• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದಿಂದ ಬದಲಾದ ಜಸ್ಟಿನ್ ಬೀಬರ್ 2020 ಮ್ಯೂಸಿಕ್ ಟೂರ್

|

ಆಟ್ವಾ (ಕೆನಡಾ), ಏಪ್ರಿಲ್ 02: ಖ್ಯಾತ ಗಾಯಕ, ಗೀತರಚನೆಕಾರ ಜಸ್ಟಿನ್ ಬೀಬರ್ ತನ್ನ 2020 ಮ್ಯೂಸಿಕ್ ಟೂರ್ ವೇಳಾಪಟ್ಟಿ ಬದಲಾಗಿರುವ ಬಗ್ಗೆ ತಿಳಿಸಿದ್ದಾರೆ. ಕೊರೊನಾ ವೈರಸ್‌ನಿಂದ ಜಸ್ಟಿನ್ ಬೀಬರ್ ಈ ವರ್ಷದ ತಮ್ಮ ಮ್ಯೂಸಿಕ್ ಟೂರ್ ಬದಲಾಯಿಸಿಕೊಂಡಿದ್ದಾರೆ.

ನಿನ್ನೆ ತಮ್ಮ ಮ್ಯೂಸಿಕ್ ಟೂರ್‌ ಶೆಡ್ಯೂಲ್ ಬದಲಾಗಿರುವ ಸಂಗತಿಯನ್ನು ಜಸ್ಟಿನ್ ಬೀಬರ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಜನರ ಆರೋಗ್ಯ ಬಹಳ ಮುಖ್ಯವಾಗಿದೆ ತಾನು ಅದಕ್ಕೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ಜನರಿಗೆ ಸುರಕ್ಷಿತವಾಗಿ ಇರಲು ತಿಳಿಸಿದ್ದಾರೆ.

ಕೊರೊನಾಗೆ ಬಲಿ: 5 ಸಾವಿರ ಗಡಿ ದಾಟಿದ ಅಮೆರಿಕಾ ಸಾವಿನ ಸಂಖ್ಯೆ

ಜಸ್ಟಿನ್ ತಮ್ಮ ಬ್ಯಾಂಡ್, ಡ್ಯಾನ್ಸರ್ಸ್ ಮತ್ತು ಸಿಬ್ಬಂದಿ ಜೊತೆಗೆ ಅದ್ಭುತ ಪ್ರದರ್ಶನವನ್ನು ಸಿದ್ಧಪಡಿಸಲು ಕಷ್ಟಪಡುತ್ತಾರೆ. ಅದರೊಂದಿಗೆ ಯಾವಾಗಲೂ ಅವರ ಮತ್ತು ತಮ್ಮ ಅಭಿಮಾನಿಗಳ ಆರೋಗ್ಯ, ಯೋಗಕ್ಷೇಮಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ.

''ಎಲ್ಲರಿಗೂ ಸುರಕ್ಷಿತವಾದ ಜಾಗದಲ್ಲಿ ಪ್ರದರ್ಶನ ನೀಡುವ ಅವಕಾಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.'' ಎಂದು ಜಸ್ಟಿನ್ ಬರೆದುಕೊಂಡಿದ್ದಾರೆ. ಈಗಾಗಲೇ ಟಿಕೆಟ್‌ ಪಡೆದುಕೊಂಡವರಿಗೆ ಹಾಗೆಯೇ ಇಟ್ಟುಕೊಳ್ಳಲು ಹೇಳಿದ್ದಾರೆ. ಸದ್ಯದಲ್ಲಿಯೇ ಕಾರ್ಯಕ್ರಮ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ

ವಿಶ್ವದಾದ್ಯಂತ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ 10 ಲಕ್ಷ ದಾಟುತ್ತಿದೆ. ಸದ್ಯ, ಜಗತ್ತಿನ 9 ಲಕ್ಷದ 35 ಸಾವಿರ ಜನರಿಗೆ ಕೊರೊನಾ ವೈರಸ್‌ ಪತ್ತೆಯಾಗಿದೆ. 47 ಸಾವಿರ ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ.

English summary
Coronavirus Singer Justin Bieber postponed all his scheduled 2020 concerts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X