ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವವಿವಾಹಿತೆರಿಗೆ ಯಾವಾಗ ಗರ್ಭಿಣಿಯಾಗ್ತೀರಾ ಎಂದು ಪ್ರಶ್ನಿಸುತ್ತಿರುವ ಚೀನಾ ಅಧಿಕಾರಿಗಳು

|
Google Oneindia Kannada News

ಜನಸಂಖ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳಿಗೆ ಹೆಸರಾಗಿರುವ ಚೀನಾ ಈಗ ವಿಚಿತ್ರ ಸೂತ್ರವೊಂದನ್ನು ಅಳವಡಿಸಿಕೊಳ್ಳುತ್ತಿದೆ. ವರದಿಯ ಪ್ರಕಾರ, ಚೀನಾದ ಅಧಿಕಾರಿಗಳು ನವ ದಂಪತಿಗಳಿಗೆ ಕರೆ ಮಾಡುತ್ತಿದ್ದಾರೆ. ನವವಿವಾಹಿತ ದಂಪತಿಗಳು ಮಗುವಿಗೆ ಯಾವಾಗ ಜನ್ಮ ನೀಡುತ್ತಾರೆ ಎಂದು ಕೇಳಲಾಗುತ್ತಿದೆ ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಸಾವಿರಾರು ಮಂದಿ ಇಂತಹ ಕರೆಗಳು ಬರುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಪೋಸ್ಟ್ ವೈರಲ್ ಆದ ನಂತರ, ಚೀನಾದ ಆಡಳಿತವು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಆ ಪೋಸ್ಟ್ ತೆಗೆದುಹಾಕಲಾಗಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಚೀನಾದ ನಾನ್ಜಿಂಗ್ ಸಿಟಿಯ ಸ್ಥಳೀಯ ಆಡಳಿತದಿಂದ ಮಹಿಳೆಯೊಬ್ಬರು ಕರೆ ಸ್ವೀಕರಿಸಿದರು. ಈ ನವವಿವಾಹಿತ ಮಹಿಳೆ ಗರ್ಭಿಣಿಯಾಗಿದ್ದೀರಾ ಎಂದು ಕೇಳಲಾಯಿತು. ಗರ್ಭಿಣಿ ಆಗಿಲ್ಲವೆಂದರೆ, ಎಷ್ಟು ಕಾಲ? ಬೇಕಾಗುತ್ತದೆ ಇಂತಹ ಪ್ರಶ್ನೆಗಳನ್ನು ಕೇಳಲಾಗಿದೆ. ಇದನ್ನು ಮಹಿಳೆಯ ಸಹೋದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಉಲ್ಲೇಖಿಸಿದ್ದಾರೆ. ನವವಿವಾಹಿತರು ಒಂದು ವರ್ಷದೊಳಗೆ ಗರ್ಭಿಣಿಯಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದು ಕರೆ ಮಾಡುವ ಅಧಿಕಾರಿ ಹೇಳಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಕರೆ ಮಾಡಿ ನವೀಕರಣಗಳನ್ನು ಪಡೆಯುವಂತೆ ಆದೇಶ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

China officials dial newlyweds asks couple to get pregnant within a Year

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್
ಅದೇ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮತ್ತೊಬ್ಬರು ಬರೆದುಕೊಂಡಿದ್ದು, 'ನಾನು ಕಳೆದ ವರ್ಷ ಆಗಸ್ಟ್‌ನಲ್ಲಿ ಮದುವೆಯಾಗಿದ್ದೇನೆ. ಅಂದಿನಿಂದ ನನಗೆ ನಿರಂತರ ಕರೆಗಳು ಮತ್ತು ವಿಚಾರಣೆಗಳು ಬರುತ್ತಿವೆ. ನಮಗೆ ಮಗು ಯಾವಾಗ ಆಗುತ್ತದೆ ಎಂದು ನನ್ನನ್ನು ಕೇಳಲಾಗುತ್ತದೆ. ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾ ಕೆಲವು ವರ್ಷಗಳಿಂದ ಒಂದು ಮಗುವಿನ ನೀತಿಯನ್ನು ಅಳವಡಿಸಿಕೊಂಡಿದೆ . ಇದರಿಂದಾಗಿ ಚೀನಾದಲ್ಲಿ ಯುವಕರ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ.

China officials dial newlyweds asks couple to get pregnant within a Year

ಇತ್ತೀಚೆಗೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜನನ ಪ್ರಮಾಣವನ್ನು ವೇಗಗೊಳಿಸಲು ಮತ್ತು ದೇಶದ ಜನಸಂಖ್ಯೆಯ ಬೆಳವಣಿಗೆಯನ್ನು ಸುಧಾರಿಸಲು ನೀತಿಯನ್ನು ಮಾಡಲಾಗುವುದು ಎಂದು ಹೇಳಿದರು. ತನ್ನ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಚೀನಾ ಹಲವು ಬಾರಿ ಒಪ್ಪಿಕೊಂಡಿದೆ. ಆರ್ಥಿಕತೆಯನ್ನು ಸುಧಾರಿಸಲು ಹೆಚ್ಚಿನ ಸಂಖ್ಯೆಯ ಮಾನವ ಸಂಪನ್ಮೂಲಗಳ ಅಗತ್ಯವಿದೆ ಎಂದು ಚೀನಾ ಸರ್ಕಾರವು ಹೇಳಿಕೊಳ್ಳುತ್ತದೆ.

English summary
China officials dial newlyweds: When is the baby arriving Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X