ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ಶಾಲೆಗಳನ್ನು ತೆರೆಯದಿರಲು ನಿರ್ಧಾರ

ಬೀಜಿಂಗ್, ಜೂನ್ 12: ಚೀನಾದಲ್ಲಿ ಮತ್ತೆ ಎರಡನೇ ಹಂತದಲ್ಲಿ ಕರೊನಾ ವೈರಸ್ ಹರಡುತ್ತಿದ್ದು, ಒಂದನೇ ತರಗತಿಯಿಂದ 3ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯದೇ ಇರಲು ನಿರ್ಧರಿಸಿದ್ದಾರೆ.

Recommended Video

      Indian stands 4th in the world in corona cases count | Oneindia Kannada

      ಚೀನಾದಲ್ಲಿ 10 ಹೊಸ ಪ್ರಕರಣಗಳು ಪತ್ತೆಯಾಗಿವೆ, ಬೀಜಿಂಗ್‌ನಲ್ಲಿ ಎರಡು ಪ್ರಕರಣಗಳಿವೆ. 56 ದಿನಗಳ ಬಳಿಕ ಗುರುವಾರ ಬೀಜಿಂಗ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.

      ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ರೋಗಿಯಿಂದ ಸೋಂಕು ಹರಡಿದೆ. ಚೀನಾ ಮೀಟ್ ಫುಡ್ ರಿಸರ್ಚ್ ಸೆಂಟರ್‌ನ ಎರಡು ಸಿಬ್ಬಂದಿಗೆ ಸೋಂಕು ತಗುಲಿದೆ.

      China Reports 10 Fresh Coronavirus Cases Two More Detected In Beijing

      ಬೇರೆ ದೇಶಗಳಲ್ಲಿರುವವ ಚೀನಾದವರನ್ನು ಕರೆತರಲು ಅಂತಾರಾಷ್ಟ್ರೀಯ ವಿಮಾನಗಳು ತೆರಳುವುದಿಲ್ಲ, ಎಲ್ಲಾ ವಿಮಾನಗಳನ್ನು ಬೇರೆ ನಗರಗಳಿಗೆ ಕಳುಹಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಬಳಿಕ ಬನ್ನಿ ಎಂದು ಹೇಳಿದೆ.

      ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿ ಶಾಲೆಗಳನ್ನು ತೆರೆಯದಿರಲು ನಿರ್ಧರಿಸಲಾಗಿದೆ.ದೃಢಪಟ್ಟಿರುವ ಕೊರೊನಾ ಸೋಂಕಿತರು ಬೀಜಿಂಗ್‌ನ ಹೊರವಲಯದಲ್ಲಿ ಕೂಡ ಓಡಾಡಿದ್ದರು ಹೀಗಾಗಿ ಯಾರ್ಯಾರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯಲಾಗಿದೆ. ಶುಕ್ರವಾರ ಚೀನಾದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ ಅದರಲ್ಲಿ ಒಬ್ಬರಿಗೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+