Cobra Pakoda: ಇಲ್ಲಿ ಸಿಗುತ್ತೆ ನಾಗರಹಾವಿನ ಪಕೋಡಾ: ರಕ್ತಕ್ಕೂ ಬೇಡಿಕೆ ಜಾಸ್ತಿ
ನಮ್ಮ ಭಾರತ ದೇಶದಲ್ಲಿ ಹಲವಾರು ಬಗೆ ಬಗೆಯ ಖಾದ್ಯಗಳು ಸವಿಯಲು ಸಿಗುತ್ತವೆ. ಮಾಂಸಾಹಾರ ಹಾಗೂ ಸಸ್ಯಾಹಾರ ಎರಡಕ್ಕೂ ಬೇಡಿಕೆ ಅಧಿಕ. ಆದರೆ ನಮ್ಮಲ್ಲಿ ವಿಷ ಜೀವಿಗಳಿಂದ ಆಹಾರವನ್ನು ತಯಾರಿಸಲಾಗುವುದಿಲ್ಲ. ವಿಷ ಜೀವಿಗಳಿಂದ ಜನ ದೂರವಿರುತ್ತಾರೆ. ಆದರೆ ಹೀಗೊಂದು ದೇಶದಲ್ಲಿ ವಿಷ ಜೀವಿಯೊಂದರ ಪಕೋಡವನ್ನು ತಯಾರಿಸಲಾಗುತ್ತದೆ. ಅಚ್ಚರಿ ಎನಿಸಿದರೂ ಇದು ನಿಜ. ಕೇವಲ ಪಕೋಡ ಮಾತ್ರವಲ್ಲ ಇಲ್ಲಿ ಅದರ ರಕ್ತಕ್ಕೂ ಬೇಡಿಕೆ ಅಧಿಕ. ಹಾಗಾದರೆ ಆ ದೇಶ ಯಾವುದು? ಆಹಾರ ತಯಾರಿಸುವ ಆ ವಿಷ ಜೀವಿ ಯಾವುದು?
ಪ್ರಕೃತಿಯಲ್ಲಿ ಹಲವಾರು ವಿಷ ಜೀವಿಗಳು ಇವೆ. ಇವುಗಳು ಮನುಷ್ಯರಿಗೆ ಕಚ್ಚಿದರೆ ನಿಮಿಷಾರ್ಧದಲ್ಲಿ ಪ್ರಾಣ ಪಕ್ಷ ಹಾರಿ ಬಿಡುತ್ತದೆ. ಹೀಗಿರುವಾಗ ಇಂಡೋನೇಷ್ಯಾದಲ್ಲಿ ನಾಗರಹಾವಿನಿಂದ ತಯಾರಿಸಿದ ಪಕೋಡ ಹಾಗೂ ಅದರ ರಕ್ತವನ್ನು ಸೇವಿಸಲಾಗುತ್ತದೆ. ಇದನ್ನು ಕೇಳಿದರೆ ಒಂದು ಕ್ಷಣ ನಿಮಗೆ ವಾಕರಿಕೆ ಬರಬಹುದು. ಹಾವು ಕಚ್ಚಿದರೆ ಮನುಷ್ಯ ಸಾಯಿತ್ತಾನೆ. ಹೀಗಿರುವಾಗ ಅದನ್ನು ತಿನ್ನಲು ಹೇಗೆ ಸಾಧ್ಯ? ಹಾವಿನ ಪಕೋಡ ತಯಾರಿಸಲಾಗುತ್ತದೆ ಎನ್ನುವ ಸುದ್ದಿ ಸುಳ್ಳು ಎಂದು ನೀವು ಹೇಳಬಹುದು. ಆದರೆ ಇದು ನಿಜ.

ಹೌದು... ಇಂಡೋನೇಷ್ಯದಲ್ಲಿ ಹಾವುಗಳಲ್ಲಿ ಅತ್ಯಂತ ವಿಷಕಾರಿಯಾದ ನಾಗರಹಾವಿನಿಂದ ಆಹಾರ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಇದರ ರಕ್ತವನ್ನು ಹಣ್ಣಿನ ರಸದಂತೆ ಕುಡಿಯುತ್ತಾರೆ ಜನ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೈರಲ್ ವೀಡಿಯೋವನ್ನು kaash_chaudhary ಎಂಬ ಬಳಕೆದಾರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೇಮಸ್ ವ್ಲಾಗೋರ್ನ ಆಕಾಶ್ ಚೌಧರಿ ಅವರು ನಾಗರ ಹಾವಿನ ಪಕೋಡ ತಯಾರಿಸುವ ವೀಡಿಯೋವನ್ನು ಮಾಡಿದ್ದಾರೆ. ವೀಡಿಯೋದಲ್ಲಿ ಅಂಗಡಿಯಲ್ಲಿ ಕೆಲ ಗ್ರಾಹಕರು ನಾಗರಹಾವಿನ ರಕ್ತವನ್ನು ಆರ್ಡರ್ ಮಾಡಿ ಕುಡಿಯುವುದನ್ನು ಕಾಣಬಹುದು.
