ಅಮೆರಿಕ ವಿರುದ್ಧ ಗುಟುರು ಹಾಕಿದ ಚೀನಾ: ಭೀಕರ ಯುದ್ಧಕ್ಕೂ ಸಿದ್ಧತೆ?

ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವೆ ಯಾವುದೂ ಸರಿಯಿಲ್ಲ. ಇಬ್ಬರ ನಡುವಿನ ಕಿತ್ತಾಟ ಈ ಜನ್ಮಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಾ, ಕಿತ್ತಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು ಅಮೆರಿಕ, ತೈವಾನ್‌ಗೆ ಸುಮಾರು 2,838 ಕೋಟಿ ರೂಪಾಯಿ ಸಹಾಯ ನೀಡುವ ಮೂಲಕ ಚೀನಾಗೆ ತಿರುಗೇಟು ನೀಡಿತ್ತು. ಈ ಘಟನೆ ಬೆನ್ನಲ್ಲೇ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ.

ನಿನ್ನೆಯಷ್ಟೇ ಅಮೆರಿಕ ಬೃಹತ್ ಮೊತ್ತದ ನೆರವನ್ನು ತೈವಾನ್‌ಗೆ ಘೋಷಿಸಿದೆ. ಅಂದ್ರೆ 345 ಮಿಲಿಯನ್ ಡಾಲರ್ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 2,838 ಕೋಟಿ ನೆರವು ಘೋಷಿಸಿದೆ. ಹೀಗೆ ಬೃಹತ್ ಮೊತ್ತದ ಮಿಲಿಟರಿ ನೆರವನ್ನ ತೈವಾನ್‌ಗೆ ಘೋಷಿಸಿದ ಹಿನ್ನೆಲೆ ಚೀನಾ ಕೆಂಡವಾಗಿದೆ. ಅಲ್ಲದೆ ತೈವಾನ್ ಅನ್ನ ಅಮೆರಿಕ ಶಸ್ತ್ರಾಸ್ತ್ರಗಳ ಅಂಗಡಿ ಮಾಡಿದೆ. ಇದರಿಂದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಹಾಗೇ ತೈವಾನ್ ಕುರಿತು ಚೀನಾ ವಿಭಿನ್ನ ನಿಲುವು ತಳೆಯುವುದಿಲ್ಲ ಎಂದಿದೆ. ಈ ಮೂಲಕ ತೈವಾನ್ ನಮ್ಮದೇ ಭಾಗ ಎಂದು ಮತ್ತೊಮ್ಮೆ ಸಾರಿದೆ ಚೀನಾ.

China reacts over America military aid to Taiwan

ಚೀನಾ & ತೈವಾನ್ ಒಂದಾಗುತ್ತಾ?

ತೈವಾನ್ ವಿಚಾರದಲ್ಲಿ ಅಮೆರಿಕ ಮತ್ತು ಚೀನಾ ಕಿರಿಕಿರಿಗೆ ಕೊನೆಯೇ ಇಲ್ಲ. ಏಕೆಂದರೆ ಈ ಜಾಗ ನಮ್ಮದು, ಮತ್ತೆ ತೈವಾನ್ ಚೀನಾಗೆ ಸೇರಲಿದೆ ಅನ್ನುತ್ತಿದ್ದಾರೆ ಚೀನಾ ನಾಯಕರು. ಆದರೆ ಇದಕ್ಕೆ ವಿರುದ್ಧವಾಗಿ ಅಮೆರಿಕ ಪದೇ ಪದೆ ತೈವಾನ್ ಜೊತೆ ನಿಲ್ಲುತ್ತಾ, ಚೀನಾಗೂ ಕೋಪ ತರಿಸುತ್ತಿದೆ. ಇದೀಗ ಮತ್ತೊಮ್ಮೆ ತೈವಾನ್ ವಿಚಾರವಾಗಿ ಸ್ಪಷ್ಟ ಮಾತುಗಳಲ್ಲೇ ಎಚ್ಚರಿಕೆ ನೀಡಿರುವ ಚೀನಾ, ಎಂದೆಂದಿಗೂ ತೈವಾನ್ ನಮ್ಮದೇ ಭಾಗ. ನಮ್ಮ ಜಾಗದ ಏಕೀಕರಣ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದೆ. ಚೀನಾ ಮಾತಿನಲ್ಲಿ ಅಮೆರಿಕ ಮತ್ತು ತೈವಾನ್ ಬೆಂಬಲಿಗರಿಗೆ ಎಚ್ಚರಿಕೆ ಸಂದೇಶವಿದೆ ಎಂದು ವಿಮರ್ಶೆ ಮಾಡಲಾಗಿದೆ.

ಅಮೆರಿಕ ನೆರವು ನೀಡುವುದು ಹೇಗೆ?

