ಅಬ್ಬಬ್ಬಾ... ಅನ್ಯಗ್ರಹದ ಜೀವಿಗಳಿಗೂ ಬಲೆ ಹಾಕಿದ ಚೀನಾ!

Subscribe to Oneindia Kannada

ಬೀಜಿ೦ಗ್, ಫೆಬ್ರವರಿ, 18: ಅನ್ಯ ಗ್ರಹದ ಜೀವಿಗಳು ಭೂಮಿಗೆ ಬರುತ್ತವೆ. ಹಾರುವ ತಟ್ಟೆ ಕಂಡ ದಾಖಲೆಗಳಿವೆ ಎಂಬ ಮಾತುಗಳಿವೆ. ಇದಕ್ಕೆ ಸಂಬಂಧಿಸಿ ಅನೇಕ ಪುಸ್ತಕಗಳನ್ನು ಪ್ರಕಟ ಮಾಡಲಾಗಿದೆ. ಆದರೆ ಇದಕ್ಕೆ ಸ್ಪಷ್ಟವಾದ ಆಧಾರಗಳನ್ನು ಹುಡುಕಲು ವಿಜ್ಞಾನಿಗಳು ಸಾಹಸ ಮಾಡುತ್ತಲೇ ಇದ್ದಾರೆ.

ಇದೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾ ಅನ್ಯಗ್ರಹ ಜೀವಿಗಳ ಪತ್ತೆಗಾಗಿ ಬೃಹತ್ ಟೆಲಿಸ್ಕೋಪ್ ನಿಮಿ೯ಸಿದೆ. ಚೀನಾದ ಗೈಝ ಪ್ರಾಂತ್ಯದಲ್ಲಿ 500 ಮೀಟರ್ ಟೆಲಿಸ್ಕೋಪ್ ನಿರ್ಮಾಣ ಮಾಡಕಲಾಗಿದ್ದು 9 ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.[ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು]

china

ಜನರಿಗೆ ತಲಾ 1 ಲಕ್ಷ ರು. ಪರಿಹಾರ ನೀಡಲಾಗಿದೆ. ಈ ಯೋಜನೆಗೆ ಫಾಸ್ಟ್ ಎ೦ದು ಹೆಸರಿಟ್ಟಿರುವ ಚೀನಾ ಹೊಸ ಸಾಹಸಲಕ್ಕೆ ಕೈ ಹಾಕಿದೆ. 2011ರಲ್ಲಿ ಟೆಲಿಸ್ಕೋಪ್ ನಿಮಾ೯ಣ ಕಾಮಗಾರಿ ಆರ೦ಭವಾಗಿದ್ದು, 2014ರ ಸೆಪ್ಟೆ೦ಬರ್‍ನಲ್ಲಿ ಮುಕ್ತಾಯಗೊ೦ಡಿದೆ. ಈ ಟೆಲಿಸ್ಕೋಪ್ ಸುತ್ತ 5 ಕಿಮೀಯಲ್ಲಿರುವ ಎಲ್ಲ ಕುಟುಂಬಗಳಿಗೆ ಸ್ಥಳಾಂತರವಾಗಲು ಸೂಚನೆ ನೀಡಲಾಗಿದೆ.[ಅಪರೂಪದ ಕಪ್ಪುರಂಧ್ರ ಪತ್ತೆ ಮಾಡಿದ ಅಮೆರಿಕದ ವಿಜ್ಞಾನಿ]

ಈ ಟೆಲಿಸ್ಕೋಪ್‍ ನಲ್ಲಿ ತ್ರಿಕೋನಾಕೃತಿಯ ಪ್ಯಾನೆಲ್ ಗಳನ್ನು ಅಳವಡಿಕೆ ಮಾಡಲಾಗಿ ದೆ. ಟೆಲಿಸ್ಕೋಪ್ ಕೆಲಸ ಶುರುಮಾಡಿದ ಮೇಲೆ ಚಲಿಸುವ ಪ್ಯಾನೆಲ್ ಗಳು ಅಬ್ಯ ಗ್ರಹದ ರೇಡಿಯೋ ಸ೦ಕೇತಗಳನ್ನು ಗ್ರಹಿಸಬಲ್ಲವು. ಅಲ್ಲದೇ ಧ್ವನಿಯನ್ನು ಅರಿಯನಬಲ್ಲವು ಎಂದು ಚೀನಾದ ವಿಜ್ಞಾನಿ ನಾನ್ ರೆ೦ಡಾ೦ಗ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In China More than 9,000 Chinese villagers are leaving their homes to make way for aliens - or for the possible echoes of them, at least. It is not a colonization plan from outer space. The Chinese government is relocating the villagers as it finishes building the world's biggest radio telescope, one of whose purposes is to detect signs of extraterrestrial life.
Please Wait while comments are loading...