ರೋಗನಿರೋಧಕ ಶಕ್ತಿ ಹೆಚ್ಚಳ
ಇಂಡೋನೇಷಿಯಾದ ಜಕರ್ತಾದಲ್ಲಿನ ಜನ ನಾಗರಹಾವಿನ ರಕ್ತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ಹೀಗಾಗಿ ಇಲ್ಲಿ ನಾಗರ ಹಾವಿನ ಪಕೋಡ ತುಂಬಾನೇ ಫೇಮಸ್ ಆಗಿದ್ದು ಜನ ಇಷ್ಟಪಟ್ಟು ಇದನ್ನು ತಿನ್ನುತ್ತಾರೆ ಎಂದು ವೀಡಿಯೋದಲ್ಲಿ ವಿವರಿಸಲಾಗಿದೆ.
ಒಂದು ನಾಗರ ಹಾವಿನ ಬೆಲೆ
ಇಲ್ಲಿ ಒಂದು ನಾಗರಹಾವಿನ ಬೆಲೆ ಎರಡು ಮಿಲಿಯನ್ ಇದೆ. ಗ್ರಾಹಕರ ಎದುರೇ ತಯಾರಕ ಹಾವನ್ನು ಕತ್ತರಿಸಿ ರಕ್ತ ತೆಗೆದು ಪಕೋಡ ತಯಾರಿಸಿ ಕೊಡುತ್ತಾನೆ. ಇದು ಇಲ್ಲಿನ ಜನರ ಇಷ್ಟದ ಆಹಾರವೂ ಆಗಿದೆ. ವೀಡಿಯೋದಲ್ಲಿ ಒಂದು ಪಂಜರದಲ್ಲಿ ರಾಶಿ ರಾಶಿ ಹಾವುಗಳು ಇರುವುದನ್ನು ಕಾಣಬಹುದು. ಹಾವಿನ ಮಾಂಸಕ್ಕೆ ಇಂಡೋನೇಷ್ಯದಲ್ಲಿ ಭಾರೀ ಬೇಡಿಕೆ ಇದ್ದು ಇದರಿಂದ ನಾನಾ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ಕತ್ತರಿಸಿದ ಹಾವಿನ ಒಂದು ತುಂಡು ಪಕೋಡದ ಬೆಲೆ ಭಾರತೀಯ ರೂಪಾಯಿಗಳಲ್ಲಿ ಒಂದು ಸಾವಿರ ರೂಪಾಯಿ. ಇದನ್ನು ಇಲ್ಲಿನ ಜನ ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಜೊತೆಗೆ ಆರ್ಡರ್ ಮಾಡಿ ಗಂಟೆಗಟ್ಟಲೆ ಇದಕ್ಕಾಗಿ ಕಾದು ಸೇವಿಸುತ್ತಾರೆ. ಇದರ ಬಗ್ಗೆ ತಿಳಿಯದ ಜನ ಇದರ ರುಚಿ ನೋಡಲು ಬಯಸಿರುವುದು ಇದೆ.
ಭಾರತ ದೇಶದಲ್ಲಿ ಬೆಣ್ಣೆ ದೋಸೆ ಅಥವಾ ಕಬಾಬ್‌ಗಾಗಿ ಜನ ಸರತಿ ಸಾಲಿನಲ್ಲಿ ನಿಲ್ಲೋ ಹಾಗೆ ಇಂಡೋನೇಷಿಯಾದ ಜಕರ್ತಾದಲ್ಲಿ ಜನ ಸರತಿ ಸಾಲಿನಲ್ಲಿ ನಿಂತು ನಾಗರಹಾವಿನ ಪಕೋಡ ಹಾಗೂ ಇತರ ಖಾದ್ಯಗಳನ್ನು ಸವಿಯುತ್ತಾರೆ. ಇದೊಂದು ವಿಭಿನ್ನವಾದ ಖಾದ್ಯವಾಗಿದ್ದರೂ ಸಹಾ ಕೆಲ ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು ಭಾರತದಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.












Click it and Unblock the Notifications