• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ರಣಕೇಕೆ: ಇಟಲಿಯಲ್ಲಿ ಸಾವಿನ ಸಂಖ್ಯೆ 4,825ಕ್ಕೆ ಏರಿಕೆ!

|

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಟಲಿ ಅಕ್ಷರಶಃ ಜರ್ಜರಿತವಾಗಿದೆ. ಮಹಾ ಮಾರಿ ಕೋವಿಡ್-19 ನಿಂದಾಗಿ ಇಟಲಿಯಲ್ಲಿ ದಿನೇ ದಿನೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಮಾರ್ಚ್ 21 ರಂದು ಕೂಡ ಇಟಲಿಯಲ್ಲಿ ಮರಣ ಮೃದಂಗ ಮುಂದುವರೆದಿದ್ದು, ನಿನ್ನೆ ಒಂದೇ ದಿನ 793 ಮಂದಿ ಮೃತಪಟ್ಟಿದ್ದಾರೆ. ಇದು ಇಲ್ಲಿಯವರೆಗೂ ಒಂದು ದಿನದಲ್ಲಿ ಇಟಲಿಯಲ್ಲಿ ಸಂಭವಿಸಿರುವ ಅತಿ ಹೆಚ್ಚು ಸಾವು.!

ಮಾರ್ಚ್ 13 ರಂದು 250 ಮಂದಿ, ಮಾರ್ಚ್ 15 ರಂದು 368 ಮಂದಿ, ಮಾರ್ಚ್ 18 ರಂದು 475 ಮಂದಿ, ಮಾರ್ಚ್ 20 ರಂದು 627 ಮಂದಿಯನ್ನು ಬಲಿ ಪಡೆದಿದ್ದ ಕೊರೊನಾ ವೈರಸ್ ಮಾರ್ಚ್ 21 ರಂದು 793 ಮಂದಿಯ ಪ್ರಾಣವನ್ನು ನುಂಗಿ ಹಾಕಿದೆ.

ಕೊರೊನಾ ಮರಣ ಮೃದಂಗ: ಕಳೆದ 24 ಗಂಟೆಗಳಲ್ಲಿ 1000 ಕ್ಕೂ ಅಧಿಕ ಸಾವು!

ಆ ಮೂಲಕ ಇಟಲಿಯಲ್ಲಿ ಇಲ್ಲಿಯವರೆಗೂ 4825 ಮಂದಿ ಕೋವಿಡ್-19 ನಿಂದ ಜೀವ ಕಳೆದುಕೊಂಡಂತಾಗಿದೆ. ಕೊರೊನಾ ತವರು ಚೀನಾಗಿಂತ ಅತಿ ಹೆಚ್ಚು ಸಾವಿನ ಪ್ರಮಾಣ ಇಟಲಿಯಲ್ಲಿ ದಾಖಲಾಗಿದೆ.

ಇಟಲಿಯ ಅಂಕಿ-ಅಂಶ

ಇಟಲಿಯ ಅಂಕಿ-ಅಂಶ

ನಿನ್ನೆ ಒಂದೇ ದಿನ 6557 ಹೊಸ ಸೋಂಕಿತ ಪ್ರಕರಣ ದಾಖಲಾಗಿರುವುದರಿಂದ ಇಟಲಿಯಲ್ಲೀಗ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 53,578ಕ್ಕೆ ಏರಿದೆ. ಇಟಲಿಯಲ್ಲಿ ಇಲ್ಲಿಯವರೆಗೂ 4825 ಮಂದಿ ಸಾವನ್ನಪ್ಪಿದ್ದು, 2857 ಮಂದಿಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈವರೆಗೂ 6072 ಮಂದಿ ಗುಣಮುಖರಾಗಿರುವುದು ಸಮಾಧಾನಕರ ಸಂಗತಿ.

1624 ಮಂದಿ ಸಾವು

1624 ಮಂದಿ ಸಾವು

ಸ್ಪೇನ್ ನಲ್ಲಿ 285, ಯುಎಸ್ಎ ನಲ್ಲಿ 46, ಇರಾನ್ ನಲ್ಲಿ 123, ಫ್ರಾನ್ಸ್ ನಲ್ಲಿ 112, ಇಟಲಿಯಲ್ಲಿ 793 ಮಂದಿ ಸೇರಿ ವಿಶ್ವದಾದ್ಯಂತ ನಿನ್ನೆ ಒಂದೇ ದಿನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1624. ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ವಿಶ್ವದಾದ್ಯಂತ 13,004 ಮಂದಿ ಮೃತಪಟ್ಟಿದ್ದಾರೆ.

ಯೂರೋಪ್ ನಲ್ಲಿ ಅಧಿಕ ಸೋಂಕು

ಯೂರೋಪ್ ನಲ್ಲಿ ಅಧಿಕ ಸೋಂಕು

ಕೋವಿಡ್-19 ಕೇಂದ್ರ ಸ್ಥಾನ ಆಗಿರುವ ಯೂರೋಪ್ ನಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿದೆ. ಸ್ಪೇನ್, ಸ್ವಿಟ್ಜರ್ ಲ್ಯಾಂಡ್, ಪೋರ್ಚುಗಲ್ ನಲ್ಲಿ ಕೊರೊನಾ ಮಹಾಮಾರಿ ಹೆಚ್ಚು ಜನರನ್ನು ವ್ಯಾಪಿಸುತ್ತಿದೆ. ನೆದರ್ ಲ್ಯಾಂಡ್, ಫಿನ್ ಲ್ಯಾಂಡ್, ಆಸ್ಟ್ರಿಯಾ, ಬೆಲ್ಜಿಯಂ ಮತ್ತು ನಾರ್ವೇ ನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಅಧಿಕವಾಗುತ್ತಿದೆ.

ಇಲ್ಲಿಯವರೆಗೂ ವಿಶ್ವದ ಅಂಕಿ-ಅಂಶ

ಇಲ್ಲಿಯವರೆಗೂ ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತರು : 304,990

ವಿಶ್ವದಾದ್ಯಂತ ಕೊರೊನಾ ಸೋಂಕಿನಿಂತ ಮೃತಪಟ್ಟವರು : 13,004

ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವವರು : 94,800

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು : 9,382

English summary
Coronavirus: Italy deaths surge by 793 in a day, total death toll 4,825 on March 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X