ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿಪೀಡಿಯ ವಿರುದ್ಧ 'ಗೊರಿಲ್ಲ' ವಾರ್

By Mahesh
|
Google Oneindia Kannada News

ನ್ಯೂಯಾರ್ಕ್, ಆ.7: ಮುಕ್ತ ವಿಶ್ವಕೋಶ ವಿಕಿಪೀಡಿಯ ವಿರುದ್ಧ ಇಂಡೋನೇಷಿಯಾದ ಗೊರಿಲ್ಲ 'ವಾರ್' ಡಿಕ್ಲೇರ್ ಮಾಡಿದೆ. ಇದೇನು ಮಂಗನ ಚೇಷ್ಟೇ ಎಂದು ಹುಬ್ಬೇರಿಸಬೇಡಿ. ವಿಕಿಪೀಡಿಯ ವಿರುದ್ಧ ಚಿತ್ರವೊಂದರ ಕಾಪಿರೈಟ್ ಗಾಗಿ ಕಾನೂನು ಹೋರಾಟ ಆರಂಭವಾಗಿದೆ.

ಮಂಗ ಚೇಷ್ಟೆಗೆ ಕೊನೆಯಿಲ್ಲ ಎಂಬುದು ಸಾಮಾನ್ಯವಾದ ಲೇವಡಿ. ಆದರೆ, ಇದು ಮಂಗ ಚೇಷ್ಟೆಯಲ್ಲ. ಜಗತ್ ಪ್ರಸಿದ್ಧವಾದ ವಿಕೀಪೀಡಿಯಾ ವಿರುದ್ಧ ಗೊರಿಲ್ಲ ಒಂದು ಕಾಪಿರೈಟ್ (ಹಕ್ಕುಸ್ವಾಮ್ಯತೆ)ನಡಿ ಕಾನೂನು ಹೋರಾಟ ಆರಂಭಿಸಿದೆ.

ವಿಕೀಪೀಡಿಯಾ ವಿರುದ್ಧ ಗೊರಿಲ್ಲ ಒಂದು ಕಾಪಿರೈಟ್ (ಹಕ್ಕುಸ್ವಾಮ್ಯತೆ)ನಡಿ ಕಾನೂನು ಹೋರಾಟ ಆರಂಭಿಸಿದೆ. 2011ರಲ್ಲಿ ಗೊರಿಲ್ಲ ಕ್ಲಿಕ್ಕಿಸಿಕೊಂಡ ಫೋಟೋವನ್ನು ವಿಕೀಪೀಡಿಯಾ ಪ್ರಕಟಿಸಿತ್ತು. ಆದರೆ, ಇದಕ್ಕೂ ಮೊದಲು ಚಿತ್ರ ತೆಗೆದ ಫೋಟೋ ಗ್ರಾಫರ್‌ನ ಅನುಮತಿ ಪಡೆದಿರಲಿಲ್ಲ ಎಂಬ ಅಪವಾದ ಕೇಳಿ ಬಂದಿದೆ.

Should the monkey have the selfie copyright? Controversy snowballs

ಆದರೆ, ಈ ಫೋಟೋ ಕ್ಲಿಕ್ಕಿಸಿರುವುದು ಮನುಷ್ಯರಲ್ಲ. ಗೊರಿಲ್ಲ(macaque)ವೇ ತೆಗೆದುಕೊಂಡ ಸೆಲ್ಫಿ ಫೋಟೊ ಇದಾಗಿದೆ. ಹೀಗಾಗಿ ಹಕ್ಕು ಸ್ವಾಮ್ಯತೆ ಪಡೆಯುವ ಅಗತ್ಯವಿಲ್ಲ ಎಂದು ವಿಕೀಪೀಡಿಯ ಪ್ರತಿಪಾದಿಸಿದೆ. ಡೇವಿಡ್ ಸ್ಲ್ಯಾಟರ್ ಎಂಬುವರು ಮೃಗಾಲಯದಲ್ಲಿ ಫೋಟೋ ತೆಗೆಯುತ್ತಿದ್ದಾಗ ಫೋಸುಕೊಟ್ಟ ಈ ಗೊರಿಲ್ಲ ಕೆಲ ಕ್ಷಣಗಳಲ್ಲೇ ಕ್ಯಾಮೆರಾ ಕಸಿದುಕೊಂಡು ಮಂಗಚೇಷ್ಟೆ ಆರಂಭಿಸಿತು.

ಆಗ ಕ್ಯಾಮೆರಾ ಯಾಂತ್ರಿಕವಾಗಿ ಕ್ಲಿಕ್ ಆಗಿದ್ದು. ಗೊರಿಲ್ಲ ಫೋಟೋ ತುಂಬಾ ಕ್ಲೋಸಫ್ ಆಗಿ ಮೂಡಿಬಂದಿದೆ. ಈ ಫೋಟೋಗೆ ಅಂತರ್ಜಾಲದಲ್ಲಿ ಹೆಚ್ಚು ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಫೋಟೋ ಗ್ರಾಫರ್ ಡೇವಿಡ್‌ಸ್ಲ್ಯಾಟರ್ ಹಕ್ಕು ಸ್ವಾಮ್ಯತೆ ಪಡೆಯದೆ ಫೋಟೋ ಬಳಸಿಕೊಂಡು ವಿಕೀಪೀಡಿಯಾ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ

ವಿಕಿಪೀಡಿಯದವರು ಈ ಚಿತ್ರದ ಹಕ್ಕುಸ್ವಾಮ್ಯತೆ ಬಗ್ಗೆ ಗಮನ ಕೊಡದೆ ಸಾರ್ವಜನಿಕವಾಗಿ ಮುಕ್ತವಾಗಿ ಡೌನ್ ಲೋಡ್ ಮಾಡಲು ನೀಡಿದ್ದಾರೆ. ಇದರಿಂದ ನನ್ನ ಗಳಿಕೆಗೆ ಪೆಟ್ಟುಬಿದ್ದಿದೆ. ಹೀಗಾಗಿ ವಿಕಿಪೀಡಿಯ ಸಂಸ್ಥೆಯಿಂದ ಸುಮಾರು 30,000 ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ನಿರೀಕ್ಷಿಸಿದ್ದೇನೆ ಎಂದು ಸ್ಲಾಟರ್ ಹೇಳಿದ್ದಾರೆ. (ಐಎಎನ್ಎಸ್)

English summary
A selfie taken by a black macaque on the Indonesian island of Sulawesi three years back has become a tug of war between Wikipedia and the photographer who claims he is the owner of the selfie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X