಕೇಸ್ ಗಳೆಷ್ಟು?

ಯು.ಕೆ ನಲ್ಲಿ ಇಲ್ಲಿಯವರೆಗೂ 798 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 11 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗುಣಮುಖರಾಗಿದ್ದಾರೆ.

72,553 ಮಂದಿ ಗುಣಮುಖ

72,553 ಮಂದಿ ಗುಣಮುಖ

ವಿಶ್ವದಾದ್ಯಂತ ಇಲ್ಲಿಯವರೆಗೂ 145,993 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 5440 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಪ್ರಾಣಬಿಟ್ಟಿದ್ದಾರೆ. 72,553 ಮಂದಿ ಸಾವನ್ನೇ ಗೆದ್ದು ಗುಣಮುಖರಾಗಿದ್ದಾರೆ. 6,082 ಮಂದಿ ಈಗಲೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+