ಚೀನಾದಲ್ಲಿ ಪ್ರಬಲ ಭೂಕಂಪ, 367 ಜನ ಸಾವು
ಬೀಜಿಂಗ್,ಆ.4: ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮವಾಗಿ ಚೀನಾದ ಬೃಹತ್ ಕಟ್ಟಡಗಳು ನೆಲಕ್ಕುರುಳಿವೆ. ಭೂ ಕಂಪನದಿಂದಾಗಿ ಸುಮಾರು 367 ಮಂದಿ ಸಾವಿಗೀಡಾಗಿದ್ದು, 12 ಸಾವಿರ ಮನೆಗಳು ಕುಸಿದು ಬಿದ್ದಿವೆ.
ಚೀನಾದಲ್ಲಿ ನಿನ್ನೆ ಸಂಜೆ 4.30 ಕ್ಕೆ ಪ್ರಬಲ ಭೂಕಂಪನ ಸಂಭವಿಸಿದೆ. ಯೂನಾನ್ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, 367 ಮಂದಿ ಸಾವಿಗೀಡಾಗಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಖಾಸಗಿ ಸುದ್ದಿ ವಾಹಿನಿ Xinhua ವರದಿ ಮಾಡಿದೆ.
ಚೀನಾದ ಯುನಾನ್ ಪ್ರದೇಶದಲ್ಲಿ ಸಂಭವಿಸಿದ ಭೂ ಕಂಪನದಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆ, 6.5 ರಷ್ಟು ದಾಖಲಾಗಿದೆ. ಇದರಿಂದಾಗಿ ಸುಮಾರು 12 ಸಾವಿರಕ್ಕೂ ಹೆಚ್ಚಿನ ಮನೆಗಳು ನೆಲಸಮವಾಗಿವೆ ಎಂದು ತಿಳಿದು ಬಂದಿದೆ.
ಝಯೊಟೊಂಗ್ ನಗರದಲ್ಲಿ 296 ಮಂದಿ ಸಾವನ್ನಪ್ಪಿದ್ದರೆ, ಲೂಡಿಯನ್ ಕೌಂಟಿಯಲ್ಲಿ 1,591 ಮಂದಿಗೆ ತೀವ್ರ ಗಾಯಗಳಾಗಿವೆ. ಹ್ಯೂಜ್ ಕೌಂಟಿಯಲ್ಲಿ 10 ಜನ ಸಾವನ್ನಪ್ಪಿದ್ದು, 97ಜನರಿಗೆ ಗಾಯಗಳಾಗಿವೆ.
ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ಕೂಡ ನೀಡಲಾಗ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. (ಐಎಎನ್ಎಸ್)

ಚೀನಾದಲ್ಲಿ ಪ್ರಬಲ ಭೂಕಂಪ
ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮವಾಗಿ ಚೀನಾದ ಬೃಹತ್ ಕಟ್ಟಡಗಳು ನೆಲಕ್ಕುರುಳಿವೆ. ಭೂ ಕಂಪನದಿಂದಾಗಿ ಸುಮಾರು 367 ಮಂದಿ ಸಾವಿಗೀಡಾಗಿದ್ದು, 12 ಸಾವಿರ ಮನೆಗಳು ಕುಸಿದು ಬಿದ್ದಿವೆ. AP/PTI ಚಿತ್ರ

ಸಾವಿನ ಸಂಖ್ಯೆ ಏರುತ್ತಲೇ ಇದೆ
ಝಯೊಟೊಂಗ್ ನಗರದಲ್ಲಿ 296 ಮಂದಿ ಸಾವನ್ನಪ್ಪಿದ್ದರೆ, ಲೂಡಿಯನ್ ಕೌಂಟಿಯಲ್ಲಿ 1,591 ಮಂದಿಗೆ ತೀವ್ರ ಗಾಯಗಳಾಗಿವೆ. ಹ್ಯೂಜ್ ಕೌಂಟಿಯಲ್ಲಿ 10 ಜನ ಸಾವನ್ನಪ್ಪಿದ್ದು, 97 ಜನರಿಗೆ ಗಾಯಗಳಾಗಿವೆ.
|
ವಿಶ್ವದೆಲ್ಲೆಡೆಯಿಂದ ಸುದ್ದಿಗೆ ಸ್ಪಂದನೆ
ವಿಶ್ವದೆಲ್ಲೆಡೆಯಿಂದ ಸುದ್ದಿಗೆ ಸ್ಪಂದನೆ, ಭೂಕಂಪದ ಆತಂಕ ದೂರಾಗಿಸಲು ಯತ್ನ
|
ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿ
ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಜನರನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಆದರೆ, ಭಾರಿ ಮಳೆ ಇರುವ ಕಾರಣ ರಕ್ಷಣಾ ಕಾರ್ಯ ವಿಳಂಬಗೊಂಡಿದೆ.
|
ಭೂಕಂಪದ ಬಗ್ಗೆ ಚೆಕ್ ಲಿಸ್ಟ್
ಚೀನಾದ ಭೂಕಂಪದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 381ಕ್ಕೇರಿಕೆ ಎಂದು ಟ್ವೀಟ್
|
ವಿಪತ್ತು ನಿರ್ವಹಣೆ ಕಾರ್ಯಕ್ಕೆ ಕರೆ
ದೇಶದೆಲ್ಲೆಡೆಯಿಂದ ವಿಪತ್ತು ನಿರ್ವಹಣೆ ತಂಡಗಳನ್ನು ಕರೆಸಿಕೊಳ್ಳಲಾಗುತ್ತಿದೆ
|
ಚೀನಾ ದುರಂತದ ಮತ್ತೊಂದು ಚಿತ್ರ
ಚೀನಾ ದುರಂತದ ಮತ್ತೊಂದು ಚಿತ್ರ ಹಾಗೂ ರಕ್ಷಣಾ ಕಾರ್ಯ ನಿರತ ಸಿಬ್ಬಂದಿ












Click it and Unblock the Notifications