ಅಮೆರಿಕ ತನ್ನ ಮಿತ್ರ ರಾಷ್ಟ್ರಗಳಿಗೆ ಸಹಾಯ ಮಾಡುತ್ತಾ ಶತ್ರು ರಾಷ್ಟ್ರಗಳನ್ನು ಎಚ್ಚರಿಸುವುದು ಮಾಮೂಲಿ. ಅದರಲ್ಲೂ ಅಮೆರಿಕ ನೆರವು ನೀಡುವುದು ಬಹುತೇಕ ಮಿಲಿಟರಿ ಅಥವಾ ಸೇನಾ ವಿಚಾರದಲ್ಲಿ. ಈಗಲೂ ಅಷ್ಟೇ ತೈವಾನ್ ಸೇನೆಗೆ ಭಾರಿ ಪ್ರಮಾಣದ ನೆರವು ನೀಡಲು ಅಮೆರಿಕ ಮುಂದಾಗಿದೆ. ಇತ್ತೀಚೆಗೆ ಅಮೆರಿಕ ಕಾಂಗ್ರೆಸ್ ಬರೋಬ್ಬರಿ 1 ಬಿಲಿಯನ್ ಡಾಲರ್ ನೆರವನ್ನು ತೈವಾನ್‌ಗೆ ನೀಡಲು ಸಮ್ಮತಿಸಿತ್ತು. ಆ ಮೂಲಕ ಚೀನಾ ವಿರುದ್ಧ ಅಮೆರಿಕ ತಂತ್ರ ಹೆಣೆದಿತ್ತು. ಕೆಲ ತಿಂಗಳ ಹಿಂದಷ್ಟೇ ಭಾರಿ ಪ್ರಮಾಣದ ನೆರವು ನೀಡಿ ₹4000 ಕೋಟಿ ರೂಪಾಯಿ ಘೋಷಣೆ ಮಾಡಿತ್ತು ಅಮೆರಿಕ. ಈಗ ಮತ್ತೆ ತೈವಾನ್‌ಗೆ ಅಮೆರಿಕೆ ನೆರವು ನೀಡಲು ಮುಂದಾಗಿದೆ.

ಮೇ ತಿಂಗಳಲ್ಲೂ ಭರ್ಜರಿ ಗಿಫ್ಟ್!

ಅಮೆರಿಕ & ತೈವಾನ್ ನಡುವೆ ಸಾಕಷ್ಟು ಒಪ್ಪಂದ ನಡೆದಿವೆ. ಈ ಪೈಕಿ F-16V ಫೈಟರ್ ಜೆಟ್ ಅಥವಾ ಯುದ್ಧ ವಿಮಾನಗಳ ಪೂರೈಕೆ ಪ್ರಮುಖ. ಏಕೆಂದರೆ F-16V ಯುದ್ಧ ವಿಮಾನಗಳು ಶತ್ರುಗಳ ಎದೆ ನಡುಗಿಸಬಲ್ಲವು. ಹೀಗಾಗಿಯೇ 66 F-16V ಯುದ್ಧ ವಿಮಾನಗಳನ್ನ ತೈವಾನ್ ಆರ್ಡರ್ ಮಾಡಿದೆ. ಇನ್ನೇನು F-16V ಯುದ್ಧ ವಿಮಾನಗಳು ಅಮೆರಿಕದಿಂದ ತೈವಾನ್ ತೆಕ್ಕೆಗೆ ಸೇರಲಿವೆ. ಹೀಗಾಗಿ ಕಳೆದ ಮೇ ತಿಂಗಳಲ್ಲಿ ತೈವಾನ್‌ಗೆ ಅಮೆರಿಕ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಮೊತ್ತದ ದೊಡ್ಡ ಉಡುಗೊರೆ ನೀಡಲು ಮುಂದಾಗಿತ್ತು. ನಿನ್ನೆ ಮತ್ತೆ 2 ಸಾವಿರದ 800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸೇನಾ ನೆರವು ಘೋಷಿಸಿದೆ.

China reacts over America military aid to Taiwan

ಯುದ್ಧ ನಡೆಯುವ ಭೀತಿ ಶುರುವಾಗಿದೆ

ಚೀನಾ ಸುತ್ತಮುತ್ತಲ ದೇಶಗಳು ಅಮೆರಿಕ ಸಹವಾಸ ಮಾಡಿದ್ರೆ ಸಹಿಸಲ್ಲ. ಅದ್ರಲ್ಲೂ ತೈವಾನ್ ನಮ್ಮದೇ ಜಾಗ ಎಂದು ಹೇಳಿಕೊಂಡು ಬರುತ್ತಿರುವ ಚೀನಾ, ಅಮೆರಿಕ ಜೊತೆ ತೈವಾನ್ ಸ್ನೇಹ ಬೆಳೆಸಿದರೆ ಉರಿದು ಬೀಳುತ್ತೆ. ಆದರೆ ಈ ಬಾರಿ ಕಿತ್ತಾಟ, ಘರ್ಷಣೆ ಜೋರಾಗಿದೆ. ಪರಿಣಾಮ ತೈವಾನ್ ಸುತ್ತಲೂ ತನ್ನ ಸೇನೆ ನಿಯೋಜನೆ ಮಾಡಿ, ಪ್ರತಿ ಕ್ಷಣವೂ ತೈವಾನ್ ಮೇಲೆ ಹದ್ದಿನ ಕಣ್ಣು ಇಟ್ಟು ಕೂತಿದೆ ಚೀನಾ. ಈ ಸಂದರ್ಭದಲ್ಲಿ ಅಮೆರಿಕ ಎಂಟ್ರಿ ಕೊಟ್ಟು, ಮೇಲಿಂದ ಮೇಲೆ ತೈವಾನ್‌ಗೆ ಬೆಂಬಲ ನೀಡಿದೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ನೆರವು ನೀಡುತ್ತಿರುವುದು ಸಹಜವಾಗಿ ಚೀನಾದ ಕೋಪ ಮತ್ತಷ್ಟು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+