• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಕಿಂಗ್: ಪ್ರಖ್ಯಾತ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಜೀವ ಬೆದರಿಕೆ.!

|

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ವಿಶ್ವದ ದೊಡ್ಡಣ್ಣ ಅಮೇರಿಕಾ ಅಕ್ಷರಶಃ ನಲುಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ 2,45,373 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಈಗಾಗಲೇ 6,095 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 5,421 ಮಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವಾಗಲೇ, ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.

   ಮೂಕ ಪ್ರಾಣಿಗಳಿಗೆ ನೇರವಾದ ಕನ್ನಡದ ಯುವಕರು | Oneindia Kannada

   ಅಮೇರಿಕಾದ ಉನ್ನತ ವೈದ್ಯಕೀಯ ತಜ್ಞ, ಕೊರೊನಾ ವೈರಸ್ ಎಕ್ಸ್ ಪರ್ಟ್ ಡಾ.ಆಂಥೋನಿ ಫೌಸಿಗೆ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ನಲ್ಲಿ ಪ್ರಮುಖರಾಗಿರುವ ಡಾ.ಆಂಥೋನಿ ಫೌಸಿಗೆ ಜೀವ ಬೆದರಿಕೆ ಎದುರಾಗಿದೆ.

   ಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆ

   ಹೀಗಾಗಿ, ಡಾ.ಆಂಥೋನಿ ಫೌಸಿ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಅವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

   ಡಾ.ಆಂಥೋನಿ ಫೌಸಿಗೆ ಬಿಗಿ ಭದ್ರತೆ

   ಡಾ.ಆಂಥೋನಿ ಫೌಸಿಗೆ ಬಿಗಿ ಭದ್ರತೆ

   79 ವರ್ಷದ ಡಾ.ಆಂಥೋನಿ ಫೌಸಿಗೆ ಬೆದರಿಕೆ ಕರೆಗಳು ಬಂದ್ಮೇಲೆ ಅವರಿಗೆ ವೈಯುಕ್ತಿಕ ಭದ್ರತೆ ನೀಡಲು ಎಚ್.ಎಸ್.ಎಸ್ ಅಧಿಕಾರಿಗಳನ್ನು ನಿಯೋಜಿಸುವಂತೆ ಯು.ಎಸ್ ಮಾರ್ಷಲ್ ಸರ್ವೀಸ್ ಗೆ ಆರೋಗ್ಯ ಮತ್ತು ನಾಗರಿಕ ಸೇವೆಯ ಇಲಾಖೆ ಹಾಗೂ ಕಾನೂನು ಜಾರಿ ವಿಭಾಗ ಕೇಳಿಕೊಂಡಿದೆ. ಇನ್ನು ಡಾ.ಆಂಥೋನಿ ಫೌಸಿ ಸೇಫ್ಟಿಗಾಗಿ, ಅವರ ಮನೆಯ ಸುತ್ತ ವಾಷಿಂಗ್ಟನ್, ಡಿಸಿ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯವರು ಸುತ್ತುವರೆದಿದ್ದಾರೆ.

   ಯಾರಿಂದ ಬೆದರಿಕೆ.?

   ಯಾರಿಂದ ಬೆದರಿಕೆ.?

   ಅಮೇರಿಕಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಲವು ಸಲಹೆ, ಸೂಚನೆಗಳನ್ನು ನೀಡುತ್ತಿರುವ ಡಾ.ಆಂಥೋನಿ ಫೌಸಿಗೆ ಬೆದರಿಕೆ ಒಡ್ಡಿರುವವರು ಯಾರು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಡಾ.ಆಂಥೋನಿ ಫೌಸಿ ಕೂಡ ತುಟಿ ಎರಡು ಮಾಡಿಲ್ಲ.

   ಅಮೆರಿಕ: ಚೀನಾ ಮೀರಿಸಿದ ಸಾವಿನ ಸಂಖ್ಯೆ: 1,75,000ಮಂದಿಗೆ ಸೋಂಕು

   ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

   ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

   'ಬೆದರಿಕೆ' ಬಗ್ಗೆ ಟಾಸ್ಕ್ ಫೋರ್ಸ್ ಬ್ರೀಫಿಂಗ್ ಸಂದರ್ಭದಲ್ಲಿ ವರದಿಗಾರರು ಪ್ರಶ್ನೆ ಕೇಳಿದಾಗಲೂ, ಅದಕ್ಕೆ ಡಾ.ಆಂಥೋನಿ ಫೌಸಿ ಉತ್ತರಿಸಲಿಲ್ಲ. ಈ ವೇಳೆ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ''ದೇಶದ ಕೊರೊನಾ ವೈರಸ್ ಎಕ್ಸ್ ಪರ್ಟ್ ಗೆ ಭದ್ರತೆಯ ಅವಶ್ಯಕತೆ ಇಲ್ಲ. ಅವರನ್ನು ಎಲ್ಲರೂ ಪ್ರೀತಿಸುತ್ತಾರೆ. ಒಂದು ವೇಳೆ ಅಟ್ಯಾಕ್ ಆದರೆ, ಬಹಳ ತೊಂದರೆಯುಂಟಾಗುತ್ತದೆ'' ಎಂದರು.

   ಮಾರ್ಗದರ್ಶನ ಮಾಡುತ್ತಿರುವ ಡಾ.ಆಂಥೋನಿ ಫೌಸಿ

   ಮಾರ್ಗದರ್ಶನ ಮಾಡುತ್ತಿರುವ ಡಾ.ಆಂಥೋನಿ ಫೌಸಿ

   ಅಮೇರಿಕಾದಲ್ಲಿ ಕೋವಿಡ್-19 ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಗದರ್ಶನ ಮಾಡುತ್ತಿರುವವರು ಇದೇ ಡಾ.ಆಂಥೋನಿ ಫೌಸಿ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸದೆ ಇದ್ದರೆ, ಯು.ಎಸ್.ಎ ನಲ್ಲಿ ಸುಮಾರು 1-2 ಲಕ್ಷ ಜನ ಸಾವನ್ನಪ್ಪಬಹುದು ಎಂದು ಡಾ.ಆಂಥೋನಿ ಫೌಸಿ ಹೇಳಿದ್ದರು.

   English summary
   Coronavirus Expert Dr Anthony Fauci is facing threats.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X