ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ

Posted By:
Subscribe to Oneindia Kannada

ಅಮೆರಿಕ ಅಧ್ಯಕ್ಷೀಯ ಚುನಾವಣೆಯಷ್ಟು ಗೊಂದಲಕ್ಕೀಡು ಮಾಡುವಂಥ ಚುನಾವಣೆ ಮತ್ತೊಂದಿಲ್ಲ. ಅಮೆರಿಕದ ಅಧ್ಯಕ್ಷರನ್ನು ಅತ್ಯಂತ ಸರಳವಾಗಿ, ಜನರಿಂದಲೇ ನೇರವಾಗಿ ಆಯ್ಕೆ ಮಾಡುವಂಥ ಅವಕಾಶವಿರುವಾಗ ಎಲೆಕ್ಟೋರಲ್ ಕಾಲೇಜುಗಳ ಮುಖಾಂತರ ಆಯ್ಕೆ ಮಾಡುವ ಅಗತ್ಯವೇನಿದೆ? ಜನಪ್ರಿಯ ಮತ ಮತ್ತು ಚುನಾಯಿತ ಮತಗಳು ಯಾಕೆ ಇರಬೇಕು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದರೆ 1787ರಲ್ಲಿ ನಡೆದ ಫಿಲಡೆಲ್ಫಿಯಾ ಸಾಂವಿಧಾನಿಕ ಸಮ್ಮೇಳನದತ್ತ ನಾವು ಇಣುಕಿಹಾಕಬೇಕು.

ಅಮೆರಿಕದ ಚುನಾವಣೆಯ ಪ್ರಕ್ರಿಯೆ ಹೇಗೆ ನಡೆಯಬೇಕೆಂಬುದನ್ನು ಸಂವಿಧಾನದ ಎರಡನೇ ಅನುಚ್ಛೇದದಲ್ಲಿ ವಿವರಿಸಲಾಗಿದೆ. "ಆಯಾ ರಾಜ್ಯದ ಶಾಸಕಾಂಗ ನಿರ್ದೇಶಿಸಿದಂತೆ, ಸೆನೆಟರ್ ಮತ್ತು ಜನಪ್ರತಿನಿಧಿಗಳ ಸಂಖ್ಯೆಯಷ್ಟು 'ಚುನಾಯಿತ ಪ್ರತಿನಿಧಿ'ಗಳನ್ನು ಆಯ್ಕೆ ಮಾಡಬೇಕು." [ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಸಂಕ್ಷಿಪ್ತವಾಗಿ]

Column: A backgrounder for the US Presidential elections

ಆರಂಭದಲ್ಲಿ ಈ ಚುನಾಯಿತ ಪ್ರತಿನಿಧಿಗಳು ರಾಜಕೀಯ ವ್ಯಕ್ತಿಗಳಾಗಿರಬೇಕಿರಲಿಲ್ಲ ಅಥವಾ ಜನಪ್ರತಿನಿಧಿಯಾಗಿ ಆಯ್ಕೆಯಾಗಿರಬೇಕಿರಲಿಲ್ಲ. ಆದರೆ, ಕಾಲ ಉರುಳಿದಂತೆ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳೇ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದವು. ಈ ಚುನಾಯಿತ ಪ್ರತಿನಿಧಿಗಳಿಗೆ ಜನರು ನೇರವಾಗಿ ಮತ ಹಾಕುತ್ತಾರೆ.

ಜನಪ್ರಿಯ ಮತ : ಅಸಲಿಗೆ, ನವೆಂಬರ್ 8ರಂದು ನಡೆಯಲಿರುವ ಮತದಾನದಲ್ಲಿ ಅರ್ಹ ಮತದಾರರು ನೇರವಾಗಿ ಡೆಮೊಕ್ರೆಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅಥವಾ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ ಮತ ಚಲಾವಣೆ ಮಾಡುತ್ತಿರುವುದಿಲ್ಲ. ಬದಲಿಗೆ, ರಿಪಬ್ಲಿಕನ್ ಮತ್ತು ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಿರುತ್ತಾರೆ. [ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]

