ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿ ಸಮೀಪವಿರುವ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

|
Google Oneindia Kannada News

ಬೀಜಿಂಗ್, ಜೂ. 25: ಅರುಣಾಚಲ ಗಡಿ ಸಮೀಪದಲ್ಲಿಯೇ ಟಿಬೆಟ್ ನ ಹಿಮಾಲಯ ಪ್ರದೇಶದಲ್ಲಿ ಚೀನಾ ಶುಕ್ರವಾರ ತನ್ನ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚಾಲನೆ ಮಾಡಿದೆ. ಈ ಬುಲೆಟ್ ರೈಲು ಪ್ರಾಂತೀಯ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪ ಇರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣವಾದ ನೈಂಗ್ಚಿಯನ್ನು ಸಂಪರ್ಕಿಸುತ್ತದೆ ಎಂದು ವರದಿಯಾಗಿದೆ.

ಜುಲೈ 1 ರಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಯ ಶತಮಾನೋತ್ಸವಕ್ಕೂ ಮುನ್ನ ಸಿಚುವಾನ್-ಟಿಬೆಟ್ ರೈಲ್ವೆಯ 435.5 ಕಿ.ಮೀ ಲಾಸಾ-ನಿಂಗ್ಚಿ ವಿಭಾಗವನ್ನು ಉದ್ಘಾಟಿಸಲಾಗಿದೆ.

ಲಡಾಖ್ ವಿವಾದ: ಭಾರತ-ಚೀನಾ ನಡುವೆ ರಾಜತಾಂತ್ರಿಕ ಸಭೆಲಡಾಖ್ ವಿವಾದ: ಭಾರತ-ಚೀನಾ ನಡುವೆ ರಾಜತಾಂತ್ರಿಕ ಸಭೆ

ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಮೊದಲ ವಿದ್ಯುದ್ದೀಕೃತ ರೈಲ್ವೆ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಗಿದ್ದು, ಇದು ಲಾಸಾ ಮತ್ತು ನೈಂಗ್ಚಿಯನ್ನು ಸಂಪರ್ಕಿಸುವ ಬುಲೆಟ್ ರೈಲು ಮಾರ್ಗವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

China launches first bullet train in Tibet, near the border with Indias Arunachal Pradesh

ಈ ಬುಲೆಟ್‌ ರೈಲಿನ ವೇಗವು ಗಂಟೆಗೆ 160 ಕಿ.ಮೀ ಆಗಿದೆ. ಇದು ಲಾಸಾ, ಶನ್ನನ್ ಮತ್ತು ನೈಂಗ್ಚಿ ಸೇರಿದಂತೆ ಒಂಬತ್ತು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ಬುಲೆಟ್‌ ರೈಲು ಪ್ರಯಾಣಿಕ ಮತ್ತು ಸರಕು ಸಾಗಣೆಯನ್ನು ನಿಭಾಯಿಸಬಲ್ಲದು ಎಂದು ವರದಿ ತಿಳಿಸಿದೆ.

'ರಸ್ತೆಗಳಿಗೆ ಹೋಲಿಸಿದರೆ, ಲಾಸಾ-ನಿಂಗ್ಚಿ ರೈಲ್ವೆ ಲಾಸಾದಿಂದ ನೈಂಗ್ಚಿಗೆ ಪ್ರಯಾಣದ ಸಮಯವನ್ನು 5 ಗಂಟೆಗಳಿಂದ ಅಂದಾಜು 3.5 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಶನ್ನನ್‌ನಿಂದ ನೈಂಗ್ಚಿಗೆ ಪ್ರಯಾಣದ ಸಮಯವನ್ನು 6 ಗಂಟೆಗಳಿಂದ ಅಂದಾಜು 2 ಗಂಟೆಗಳವರೆಗೆ ಕಡಿತಗೊಳಿಸುತ್ತದೆ,' ಎಂದು ಅದು ಹೇಳಿದೆ.

