• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾಗೆ ತೆರಳುವ ಎಲ್ಲ ವಿಮಾನಗಳಿಗೆ ತಾತ್ಕಾಲಿಕ ನಿರ್ಬಂಧ

|
Google Oneindia Kannada News

ನವದೆಹಲಿ, ನವೆಂಬರ್.05: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ವಿದೇಶಗಳಲ್ಲಿ ವಾಸವಿರುವ ಪ್ರಜೆಗಳು ಚೀನಾಗೆ ಪ್ರವೇಶಿಸುವುದಕ್ಕೆ ಅಲ್ಲಿನ ಸರ್ಕಾರವು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ತೀರ್ಮಾನಿಸಿದೆ.

ಭಾರತದಲ್ಲಿರುವ ಎಲ್ಲ ವಿದೇಶಿ ಪ್ರಜೆಗಳು, ಚೀನಾದ ವೀಸಾ ಹಾಗೂ ವಾಸ ಪರವಾನಗಿ ಹೊಂದಿರುವ ಪ್ರಯಾಣಿಕರಿಗೆ ಈ ಆದೇಶ ಅನ್ವಯವಾಗಲಿದೆ. ಭಾರತದ ತೆರಳುವ ಎಲ್ಲಾ ವಿಮಾನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಭಾರತೀಯರಿಗೆ ಕೆಲವು ದೇಶಗಳು ಇನ್ನೂ ಪ್ರವೇಶ ನಿರ್ಬಂಧಿಸಿವೆ: ಹರ್ದೀಪ್‌ ಸಿಂಗ್ ಭಾರತೀಯರಿಗೆ ಕೆಲವು ದೇಶಗಳು ಇನ್ನೂ ಪ್ರವೇಶ ನಿರ್ಬಂಧಿಸಿವೆ: ಹರ್ದೀಪ್‌ ಸಿಂಗ್

"ಭಾರತದ ಚೀನೀ ರಾಯಭಾರ ಕಚೇರಿ ಮತ್ತು ರಾಯಭಾರಿಗಳು ಕೂಡಾ ವೀಸಾ ಅಥವಾ ನಿವಾಸ ಪರವಾನಗಿಗಳನ್ನು ಹೊಂದಿರುವವರಿಗೆ ಆರೋಗ್ಯ ಘೋಷಣೆ ನಮೂನೆ ನೀಡುವುದಕ್ಕೆ ಸಾಧ್ಯವಿಲ್ಲ" ಎಂದು ಚೀನಾದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.


ತುರ್ತು ಪ್ರವೇಶಕ್ಕೆ ಮಾತ್ರ ಅವಕಾಶ:

ಚೀನಾದ ರಾಜತಾಂತ್ರಿಕ ಕಾರ್ಯ, ಸೇವೆ, ಸೌಜನ್ಯ ಮತ್ತು ಸಿ ವಿಭಾಗದ ವೀಸಾಗಳನ್ನು ಹೊಂದಿರುವವರಿಗೆ ಆದೇಶ ಅನ್ವಯಿಸುವುದಿಲ್ಲ. ತುರ್ತು ಸೇವೆ ಅಥವಾ ಮಾನವೀಯ ದೃಷ್ಟಿಯಿಂದ ಅಂಥ ಪ್ರಯಾಣಿಕರಿಗೆ ಚೀನಾ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ನವೆಂಬರ್.03ರಿಂದಲೇ ಈ ಉದ್ದೇಶಗಳಿಗೆ ಆಗಮಿಸುವ ಪ್ರಯಾಣಿಕರಿಗೆ ವೀಸಾ ನೀಡಲಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಈ ಮೊದಲೇ ನೀಡಿದ್ದ ವೀಸಾಗಳನ್ನು ಹೊಂದಿರುವವರಿಗೆ ಮಾತ್ರ ಚೀನಾ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಯ್ದ ವಿಭಾಗಗಳಲ್ಲಿ ಅಗತ್ಯವಿರುವ ಪ್ರಯಾಣಿಕರಿಗೆ ನವೆಂಬರ್.03ರಿಂದ ಈಚೆಗೆ ವೀಸಾಗಳನ್ನು ನೀಡಲಾಗಿದ್ದು, ನವೆಂಬರ್.03ರ ನಂತರ ವೀಸಾ ಪಡೆದುಕೊಂಡಿರುವ ಪ್ರಯಾಣಿಕರು ಚೀನಾಗೆ ಪ್ರಯಾಣ ಬೆಳೆಸುವುದಕ್ಕೆ ಅನುಮತಿ ನೀಡಲಾಗಿದೆ.

   BJP ಯುವ ಮೋರ್ಚಾ ಕಾರ್ಯಕರ್ತರ ಹೋರಾಟ!! | Arnab Goswami | Oneindia Kannada

   ಕೊರೊನಾವೈರಸ್ ಸೋಂಕು ಹರಡುವಿಕೆಯ ತುರ್ತು ಸಂದರ್ಭದಲ್ಲಿ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೊವಿಡ್-19 ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದೆ.

   English summary
   China Suspends All Flights And Only Allow To Enter People Who Get New Visa After Nov.03.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X