ಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆ

ನವದೆಹಲಿ, ಅ 4: ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಭಾರತ ತನ್ನ ವಾಯುನೆಲೆಯನ್ನು ಮೇಲ್ದರ್ಜೇಗೇರಿಸುತ್ತಿರುವ ಬೆನ್ನಲ್ಲೇ, ರಾಜಧಾನಿ ದೆಹಲಿಯಿಂದ ಸುಮಾರು 1,350 ಕಿ.ಮೀ ದೂರದಲ್ಲಿರುವ ಟಿಬೆಟ್ ಸ್ವಾಯತ್ತತೆ ಪ್ರದೇಶದಲ್ಲಿರುವ ವಿಮಾನ ನಿಲ್ದಾಣವನ್ನು ಚೀನಾ, ವಾಯುನೆಲೆಯನ್ನಾಗಿ ಪರಿವರ್ತಿಸಿದೆ.

ಟಿಬೆಟಿನ ಲಾಸಾದಲ್ಲಿರುವ ಗೊಂಗರ್ ವಿಮಾನ ನಿಲ್ದಾಣವನ್ನು ಮಿಲಿಟರಿ ಬೇಸ್ ಆಗಿ ಪರಿವರ್ತಿಸಿಕೊಳ್ಳುವ ಮೂಲಕ ಉಪಖಂಡದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಚೀನಾ ಮುಂದಾಗಿದೆ. ಜೊತೆಗೆ, 36 ಫೈಟರ್ ವಿಮಾನಗಳನ್ನು ಇಲ್ಲಿ ಸನ್ನದ್ದ ಸ್ಥಿತಿಯಲ್ಲಿ ನಿಯೋಜಿಸಿದೆ.

ಈ ಭಾಗದ ಜನರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲು ನಿರ್ಮಾಣಗೊಂಡಿದ್ದ ಈ ವಿಮಾನ ನಿಲ್ದಾಣವನ್ನು ಬಾಂಬ್ ನಿರೋಧಕ ತಾಣವನ್ನಾಗಿ ಚೀನಾ ಪರಿವರ್ತಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ನಾವು ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಾಗಿದ್ದೇವೆ ಎಂದು ಹೇಳಿದೆ.

China turning Tibet airport into military airbase, India concerned

ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿಯಿರುವ ಭಾರತದ ವಾಯುಸೇನೆಯ ಅಧಿಕಾರಿಗಳ ಪ್ರಕಾರ, ವಿಮಾನ ನಿಲ್ದಾಣದಿಂದ ಬಾಂಬ್ ನಿರೋಧಕ ತಾಣದವರೆಗೆ ಚೀನಾ ಈಗಾಗಲೇ ಟ್ಯಾಕ್ಸ್ ಟ್ರ್ಯಾಕ್ ಅನ್ನು ನಿರ್ಮಿಸಿದೆ. ವಿಮಾನ ನಿಲ್ದಾಣದ ಆಸುಪಾಸಿನಲ್ಲಿರುವ ಪರ್ವತ ಶ್ರೇಣಿಯನ್ನು ಬಾಂಬ್ ನಿರೋಧಕ ತಾಣಕ್ಕಾಗಿ ಬಳಸಿಕೊಂಡಿದೆ.

ಕಳೆದ ವರ್ಷದ ಡೊಕ್ಲಾಮ್ ಗಡಿ ವಿವಾದದ ನಂತರ, ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧ ವೃದ್ದಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿತ್ತು. ಈಗ, ಚೀನಾದ ನಡೆ ಶಾಂತಿ ಕದಡುವ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರಷ್ಯಾದ ಗಡಿಯಲ್ಲೂ ಇದೇ ರೀತಿಯ ವಾಯುನೆಲೆಯನ್ನು ನಾವು ನಿರ್ಮಿಸಿದ್ದು, ಟಿಬೆಟ್ ನಲ್ಲಿ ಮಿಲಿಟರಿ ಬೇಸ್ ನಿರ್ಮಿಸಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+