ಎಲೆಕ್ಟೋರಲ್ ವೋಟ್ : ಇದು ಮೊದಲ ಹಂತವಾದರೆ, ಎರಡನೇ ಹಂತದಲ್ಲಿ ಮತ ಪಡೆದ ಅಧ್ಯಕ್ಷೀಯ ಚುನಾಯಿತ ಪ್ರತಿನಿಧಿಗಳು ಡಿಸೆಂಬರ್ 19ರಂದು ಆಯಾ ರಾಜ್ಯಗಳ ರಾಜಧಾನಿಯಲ್ಲಿ ಭೇಟಿಯಾಗಿ ಅಧಿಕೃತವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಎರಡನೇ ಹಂತದಲ್ಲಿ, ಡಿಸೆಂಬರ್ 19ರಂದು ನಡೆದ ಚುನಾವಣೆಯನ್ನು ಎಲೆಕ್ಟೋರಲ್ ವೋಟ್ ಎಂದು ಕರೆಯುತ್ತಾರೆ.

ಸೆನೆಟರ್ ಗಳು ಮತ್ತು ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿದರೆ ಇವರು 538 ಚುನಾಯಿತ ಪ್ರತಿನಿಧಿಗಳಿಂದ 270ಕ್ಕೂ ಹೆಚ್ಚು ಮತಗಳನ್ನು ಪಡೆದ ವ್ಯಕ್ತಿ ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾಗುತ್ತಾರೆ. ಇಲ್ಲಿ ತಮಾಷೆಯ ಸಂಗತಿಯೆಂದರೆ, ಆಯಾ ರಾಜ್ಯಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆಯುವ ಪಕ್ಷ ಎಲ್ಲ ಮತಗಳನ್ನೂ ಕಬಳಿಸುತ್ತದೆ.

ಉದಾಹರಣೆಗೆ, ನ್ಯೂಯಾರ್ಕ್ ರಾಜ್ಯದಲ್ಲಿ ಇರುವ 29 ಸೀಟುಗಳಲ್ಲಿ 15 ಸೀಟುಗಳನ್ನು ಯಾವುದೊಂದು ಪಕ್ಷ ಗಳಿಸಿದರೆ, ಎಲ್ಲ 29 ಸೀಟುಗಳೂ ಜಯಶಾಲಿಯಾದ ರಾಜಕೀಯ ಪಕ್ಷಕ್ಕೆ ಲಭಿಸುತ್ತವೆ. ಇಂಥ ಪದ್ಧತಿ ಶುರುವಾಗಿದ್ದ 1824ರಲ್ಲಿ. ಆದರೆ, ಮೈನ್ ಮತ್ತು ನೆಬ್ರಾಸ್ಕಾ ರಾಜ್ಯಗಳಲ್ಲಿ ಮಾತ್ರ ಈ ಪದ್ಧತಿ ಜಾರಿಯಲ್ಲಿಲ್ಲ. ಗೆದ್ದವನಿಗೆ ಎಲ್ಲ ಮತಗಳೂ ಎಂಬ ಲಾಜಿಕ್ಕು ಸರಿಯಲ್ಲ ಎಂಬುದು ಆ ರಾಜ್ಯಗಳ ಅಭಿಮತ.

ಒಂದು ವೇಳೆ ಯಾವುದೇ ಅಭ್ಯರ್ಥಿಗೆ ಬಹುಮತ ದೊರೆಯಲಿದ್ದರೆ ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್ ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡಿದರೆ, ಸೆನೆಟ್ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಅಮೆರಿಕ ಅಧ್ಯಕ್ಷ ಯಾರಾಗಲಿದ್ದಾರೆ ಎಂಬುದು ಜನವರಿ 2, 2017ರಂದು ತಿಳಿದುಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prima facie, the US system of Presidential elections will appear to be labyrinthine. Why did they have to have a peculiar system for electing their President when they could have had a simpler way of choosing him or her through direct universal suffrage or indirectly through their 51 states?
Please Wait while comments are loading...