ಲಿಖಿತ ಒಪ್ಪಂದದ ಬಳಿಕವೂ ಚೀನಾ-ಭಾರತ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣಲಿಖಿತ ಒಪ್ಪಂದದ ಬಳಿಕವೂ ಚೀನಾ-ಭಾರತ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ

ರೈಲು ಮಾರ್ಗವು 47 ಸುರಂಗಗಳು ಮತ್ತು 121 ಸೇತುವೆಗಳ ಮೂಲಕ ಹಾದುಹೋಗುತ್ತದೆ. ಸ್ಥಳೀಯವಾಗಿ ಯಾರ್ಲುಂಗ್ ಜಾಂಗ್ಬೊ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿಯನ್ನು 16 ಬಾರಿ ದಾಟಲಿದೆ. ರೈಲ್ವೆ ಹಳಿಯ ಒಟ್ಟು ಉದ್ದದ ಶೇಕಡ 75 ರಷ್ಟು ಸುರಂಗಗಳು ಮತ್ತು ಸೇತುವೆ ಪ್ರದೇಶವಾಗಿದೆ. ಅಲ್ಲದೆ, 'ಇದು ವಾರ್ಷಿಕ 10 ಮಿಲಿಯನ್ ಟನ್ ಸರಕು ಸಾಗಣೆ ಸಾಮರ್ಥ್ಯವನ್ನು ಹೊಂದಿದೆ. ಇದು ಸರಕುಗಳ ಸಾಗಾಟಕ್ಕೆ ಸಹಾಯ ಮಾಡಲಿದೆ. ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ಜನರ ಜೀವನವನ್ನು ಸುಧಾರಿಸುತ್ತದೆ,' ಎಂದು ವರದಿ ಉಲ್ಲೇಖಿಸಿದೆ.

China launches first bullet train in Tibet, near the border with Indias Arunachal Pradesh

ಕಿಂಗ್‌ಹೈ-ಟಿಬೆಟ್ ರೈಲ್ವೆಯ ನಂತರ ಸಿಚುವಾನ್-ಟಿಬೆಟ್ ರೈಲ್ವೆ ಟಿಬೆಟ್‌ಗೆ ಬರುವ ಎರಡನೇ ರೈಲ್ವೆ ಆಗಲಿದೆ. ನವೆಂಬರ್‌ನಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೊಸ ರೈಲ್ವೆ ಯೋಜನೆಯ ನಿರ್ಮಾಣವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಟಿಬೆಟ್‌ನ ಸಿಚುವಾನ್ ಪ್ರಾಂತ್ಯ ಮತ್ತು ನೈಂಗ್ಚಿಗೆ ಭೇಟಿ ನೀಡಿದ್ದರು. ''ಗಡಿ ಸ್ಥಿರತೆಯನ್ನು ಕಾಪಾಡುವಲ್ಲಿ ಹೊಸ ರೈಲು ಮಾರ್ಗವು ಪ್ರಮುಖ ಪಾತ್ರ ವಹಿಸುತ್ತದೆ,'' ಎಂದು ಹೇಳಿದ್ದರು.

ಸಿಚುವಾನ್-ಟಿಬೆಟ್ ರೈಲ್ವೆ ಜಂಟಿಯಾಗಿ ಸಿಚುವಾನ್ ಪ್ರಾಂತ್ಯದ ರಾಜಧಾನಿ ಚೆಂಗ್ಡೂನಿಂದ ರೈಲು ಯಾನವನ್ನು ಆರಂಭಿಸಿದ್ದು, ಇದು ಯಾನ್ ಮೂಲಕ ಪ್ರಯಾಣಿಸುತ್ತದೆ ಅಲ್ಲದೇ ಕಾಮ್ಡೋ ಮೂಲಕ ಟಿಬೆಟ್ ಪ್ರವೇಶಿಸುತ್ತದೆ. ಅಷ್ಟೇ ಅಲ್ಲದೆ ಚೆಂಗ್ಡೂನಿಂದ ಲಾಸಾದ 48ಗಂಟೆಗಳ ಪ್ರಯಾಣವನ್ನು 13 ಗಂಟೆಯಲ್ಲಿಯೇ ತಲುಪುವಂತೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ನೈಂಗ್ಚಿ ಅರುಣಾಚಲ ಪ್ರದೇಶದ ಗಡಿಯ ಪಕ್ಕದಲ್ಲಿರುವ ಮೆಡೋಗ್ ಪ್ರಾಂತ್ಯದ ನಗರವಾಗಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ. ಇದನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
China on Friday operationalised its first fully electrified bullet train in the remote Himalayan region of Tibet, connecting the provincial capital Lhasa and Nyingchi, a strategically located Tibetan border town close to Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X