ಚೀನಾದಲ್ಲೂ ಬಿಸಿಯೂಟ ಅವಾಂತರ: 180 ಮಕ್ಕಳು ಅಸ್ವಸ್ಥ

ಚೀನಾದ ಹುನಾನ್ ಪ್ರಾಂತ್ಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಆ ದೇಶಕ್ಕೆ ಹೊಂದಿಕೊಂಡಂತೆ ಬಿಸಿಯೂಟದ ಬದಲು ಮಧ್ಯಾಹ್ನದ ವೇಳೆ ಹಾಲು ಮತ್ತು ಬಿಸ್ಕತ್ತುಗಳನ್ನು ಮಕ್ಕಳಿಗೆ ವಿತರಿಸಲಾಗುತ್ತದೆ. ಆದರೆ ಅಂತಹ ಹಾಲು, ಬಿಸ್ಕತ್ತುಗಳನ್ನು ಸೇವಿಸಿದ 180 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಕ್ಷಿನ್ಹು ಕಂಟ್ರಿ ಪ್ರದೇಶದಲ್ಲಿ ಮೊನ್ನೆ ಹಾಲು, ಬಿಸ್ಕತ್ತು ತಿಂದ ಮಕ್ಕಳು ಒಬ್ಬೊಬ್ಬರಾಗಿ ತಲೆನೋವು, ಹೊಟ್ಟೆ ನೋವು ಎಂದು ಹೇಳುತ್ತಾ ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರಕಾರಿ ಪತ್ರಿಕೆಯೊಂದು ವರದಿ ಮಾಡಿದೆ.
ಈ ಮಕ್ಕಳ ಪೈಕಿ 168 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ 12 ಮಂದಿಯನ್ನು ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಮಕ್ಕಳಿಗೆ ವಿತರಿಸಿದ ಹಾಲು, ಬಿಸ್ಕತ್ತು ಮಾದರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆಗಾಗಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಕಲುಷಿತ ಹಾಲು ಕುಡಿದು ಮಕ್ಕಳು ಅಸ್ವಸ್ಥಗೊಂಡಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications