• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದೂಗಳಿಗೆ ನೆರವು: ವಿಳಂಬವಾದರೂ ಒಳ್ಳೆ ನಿರ್ಧಾರ ಕೈಗೊಂಡ ಚೀನಾ

|

ನವದೆಹಲಿ, ಆಗಸ್ಟ್ 08: ಜಮ್ಮು ಮತ್ತು ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಅಧಿಕಾರ ರದ್ದುಗೊಳಿಸಿರುವುದು, ಲಡಾಕ್ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶ ಮಾಡಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನಕ್ಕೆ ಚೀನಾ ಬೆಂಬಲವೂ ಸಿಕ್ಕಿಲ್ಲ. ಅಲ್ಲದೆ, ಹಿಮಾಲಯದ ತಪ್ಪಲಿನ ಯಾತ್ರಾ ಸ್ಥಳಕ್ಕೆ ತೆರಳಲು ಚೀನಾ ವೀಸಾ ನೀಡುವುದು ಅನುಮಾನ ಎಂಬ ವರದಿಗೆ ವ್ಯತಿರಿಕ್ತವಾಗಿ ಚೀನಾ ನಡೆದುಕೊಂಡಿದೆ.

ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರೋತ್ಸಾಹ ಧನ

ವಿಳಂಬವಾದರೂ ಭಾರತೀಯ ಯಾತ್ರಾರ್ಥಿಗಳ ಗುಂಪೊಂದಕ್ಕೆ ಚೀನಾ ವೀಸಾ ನೀಡಿದೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಕ್ಕೆ ತೆರಳು ಇದ್ದ ಅಡ್ಡಿ, ಆತಂಕ ಸದ್ಯಕ್ಕೆ ದೂರಾಗಿದ್ದು, ಹಿಂದೂ ಯಾತ್ರಿಗಳ ಗುಂಪು ಈಗಾಗಲೇ ಕೈಲಾಸ ಪರ್ವತದ ಪರಿಕ್ರಮ ಯಾತ್ರೆ ಆರಂಭಿಸಿದೆ.

ಚೀನಾ ಗಡಿ ಪ್ರವೇಶಿಸಿ ಕೈಲಾಸ ಪರ್ವತದ ತಪ್ಪಲಿಗೆ ಹೋಗಬೇಕಾಗಿದ್ದು, ಪ್ರತಿ ವರ್ಷ ನೂರಾರು ಮಂದಿ ಯಾತ್ರಿಗಳು ಕೈಲಾಸ ಮಾನಸ ಸರೋವರ ಪರಿಕ್ರಮ ಯಾತ್ರೆ ಕೈಗೊಳ್ಳುತ್ತಾರೆ.

ಆರ್ಟಿಕಲ್ 370 ರದ್ದು: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ 'ಏಕಾಂಗಿ'

"ಆರ್ಟಿಕಲ್ 370 ರದ್ದು ಪಡಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಿಸಿದ್ದು, ಲಡಾಕ್ ಮೇಲೆ ಕೇಂದ್ರ ಸರ್ಕಾರ ನೇರ ಅಧಿಕಾರ ಹೊಂದಿದ್ದರ ಬಗ್ಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ, ಕೈಲಾಸ ಮಾನಸ ಸರೋವರ ಯಾತ್ರಿಗಳಿಗೆ ವೀಸಾ ದೊರೆಯುವುದು ಕಷ್ಟ" ಎಂಬ ಸುದ್ದಿ ಬಂದಿತ್ತು. ಆದರೆ, ಚೀನಾ ಇದಕ್ಕೆ ವಿರುದ್ಧವಾಗಿ ನಡೆದುಕೊಂಡು ಹಿಂದೂಗಳ ಯಾತ್ರೆಗೆ ನೆರವಾಗಿ ಅಚ್ಚರಿ ಮೂಡಿಸಿದೆ.

ಚೀನಾ-ಭಾರತ ಮಾತುಕತೆ ಫಲಪ್ರದ, ಮೋದಿ ಆಹ್ವಾನ ಸ್ವೀಕಾರ

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂದಿನ ವಾರ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಮೂರು ದಿನಗಳ ಕಾಲ ಚೀನಾದಲ್ಲಿ ಉಳಿಯಲಿದ್ದಾರೆ. ಭಾರತ ಹಾಗೂ ಚೀನಾ ನಡುವಿನ ಅನೌಪಚಾರಿಕ ದ್ವಿಪಕ್ಷೀಯ ಮಾತುಕತೆ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಪ್ರಧಾನಿ ಮೋದಿ ನಡುವಿನ ಚರ್ಚೆ ಅಕ್ಟೋಬರ್ ತಿಂಗಳಿನಲ್ಲಿ ನಿಗದಿಯಾಗಿದೆ.

English summary
China has granted visas for a group of Indian pilgrims for the Kailash Mansarovar yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X