ದಲೈ ಲಾಮಾ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ಚೀನಾ ವಾರ್ನಿಂಗ್
ದಲೈಲಾಮಾ ಅವರು, ಅರುಣಾಚಲ ಪ್ರದೇಶದಲ್ಲಿ ಏ.4ರಿಂದ 13ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.
ಬೀಜಿಂಗ್, ಏಪ್ರಿಲ್ 1: ಶೀಘ್ರದಲ್ಲೇ ಅರುಣಾಚಾಲಕ್ಕೆ ಭೇಟಿ ನೀಡಲಿರುವ ಟಿಬೆಟ್ ನ ಧರ್ಮಗುರು ದಲೈಲಾಮಾ ಅವರನ್ನು ತಡೆಯದಿದ್ದರೆ ಭಾರತ-ಚೀನಾ ನಡುವಿನ ಬಾಂಧವ್ಯಕ್ಕೆ ಭಾರೀ ಧಕ್ಕೆ ಉಂಟಾಗಲಿದೆ ಎಂದು ಚೀನಾದ ವಿದೇಶಾಂಗ ಸಚಿವ ಲು ಕಾಂಗ್ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಅವರು, ಅರುಣಾಚಲ ಪ್ರದೇಶವನ್ನು ಟಿಬೆಟ್ ದಕ್ಷಿಣ ಭಾಗವಿದ್ದಂತೆ ಎಂದು ಪರಿಗಣಿಸಿರುವುದಾಗಿ ತಿಳಿಸಿದ್ದಾರೆ.

ದಲೈಲಾಮಾ ಅವರು, ಅರುಣಾಚಲ ಪ್ರದೇಶದಲ್ಲಿ ಏ.4ರಿಂದ 13ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾದ ಈ ಎಚ್ಚರಿಕೆ ಹೊರಬಿದ್ದಿದೆ.
ಅಂದಹಾಗೆ, ಚೀನಾ ಸರ್ಕಾರದಿಂದ ದಲೈಲಾಮಾ ನಿರ್ಬಂಧಕ್ಕೆ ಈ ರೀತಿ ಎಚ್ಚರಿಕೆ ಬರುತ್ತಿರುವುದು ಈ ತಿಂಗಳಲ್ಲಿ ಇದು ಎರಡನೇ ಬಾರಿ.












Click it and Unblock the Notifications