ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

|
Google Oneindia Kannada News

ಬೀಜಿಂಗ್, ಮಾರ್ಚ್ 19: ಕೊರೊನಾ ವೈರಸ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಡೆಡ್ಲಿ ಕೊರೊನಾ ವೈರಸ್ ನಿಂದ ಮೊದಲ ಹೊಡೆತ ಬಿದ್ದದ್ದು ಇದೇ ವುಹಾನ್ ನಗರಕ್ಕೆ. ಇದೀಗ ಇದೇ ವುಹಾನ್ ನಗರದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ.

ನಿಟ್ಟುಸಿರು ಬಿಡುವ ಸುದ್ದಿ ಏನಂದರೆ, ನಿನ್ನೆ (ಬುಧವಾರ, ಮಾರ್ಚ್ 18) ವುಹಾನ್ ನಗರದಲ್ಲಿ ಒಂದೇ ಒಂದೂ ಹೊಸ ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿಲ್ಲ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!

ಕೊರೊನಾ ವೈರಸ್ ಪತ್ತೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ವುಹಾನ್ ನಗರದಲ್ಲಿ ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣ ದಾಖಲಾಗದಿರುವುದು ಇದೇ ಮೊದಲು!

ನಿನ್ನೆ 34 ಪ್ರಕರಣ ದಾಖಲು

ನಿನ್ನೆ 34 ಪ್ರಕರಣ ದಾಖಲು

ಕೊರೊನಾ ವೈರಸ್ ಸೋಂಕಿಗೆ ಮೊದಲು ಕೇಂದ್ರಬಿಂದು ಆಗಿದ್ದ ಚೀನಾದಲ್ಲಿ ಇದೀಗ ಪರಿಸ್ಥಿತಿ ಸುಧಾರಣೆ ಆಗಿದೆ. ನಿನ್ನೆ (ಬುಧವಾರ, ಮಾರ್ಚ್ 18) ಚೀನಾದಲ್ಲಿ ಒಟ್ಟು 34 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗಿದೆ. ಚೀನಾದ ರಾಜಧಾನಿ ಬೀಜಿಂಗ್ ಒಂದರಲ್ಲೇ 21 ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ.

ಚೀನಾದಲ್ಲಿ ನಿನ್ನೆ ಎಂಟು ಸಾವು

ಚೀನಾದಲ್ಲಿ ನಿನ್ನೆ ಎಂಟು ಸಾವು

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚೀನಾದಲ್ಲಿ ನಿನ್ನೆ (ಬುಧವಾರ, ಮಾರ್ಚ್ 18) ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ

ಚೀನಾದ ಒಟ್ಟು ಅಂಕಿ-ಅಂಶ

ಚೀನಾದ ಒಟ್ಟು ಅಂಕಿ-ಅಂಶ

ಚೀನಾದಲ್ಲಿ ಇಲ್ಲಿಯವರೆಗೂ ಒಟ್ಟು 80,928 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆ ಆಗಿದೆ. ಅದರಲ್ಲಿ ಈಗಾಗಲೇ 3,245 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. 70,420 ಮಂದಿ ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ ಒಟ್ಟು 219,240 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ 8967 ಮಂದಿ ಈಗಾಗಲೇ ಪ್ರಾಣ ಬಿಟ್ಟಿದ್ದಾರೆ. 85,745 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

English summary
Coronavirus: China's Wuhan reports no new infections for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X